Last Updated:
ಇದೇ ಟೈಮ್ನಲ್ಲೇ ಪ್ರದೋಷ್ ಜೈಲಿನಲ್ಲಿ ಫೋನ್ ಕಳ್ಳಾಟವಾಡಿ ಸಿಕ್ಕಿಬಿದ್ದಿದ್ದು, ದರ್ಶನ್ಗೆ ಪ್ಲಸ್ ಪಾಯಿಂಟ್ ಆಗಿದೆ. ದರ್ಶನ್ ವಿರುದ್ಧ ಷಡ್ಯಂತ್ರ ನಡೆದಿದ್ಯಾ? ಕಾಣದ ಕೈಗಳು ಪ್ರದೋಷ್ ಹಿಂದಿದ್ಯಾ?
ಬೆಂಗಳೂರು (ಸೆ.16): ರೇಣುಕಾಸ್ವಾಮಿ ಕೇಸ್ನಲ್ಲಿ ಜೈಲು ಸೇರಿರೋ ದರ್ಶನ್ ಆ್ಯಂಡ್ ಟೀಮ್ (Darshan And Team) ಒಳಗೆಯೇ ಮುಸುಕಿನ ಗುದ್ದಾಟ ಜೋರಾಗಿದೆ. ಜೊತೆಗಿದ್ದವರೇ ದರ್ಶನ್ಗೆ (Darshan) ಖೆಡ್ಡಾ ತೋಡ್ತಿದ್ದಾರೆ ಎನ್ನುವ ಆರೋಪ ಸಹ ಕೇಳಿ ಬರ್ತಿದೆ. ಇದಕ್ಕೆ ಪುಷ್ಠಿ ಎನ್ನುವಂತೆ ಜೈಲಿನಲ್ಲಿ ಮಾಫಿ ಸಾಕ್ಷಿ ಪ್ರದೋಷ್ ಅಕ್ರಮವಾಗಿ ಫೋನ್ (Phone) ಮಾಡಲು ಹೋಗಿ ಸಿಕ್ಕಿಬಿದ್ದಿದ್ದು, ಇದು ದರ್ಶನ್ ಪರ ವಕೀಲರಿಗೆ ಸಿಕ್ಕ ಹೊಸ ಅಸ್ತ್ರವಾಗಿದೆ. ದರ್ಶನ್ ವಿರುದ್ಧ ಭಾರೀ ಷಡ್ಯಂತ್ರ ನಡೆದಿದೆ ಎನ್ನುವ ಆರೋಪ ಕೇಳಿಬಂದಿದ್ದು, ಪ್ರದೋಷ್ಗೆ ಹೊಸ ಸಂಕಷ್ಟ ಎದುರಾಗಿದೆ.
ಮಾಫಿ ಸಾಕ್ಷಿ ಆಗ್ತೀನಿ, ನಡೆದಿದ್ದೆಲ್ಲಾ ಹೇಳಿಬಿಡ್ತೀನಿ ಎಂದು ಆರೋಪಿ ಪ್ರದೋಷ್ ಮುಂದೆ ಬಂದಿದ್ದಾರೆ. ಆದ್ರೆ ದರ್ಶನ್ ಪರ ವಕೀಲರು ಪ್ರದೋಷ್ ಮಾಫಿ ಸಾಕ್ಷಿ ಆಗೋದನ್ನ ವಿರೋಧಿಸಿ ಕಾನೂನು ಹೋರಾಟ ಮಾಡ್ತಿದ್ದಾರೆ. ಇದೇ ಟೈಮ್ನಲ್ಲೇ ಪ್ರದೋಷ್ ಜೈಲಿನಲ್ಲಿ ಫೋನ್ ಕಳ್ಳಾಟವಾಡಿ ಸಿಕ್ಕಿಬಿದ್ದಿದ್ದು, ದರ್ಶನ್ಗೆ ಪ್ಲಸ್ ಪಾಯಿಂಟ್ ಆಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರದೋಷ್ ಜೈಲಿನ ನಿಯಮಗಳನ್ನು ಉಲ್ಲಂಘಿಸಿ, ಸಿಬ್ಬಂದಿ ಸಹಾಯದೊಂದಿಗೆ ತನ್ನ ಪತ್ನಿ ಜೊತೆ ಫೋನ್ನಲ್ಲಿ ಮಾತನಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ. ಅದನ್ನೇ ಅಸ್ತ್ರವಾಗಿಸಿಕೊಂಡ ದರ್ಶನ್ ಪರ ವಕೀಲರು ಮಾಫಿ ಸಾಕ್ಷಿ ಆದೇಶ ಮುಂದೂಡುವಂತೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
59 ನೇ ಸೇಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ ದರ್ಶನ್ ಪರ ವಕೀಲರು, ದರ್ಶನ್ ವಿರುದ್ದ ಸಾಕಷ್ಟು ಷಡ್ಯಂತ್ರ ನಡೆಯುತ್ತಿದೆ. ಮಾಫಿ ಸಾಕ್ಷಿಯಾಗಿ ಅರ್ಜಿ ಸಲ್ಲಿಕೆ ಮಾಡಿರುವ ಪ್ರದೋಷ್ ಅಕ್ರಮವಾಗಿ ಕರೆಗಳನ್ನು ಮಾಡಿದ್ದಾನೆ. ಅಲ್ಲದೇ ಪ್ರದೋಷ್ ಹಿಂದೆ ಹಲವು ವ್ಯಕ್ತಿಗಳು ಇದ್ದಾರೆ. ದರ್ಶನ್ ಜೀವನ ಹಾಳು ಮಾಡಲು ಸಾಕಷ್ಟು ಜನರು ಷಡ್ಯಂತ್ರ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪ ಮಾಡಿದ್ದಾರೆ.
ಈ ಕೇಸ್ ಹಿಂದೆ ಕಾಣದ ಕೈಗಳು ಕೆಲಸ ಮಾಡ್ತಿದ್ದು, ಪ್ರದೋಷ್ ನನ್ನ ಬಳಸಿಕೊಂಡು ಮಾಫಿ ಸಾಕ್ಷಿಯಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಸೀಕ್ರೆಟ್ ಆಗಿ ಮಾಫಿ ಸಾಕ್ಷಿ ಪ್ರದೋಷ್ ಮೊಬೈಲ್ ಬಳಕೆ ಮಾಡಿದ್ದಾರೆ. ಜೈಲು ಸಿಬ್ಬಂದಿ ಮೌನೇಶ್ ಜೊತೆ ಸೇರಿ ಮೊಬೈಲ್ ತೆಗೆದುಕೊಂಡು ಬಳಸಿದ್ದಾನೆ.
ಈಗ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ NCR ದಾಖಲು ಆಗಿದೆ. ವಿಚಾರಣೆ ಮುಗಿಯುವ ತನಕ ಆದೇಶ ಮುಂದೂಡಿಕೆ ಮಾಡುವಂತೆ ದರ್ಶನ್ ಪರ ವಕೀಲ ಹಷ್ಮಾತ್ ಪಾಷ್ ರಿಂದ ಅರ್ಜಿ ಸಲ್ಲಿಕೆ ಮಾಡಿದ್ದು, ಇಂದೇ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ.
(ವರದಿ: ಮಂಜುನಾಥ್, ನ್ಯೂಸ್18 ಕನ್ನಡ, ಬೆಂಗಳೂರು)














