Last Updated:
ಮಾಫಿ ಸಾಕ್ಷಿ ವಿಷಯದಲ್ಲಿ ಪ್ರದೂಷ್ ಬೆನ್ನಿಗೆ ನಿಂತಿದ್ದಾರಾ ವ್ಯಕ್ತಿಗಳು..? ಕೋರ್ಟ್ ನಲ್ಲಿ ದರ್ಶನ್ ಪರ ವಕೀಲರ ಗಂಭೀರ ಆರೋಪ ಹಿನ್ನೆಲೆ ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಿಜಕ್ಕೂ ಪ್ರದೂಷ್ (Pardosh) ಹಿಂದೆ ಇದ್ದಾರಾ ಪ್ರಭಾವಿಗಳು..? ಮಾಫಿ ಸಾಕ್ಷಿ (Approver) ವಿಷಯದಲ್ಲಿ ಪ್ರದೂಷ್ ಬೆನ್ನಿಗೆ ನಿಂತಿದ್ದಾರಾ ವ್ಯಕ್ತಿಗಳು..? ಕೋರ್ಟ್ ನಲ್ಲಿ (Court) ದರ್ಶನ್ ಪರ ವಕೀಲರ ಗಂಭೀರ ಆರೋಪ ಹಿನ್ನೆಲೆ ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮಾಫಿ ಸಾಕ್ಷಿ ಅರ್ಜಿ ಹಾಕಿದಾಗಿಂದ ಪ್ರದೂಷ್ ಹಾಗೂ ಕುಟುಂಬಸ್ಥರ ಚಲನವಲನದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೋರ್ಟ್ ನಿಂದ ಪ್ರಕರಣದ ತನಿಖೆಗೆ ಸೂಚನೆ ಹಿನ್ನೆಲೆ ಪ್ರಕರಣ ಸಂಬಂಧ ಗಂಭೀರವಾಗಿ ತನಿಖೆ ಮಾಡಲಾಗುತ್ತಿದೆ ಎನ್ನಲಾಗಿದೆ.
ಪ್ರದೂಷ್ ಕರೆ ಮಾಡಿದ್ದ ನಂಬರ್ ಪರಿಶೀಲನೆ ಮಾಡಿರುವ ಪೊಲೀಸರು ಈ ವೇಳೆ ಅದು ಪ್ರದೂಷ್ ಹೆಸರಲ್ಲಿಯೇ ಇರೋ ನಂಬರ್ ಅನ್ನೋದು ಪತ್ತೆಯಾಗಿದೆ. ಆ ನಂಬರ್ ಗೆ ಬ್ಯಾಂಕ್ ಅಕೌಂಟ್ ಗಳು ಲಿಂಕ್ ಆಗಿರೋದು ಪತ್ತೆಯಾಗಿವೆ.
ಪ್ರದೂಷ್ ಜೈಲಿನಲ್ಲಿದ್ಕೊಂಡು ಯಾರ್ಯಾರಿಗೆ ಕರೆ ಮಾಡಿ ಮಾತಾನಾಡುತ್ತಿದ್ದ? ಯಾರ್ಯಾರು ಪ್ರದೂಷ್ ನ ಭೇಟಿಯಾಗುತ್ತಿದ್ದರು? ಮಾಫಿ ಸಾಕ್ಷಿ ಅರ್ಜಿ ಸಲ್ಲಿಕೆಗೂ ಮುನ್ನ ಹಾಗು ನಂತರದ ಬಗ್ಗೆ ಪಿನ್ ಟು ಪಿನ್ ಮಾಹಿತಿ ಕಲೆ ಹಾಕಲಾಗುತ್ತಿದೆ ಎನ್ನಲಾಗಿದೆ.
ಪ್ರದೂಷ್ ಹಿಂದೆ ಯಾರಾದರೂ ಇದ್ದಾರಾ ಅನ್ನೋ ಆಯಾಮದಲ್ಲಿ ತನಿಖೆ ನಡೆಯುತ್ತಿದ್ದು ಇದೇನಾದರೂ ಪ್ರೂವ್ ಆಗಿ ರಿಪೋರ್ಟ್ ಸಲ್ಲಿಕೆ ಮಾಡಿದರೆ ಪ್ರದೂಷ್ ಗೆ ಕಂಟಕ ಆಗುತ್ತಾ..? ತನಿಖೆ ವೇಳೆ ಪ್ರೂವ್ ಆದ್ರೆ ಮಾಫಿ ಸಾಕ್ಷಿಗೆ ತಡೆ ಸಿಕ್ಕುತ್ತಾ..? ಸದ್ಯ ಪ್ರದೂಷ್ ವಿಚಾರದಲ್ಲಿ ಮತ್ತಷ್ಟು ಮಾಹಿತಿ ಪಡೆಯಲು ದರ್ಶನ್ ಪರ ವಕೀಲರು ಯೋಚಿಸುತ್ತಿದ್ದಾರೆ ಎನ್ನಲಾಗಿದೆ..
ಆರ್.ಟಿ.ಐ ಮೂಲಕ ಜೈಲಿನಿಂದ ಮಾಹಿತಿ ಪಡೆಯಲು ದರ್ಶನ್ ಲೀಗಲ್ ಟೀಂ ಮುಂದಾಗಿದ್ದು, ಪಕ್ಕಾ ಮಾಹಿತಿ ಆಧರಿಸಿ ಹೈಕೋರ್ಟ್ ಗೆ ಹೋಗುವ ಬಗ್ಗೆ ಚರ್ಚೆ ಶುರುವಾಗಿದೆ ಎನ್ನಲಾಗಿದೆ.
ಪ್ರಾಥಮಿಕ ತನಿಖಾ ವರದಿ ನೋಡಿಕೊಂಡು ಹೈಕೋರ್ಟ್ ಗೆ ಅಪೀಲ್ ಸಾಧ್ಯತೆ ಇದ್ದು, ಪ್ರದೂಷ್ ವಿರುದ್ಧ ಸಾಕ್ಷ್ಯಗಳು ಸಿಕ್ಕಿದರೆ ದರ್ಶನ್ ಗೆ ಪ್ಲಸ್ ಪಾಯಿಂಟ್ ಆಗಬಹುದು. ಅದೇ ಅಂಶಗಳನ್ನ ಇಟ್ಟುಕೊಂಡು ದರ್ಶನ್ ಹೈಕೋರ್ಟ್ ಗೆ ಹೋಗಲಿದ್ದದಾರೆ ಎನ್ನಲಾಗಿದೆ.
ಸದ್ಯ ಮಾಫಿ ಸಾಕ್ಷಿ ಪ್ರದೂಷ್ ಗೆ ಸಾಲು ಸಾಲು ಚಾಲೆಂಜ್ ಎದುರಾಗಿದ್ದು ಮಾಫಿ ಸಾಕ್ಷಿ ಹೇಳಿಕೆಯಲ್ಲಿ ಯಡವಟ್ಟು ಆಗದಂತೆ ನೋಡಿಕೊಳ್ಳೋ ಸವಾಲು ಮುಂದೆ ಇದೆ. ಕೋರ್ಟ್ ಷರತ್ತು ಮೀರದಂತೆ ಮಾಫಿ ಸಾಕ್ಷಿ ಹೇಳುವ ಚಾಲೆಂಜ್ ಇದ್ದು ಒಂದು ವೇಳೆ ವಿರುದ್ದ ಸಾಕ್ಷ್ಯ ಸಿಕ್ಕಿದರೆ ಮುಂದೆ ಕಂಟಕ ಇರಬಹುದು ಎನ್ನಲಾಗಿದೆ. ಹೀಗಾಗಿ ವಕೀಲರ ಜೊತೆ ಪ್ರದೂಷ್ ಚರ್ಚೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ವರದಿ: ಮಾದೇಶ್ ಸಿ.ಎನ್, ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು














