Prithvi Shaw: ಕ್ರಿಕೆಟರ್ ಪೃಥ್ವಿ ಶಾ-ಆಕೃತಿ ಬ್ರೇಕಪ್, ನಿಶ್ಚಿತಾರ್ಥ ಮುರಿದುಕೊಂಡ ಜೋಡಿ | ಕ್ರೀಡಾ ಸುದ್ದಿ | ACTPnews

ಪೃಥ್ವಿ ಶಾ-ಆಕೃತಿ ಅಗರ್ವಾಲ್


Last Updated:

ನಿಶ್ಚಿತಾರ್ಥದ ಕೆಲವೇ ತಿಂಗಳ ನಂತರ ಸಾಕಷ್ಟು ಚಚೆಗೊಳಗಾದ ಕ್ರಿಕೆಟರ್ ಪೃಥ್ವಿ ಶಾ ಅವರ ಸಂಬಂಧ ಈಗ ಕೊನೆಯಾಗಿದೆ. ಪೃಥ್ವಿ ಶಾ ಜೊತೆಗಿನ ಸಂಬಂಧ ಕೊನೆಗೊಳಿಸಿದ್ದಾಗಿ ಅವರ ಭಾವಿ ವಧು ಆಕೃತಿ ಅಗರ್ವಾಲ್ ಆಧಿಕೃತವಾಗಿ ಘೋಷಿಸಿದ್ದಾರೆ.

ಪೃಥ್ವಿ ಶಾ-ಆಕೃತಿ ಅಗರ್ವಾಲ್
ಪೃಥ್ವಿ ಶಾ-ಆಕೃತಿ ಅಗರ್ವಾಲ್

ಖ್ಯಾತ ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್ ಆಕೃತಿ  (Akriti Agarwal) ಅವರು ಕ್ರಿಕೆಟರ್ ಪೃಥ್ವಿ ಶಾ (Prithvi Shaw) ಜೊತೆಗಿನ ತಮ್ಮ ನಿಶ್ಚಿತಾರ್ಥ (Engagement) ಮುರಿದುಕೊಂಡಿದ್ದಾರೆ. ಈ ಜೋಡಿ 6 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ (Social Media) ಇನ್​ಫ್ಲುಯೆನ್ಸರ್ ಆಗಿ ಆ್ಯಕ್ಟಿವ್ ಆಗಿರುವ ಅಕೃತಿ ಅಗರ್ವಾಲ್ ಅವರು ತಮ್ಮ ನಿಶ್ಚಿತಾರ್ಥವನ್ನು ಸಾರ್ವಜನಿಕವಾಗಿ ಅನೌನ್ಸ್ ಮಾಡಿದ ಸುಮಾರು ಆರು ತಿಂಗಳ ನಂತರ, ಇಬ್ಬರೈ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಘೋಷಿಸಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಅಗರ್ವಾಲ್ ತಮ್ಮ ಬೇರ್ಪಡುವಿಕೆಯನ್ನು ಘೋಷಿಸುವ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ. ಭಾವನಾತ್ಮಕವಾಗಿರುವ ಪೋಸ್ಟ್​ನಲ್ಲಿ ಇಬ್ಬರೂ ತಮ್ಮ ಭವಿಷ್ಯಕ್ಕಾಗಿ ವಿಭಿನ್ನ ಗುರಿಗಳು ಮತ್ತು ಸಂದರ್ಭಗಳನ್ನು ಅರಿತುಕೊಂಡು ಈ ನಿರ್ಧಾರ ಮಾಡಿದ್ದಾಗಿ ಹೇಳಿದ್ದಾರೆ.

ಇಬ್ಬರೂ ಒಮ್ಮತದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಪರಸ್ಪರ ಪ್ರೀತಿ ಮತ್ತು ಕಾಳಜಿಯ ಹೊರತಾಗಿಯೂ, ತಮ್ಮ ಇಬ್ಬರ ದಾರಿಯೂ ಇನ್ನು ಮುಂದೆ ಒಟ್ಟಿಗೆ ಇರಲು ಸಾಧ್ಯವಿಲ್ಲ ಒಪ್ಪಿಕೊಂಡು ದೂರವಾಗುತ್ತಿರುವುದಾಗಿ ತಿಳಿಸಿದ್ದಾರೆ.

ಕ್ರಿಕೆಟಿಗ ಪೃಥ್ವಿ ಶಾ ಅವರ ಮದುವೆ ಬಗ್ಗೆ, ನಿಶ್ಚಿತಾರ್ಥದ ಬಗ್ಗೆ ಸಾಕಷ್ಟು ಚರ್ಚೆಗಳು ಬಂದಿದ್ದರು. ಈ ಎಲ್ಲ ಅನುಮಾನಗಳನ್ನು ಇಂದು ಅವರ ಪೋಸ್ಟ್ ನಿವಾರಿಸಿದೆ. ಅವರ ನಿಶ್ಚಿತ ವಧು ಆಕೃತಿ ಅಗರ್ವಾಲ್ ತಮ್ಮ ಸಂಬಂಧದ ಅಂತ್ಯವನ್ನು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಘೋಷಿಸಿದರು.

ಆಕೃತಿ ಅಗರ್ವಾಲ್ ಪ್ರಕಾರ, ಆ ಸಂಬಂಧಕ್ಕೆ ಭವಿಷ್ಯವಿಲ್ಲ. ಇಬ್ಬರೂ ಸಂಬಂಧದ ಬಗ್ಗೆ ವಿಭಿನ್ನ ಬೇಡಿಕೆಗಳನ್ನು ಹೊಂದಿದ್ದರು. ಸಂದರ್ಭಗಳನ್ನು ಗಮನಿಸಿ, ಅವರು ಅದನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.‘

ನಾನು ಮತ್ತು ನನ್ನ ಎಂಗೇಜ್ಡ್ ಸಂಗಾತಿ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಭಾರವಾದ ಹೃದಯದಿಂದ ಘೋಷಿಸುತ್ತಿದ್ದೇನೆ. ನಮ್ಮಿಬ್ಬರಿಗೂ ಜೀವನದ ಬಗ್ಗೆ ವಿಭಿನ್ನ ಬೇಡಿಕೆಗಳಿವೆ. ಭವಿಷ್ಯದ ಗುರಿಗಳಿವೆ. ಸಂದರ್ಭಗಳನ್ನು ಗಮನಿಸಿ ನಾವು ಬೇರೆಯಾಗುತ್ತಿದ್ದೇವೆ. ನಮ್ಮ ಪ್ರೀತಿ ಮತ್ತು ಕಾಳಜಿಯ ಹೊರತಾಗಿಯೂ, ನಮ್ಮ ದಾರಿ ಹೊಂದಿಕೆಯಾಗುವುದಿಲ್ಲ ಎಂದು ನಾವು ಒಪ್ಪಿಕೊಂಡಿದ್ದೇವೆ. ನಮ್ಮ ಅಭಿಮಾನಿಗಳು ನಮ್ಮ ಗೌಪ್ಯತೆಯನ್ನು ಗೌರವಿಸಬೇಕು ಮತ್ತು ನಮ್ಮ ನಿರ್ಧಾರದ ಬಗ್ಗೆ ಊಹಾಪೋಹಗಳಿಂದ ದೂರವಿರಬೇಕು ಎಂದು ನಾವು ವಿನಂತಿಸುತ್ತೇವೆ. ನಮ್ಮ ಗೌಪ್ಯತೆಯನ್ನು ಅರ್ಥಮಾಡಿಕೊಂಡು ಗೌರವಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಬರೆದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಪೃಥ್ವಿ ಶಾ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ಟೀಮ್ ಇಂಡಿಯಾಕ್ಕೆ ಮರಳುವುದು ಈಗ ಅಸಾಧ್ಯ. ಅವರಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶವೂ ಸಿಗುತ್ತಿಲ್ಲ. ಈ ಕಷ್ಟದ ಸಮಯದಲ್ಲಿ, ಆಕೃತಿ ಯಾವಾಗಲೂ ಅವರ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ. ಇಬ್ಬರೂ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಆದರೆ ಆ ನಿಶ್ಚಿತಾರ್ಥ ಈಗ ಕೊನೆಗೊಂಡಿದೆ.

ಆಕೃತಿ ಅಗರ್ವಾಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ಮೋಸ ಮಾಡಲಾಗಿದೆ” ಎಂದು ಪೋಸ್ಟ್ ಹಾಕಿದ್ದಾಗ ಭಾರೀ ಸುದ್ದಿಯಾದರು. ಅಂದಿನಿಂದ ಅಭಿಮಾನಿಗಳು ಅವರ ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎಂದು ಊಹಿಸುತ್ತಿದ್ದಾರೆ.

ದೀರ್ಘಕಾಲ ಡೇಟಿಂಗ್ ಮಾಡಿದ ನಂತರ, ಜೋಡಿ ತಮ್ಮ ಸಂಬಂಧವನ್ನು ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed