Last Updated:
ಬೆಳದಿಂಗಳ ಬಾಲೆ ಚಿತ್ರದಲ್ಲಿ ಅನಂತ್ ನಾಗ್ ಅವರು ರೇವಂತ್ ಅನ್ನುವ ಪಾತ್ರ ಮಾಡಿದ್ದಾರೆ. ಬೆಳದಿಂಗಳ ಬಾಲೆ ಆಗಿ ನಟಿ ಸುಮನ್ ನಗರ್ಕರ್ ಅಭಿನಯಿಸಿದ್ದಾರೆ. ಅನಂತ್ ಅವರಿಗೆ ಫಾಲ್ಕೆ ಪ್ರಶಸ್ತಿ ಅನೌನ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಸುಮನ್ ನಗರ್ಕರ್ ನ್ಯೂಸ್-18 ಡಿಜಿಟಲ್ ಜೊತೆಗೆ Exclusive ಆಗಿ ಮಾತನಾಡಿದ್ದಾರೆ. ಇವರ ಮಾತುಗಳ ಪೂರ್ಣ ವಿವರ ಇಲ್ಲಿದೆ ಓದಿ.
ಅನಂತ್ ನಾಗ್ (Anant Nag) ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (Dadasaheb Phalke Award) ಘೋಷಣೆ ಆಗಿದೆ. ಇದು ನಿಜಕ್ಕೂ ಹೆಮ್ಮೆಯ ವಿಷಯವೇ ಆಗಿದೆ. ಕನ್ನಡಿಗರಿಗೆ ಬರ್ತಿರೋ ಮೂರನೇ ದಾದಾ ಸಾಹೇಬ್ ಪ್ರಶಸ್ತಿ ಇದಾಗಿದೆ. ಅನಂತ್ ನಾಗ್ (Anant Nag) ಅವರು ಉತ್ತಮ ಕಲಾವಿದರು. ಸಜ್ಜನ ವ್ಯಕ್ತಿ, ಮಾತುಗಳು ಕಡಿಮೆ. ತುಂಬಾನೆ ಚೆನ್ನಾಗಿ ಹಾಡ್ತಾರೆ. ಇವರ ಸೀರಿಯಸ್ ಪಾತ್ರಗಳೂ ಇಷ್ಟ ಆಗುತ್ತವೆ. ಕಾಮಿಡಿ ರೋಲ್ ಕೂಡ ತುಂಬಾನೆ ಇಷ್ಟ ಆಗುತ್ತವೆ. ಇವರ ಜೊತೆಗೆ ಬೆಳದಿಂಗಳ ಬಾಲೆ ಚಿತ್ರದಲ್ಲಿ ನಟಿಸಿದ್ದೇನೆ. ನಿಷ್ಕರ್ಷ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಆದರೆ, ಇವರ ಜೊತೆಗೆ ಸೀನ್ಗಳೇನು ಇಲ್ಲ. ಇವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿರೋದು ತುಂಬಾನೆ ಖುಷಿ ವಿಚಾರವೇ ಆಗಿದೆ ಅಂತ ಬೆಳದಿಂಗಳ ಬಾಲೆ ಚಿತ್ರ ನಾಯಕಿ ಸುಮನ್ ನಗರ್ಕರ್ (Suman Nagarkar) ಹೇಳಿದ್ದಾರೆ. ನ್ಯೂಸ್ 18 ಕನ್ನಡ ಡಿಜಿಟಲ್ ಜೊತೆಗಿನ Exclusive ಮಾತುಕತೆಯಲ್ಲಿ ಸುಮಾರು ವಿಚಾರ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಅನಂತ್ ನಾಗ್ ಅವರಿಗೆ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿ ಬಂದಿರೋದು ಹೆಮ್ಮೆಯ ವಿಷಯವೇ ಅಗಿದೆ. ಕನ್ನಡಿಗರಿಗೆ ಬರ್ತಿರೋ ಮೂರನೇ ಪ್ರಶಸ್ತಿ ಇದಾಗಿದೆ.
ಉತ್ತಮ ನಟ, ಸಜ್ಜನ ವ್ಯಕ್ತಿ
(ಚಿತ್ರ ಕೃಪೆ: ಸುಮನ್ ನಗರ್ಕರ್ ಇನ್ಸ್ಟಾಗ್ರಾಮ್)
ರಾಜ್ಕುಮಾರ್, ವಿ.ಕೆ.ಮೂರ್ತಿ ಇದೀಗ ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿ ಬಂದಿದೆ. ಇದು ನಿಜಕ್ಕೂ ಎಲ್ಲರೂ ಹೆಮ್ಮೆ ಪಡುವ ವಿಷಯವೇ ಆಗಿದೆ. ಈ ವಿಷಯ ಕೇಳಿ ತುಂಬಾನೆ ಖುಷಿನೂ ಆಗಿದೆ.
ಬೆಳದಿಂಗಳ ಬಾಲೆ ಚಿತ್ರದಲ್ಲಿ ಇವರ ಜೊತೆಗೆ ನಟಿಸಿದ್ದೇನೆ. ಈ ಚಿತ್ರ ಶೂಟಿಂಗ್ ಸಮಯದಲ್ಲಿ ಅವರಿಂದ ಸಾಕಷ್ಟು ಕಲಿತುಕೊಂಡಿದ್ದೇನೆ.
ಅನಂತ್ ನಾಗ್ ಫಾಲ್ಕೆ ಪ್ರಶಸ್ತಿ
(ಚಿತ್ರ ಕೃಪೆ: ಸುಮನ್ ನಗರ್ಕರ್ ಇನ್ಸ್ಟಾಗ್ರಾಮ್)
ಅವರು ತುಂಬಾನೆ ಚೆನ್ನಾಗಿ ಹಾಡ್ತಾರೆ. ನಾನೂ ಆಗ ಹಾಡ್ತಾ ಇದ್ದೆ. ನಮ್ಮ ಬೆಳದಿಂಗಳ ಬಾಲೆ ಚಿತ್ರವನ್ನ ಶಿಮ್ಲಾದಲ್ಲಿ ಚಿತ್ರೀಕರಿಸಿದ್ದೇವೆ. ಆ ಸಮಯ ಒಂದು ಫೋಟೋ ನನ್ನ ಬಳಿ ಇದೆ. ಅದು ಶಿಮ್ಲಾದ ಕುಫ್ರಿ ಹಿಲ್ ಅಲ್ಲಿಯೇ ತೆಗೆಸಿಕೊಂಡಿರುವ ಫೋಟೋ ನೋಡಿ.
ಅನಂತ್ ನಾಗ್ ಅವರು ಒಳ್ಳೆ ಚಿತ್ರಗಳನ್ನ ಮಾಡಿದ್ದಾರೆ. ಇವರ ಗಂಭೀರ ಪಾತ್ರಗಳು ಇಷ್ಟ ಆಗುತ್ತವೆ. ಬರ ಚಿತ್ರ ನನಗೆ ಇಷ್ಟ ಆಗುತ್ತದೆ. ನಾರದ ವಿಜಯ ಸಿನಿಮಾದಲ್ಲಿಯ ನಾರದ ರೋಲ್ ಹೆಚ್ಚು ಖುಷಿಕೊಡುತ್ತದೆ.
ಅನಂತ್ ನಾಗ್ ಅವರ ಗಣೇಶ ಮದುವೆ, ಗೌರ ಗಣೇಶ ಈ ಸಿನಿಮಾಗಳು ನನಗೆ ಫೇವರಿಟ್ ಮೂವಿಗಳೇ ಆಗಿವೆ. ಇಂತಹ ಅತ್ಯುತ್ತಮ ನಟನಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿರೋದು ಹೆಮ್ಮೆ ಪಡುವ ವಿಷಯ ಅಂತ ಸುಮನ್ ನಗರ್ಕರ್ ಹೇಳಿದ್ದಾರೆ.














