ನಾನಿ ಲಾಂಗ್ ಹೇರ್ ಬಿಟ್ಟಿರೊದು ಯಾಕ್ ಗೊತ್ತಾ? ಹೌದು, ನಾನಿ ಲಾಂಗ್ ಹೇರ್ ಅನ್ನ ದಿ ಪ್ಯಾರಡೈಸ್ ಚಿತ್ರಕ್ಕಾಗಿಯೇ ಬಿಟ್ಟಿದ್ದಾರೆ. ಈ ಚಿತ್ರದಲ್ಲಿ ಕ್ರಾಂತಿಕಾರಿ ಪಾತ್ರವನ್ನೆ ಮಾಡಿದ್ದಾರೆ.
ನಾನಿ ಲಾಂಗ್ ಹೇರ್ ಲುಕ್
(ಚಿತ್ರ ಕೃಪೆ: ಸಿನಿಮಾ ಟೀಮ್ ಪಿಆರ್ಓ ವಿಡಿಯೋ)
ಈ ಚಿತ್ರದಲ್ಲಿ ನಾನಿಗೆ ಒಂದಲ್ಲ, ಎರಡು ಜಡೆ ಇವೆ. ಈ ಒಂದು ಲುಕ್ ಅಲ್ಲಿಯೇ ಇಡೀ ಚಿತ್ರದಲ್ಲಿ ಕಂಗೊಳಿಸಿದ್ದಾರೆ. ಆದರೆ, ಇಲ್ಲಿ ರಕ್ತದೋಕುಳಿ ಹರಿಯುತ್ತದೆ. ಚಿತ್ರ ತಂಡ ಬಿಟ್ಟಿರೋ ಟೀಸರ್ ಅಲ್ಲಿ ಇದು ಕಾಣಿಸುತ್ತದೆ.
ಈ ಚಿತ್ರವನ್ನ ಶ್ರೀಕಾಂತ್ ಓಡೇಲಾ ಡೈರೆಕ್ಷನ್ ಮಾಡಿದ್ದಾರೆ. ಕಯಾದು ಲೋಹರ್ ಈ ಚಿತ್ರದ ನಾಯಕಿ ಆಗಿದ್ದಾರೆ. ಮೋಹನ್ ಬಾಬು, ಸೋನಾಲಿ ಕುಲಕರ್ಣಿ, ಕೀರ್ತಿ ಸುರೇಶ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ A ಪ್ರಮಾಣ ಪತ್ರ ಬಂದಿದೆ. ಈ ಚಿತ್ರದಲ್ಲಿ 1980 ಕಾಲಘಟ್ಟದ ಕತೆ ಇದೆ. ಸಿಕಂದರಾಬಾದ್ನ ಕೊಳಚೆ ಪ್ರದೇಶದ ವಾಸಿಗಳ ಕತೆ ಇದರಲ್ಲಿದೆ. ತುಳಿತಕ್ಕೆ ಒಳಗಾದ ಬುಡಕಟ್ಟು ಸಮುದಾಯದ ಕತೆ ಇಲ್ಲಿದೆ. ಹೋರಾಟದ ಸ್ಟೋರಿನೂ ಇಲ್ಲಿದೆ.
ನಾನಿ ವಿಭಿನ್ನ ಲುಕ್
(ಚಿತ್ರ ಕೃಪೆ: ಸಿನಿಮಾ ಟೀಮ್ ಪಿಆರ್ಓ ವಿಡಿಯೋ)
ನಾನಿ ಅಭಿನಯದ ದಿ ಪ್ಯಾರಡೈಸ್ ಸಿನಿಮಾದ ರನ್ ಟೈಮ್ ಕೂಡ ಗೊತ್ತಾಗಿದೆ. 2 ಗಂಟೆ 49 ನಿಮಿಷದ ಚಿತ್ರ ಇದಾಗಿದೆ. ಈ ಚಿತ್ರದ ಟ್ರೈಲರ್ ರಿಲೀಸ್ ಏನು ಆಗಿಲ್ಲ. ಆಗೋದು ಇಲ್ಲ.
ಬೆಳ್ಳಿ ತೆರೆ ಮೇಲೇನೆ ಜನ ಎಲ್ಲ ನೋಡಲಿ ಅಂತ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವಿಷಯವನ್ನ ಸ್ವತಃ ನಾನಿ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ. ಹಾಗೆ ಈ ತೆಲುಗು ಚಿತ್ರ ಸದ್ದು ಮಾಡುತ್ತಿದೆ. ಒಂದು ಆ್ಯಕ್ಷನ್ ಮತ್ತು ಇನ್ನೂ ಒಂದು ನಾನಿಯ ಲುಕ್ನಿಂದ ಅಂತಲೇ ಹೇಳಬಹುದು.
ನಾನಿ ಇಲ್ಲಿವರೆಗೂ ಮಾಡಿರೋ ಚಿತ್ರಗಳಲ್ಲಿ ಈ ರೀತಿ ಲುಕ್ ಅಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ಈಗ ಹೊಸ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಷ್ಟೆ ಸಖತ್ ಆಗಿಯೇ ಇದೆ.
ಇನ್ನುಳಿದಂತೆ ಈ ಚಿತ್ರ ಸೆಪ್ಟೆಂಬರ್-24 ರಂದು ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಇದು ತೆರೆಗೆ ಬರ್ತಿದೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ. ಈ ಚಿತ್ರವು ಕನ್ನಡದ ಟಾಕ್ಸಿಕ್ ಚಿತ್ರದ ತರವೇ ಇದೆ ಅನ್ನುವ ಮಾತು ಕೇಳಿ ಬರ್ತಿವೆ.













