Rakhi Sawant: ಸ್ವೀಪರ್ ಕೆಲಸವೂ ನಿನಗೆ ಸಿಗಲ್ಲ! ರಾಖಿ ಸಾವಂತ್‌ಗೆ ಕಂಗನಾ ರಣಾವತ್ ಖಡಕ್ ತಿರುಗೇಟು! | | ACTPnews

News18


Last Updated:

ತಮ್ಮ ವಿರುದ್ಧ ಹೇಳಿಕೆ ನೀಡಿದ್ದ ನಟಿ ರಾಖಿ ಸಾವಂತ್ ಗೆ (Rakhi Sawant) ಕಂಗನಾ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ರಾಖಿ ಸವಾಂತ್ ಸೋತ ಹಾಗೂ ಕಹಿ ಮನಸ್ಸಿನ ವ್ಯಕ್ತಿ ಎಂದು ಕರೆದಿರುವ ಕಂಗನಾ, ಯಶಸ್ವಿ ಮಹಿಳೆಯರ ಬಗ್ಗೆ ಅನಗತ್ಯವಾಗಿ ಮಾತನಾಡುವವರ ವಿರುದ್ಧ ಕಿಡಿಕಾರಿದ್ದಾರೆ.

News18
News18

ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ಮತ್ತೊಮ್ಮೆ ತಮ್ಮ ಖಡಕ್ ಹೇಳಿಕೆಗಳಿಂದ ಸುದ್ದಿಯಾಗಿದ್ದಾರೆ. ತಮ್ಮ ವಿರುದ್ಧ ಹೇಳಿಕೆ ನೀಡಿದ್ದ ನಟಿ ರಾಖಿ ಸಾವಂತ್ ಗೆ (Rakhi Sawant) ಕಂಗನಾ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ರಾಖಿ ಸವಾಂತ್ ಸೋತ ಹಾಗೂ ಕಹಿ ಮನಸ್ಸಿನ ವ್ಯಕ್ತಿ ಎಂದು ಕರೆದಿರುವ ಕಂಗನಾ, ಯಶಸ್ವಿ ಮಹಿಳೆಯರ ಬಗ್ಗೆ ಅನಗತ್ಯವಾಗಿ ಮಾತನಾಡುವವರ ವಿರುದ್ಧ ಕಿಡಿಕಾರಿದ್ದಾರೆ.

ಇತ್ತೀಚೆಗೆ ರಾಖಿ ಸಾವಂತ್ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಕುರಿತು ಮಾಡಿದ್ದ ಕೆಲವು ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದವು. ಈ ಹಿನ್ನೆಲೆಯಲ್ಲಿ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದ ಮೂಲಕ ರಾಖಿ ಸಾವಂತ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಯಶಸ್ವಿ ಮಹಿಳೆಯರ ವಿರುದ್ಧ ಕೆಲವರು ವೈಯಕ್ತಿಕ ದಾಳಿ ನಡೆಸಲು ಪ್ರಯತ್ನಿಸುತ್ತಾರೆ ಎಂದು ಕಂಗನಾ ಆರೋಪಿಸಿದ್ದಾರೆ. ಸೋತ ಮನಸ್ಥಿತಿಯಲ್ಲಿರುವವರು ತಮ್ಮ ಅಸೂಯೆ ಮತ್ತು ವೈಫಲ್ಯವನ್ನು ಮುಚ್ಚಿಕೊಳ್ಳಲು ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದು ಕಿಡಿಕಾರಿದ್ದಾರೆ.

ಯಶಸ್ಸಿನ ಹಿಂದೆ ಸಾಕಷ್ಟು ಪರಿಶ್ರಮವಿರುತ್ತದೆ. ಯಾವುದೇ ಕ್ಷೇತ್ರದಲ್ಲೂ ಯಶಸ್ಸಿಗೆ ಶಾರ್ಟ್‌ಕಟ್ ಇರುವುದಿಲ್ಲ ಎಂದು ಕಂಗನಾ ಹೇಳಿದ್ದಾರೆ. ತಮ್ಮನ್ನು ಟೀಕಿಸುವವರು ಮೊದಲು ತಮ್ಮದೇ ಸಾಧನೆಯತ್ತ ಗಮನ ಹರಿಸಬೇಕು ಎಂಬ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.

ತಮ್ಮ ಹೇಳಿಕೆಯಲ್ಲಿ ಕಂಗನಾ ಪೌರಕಾರ್ಮಿಕರ ಕೆಲಸವನ್ನೂ ಉಲ್ಲೇಖಿಸಿರುವುದು ಗಮನ ಸೆಳೆದಿದೆ. ಯಾವುದೇ ಕೆಲಸ ಸಿಗಬೇಕಾದರೂ ಅದಕ್ಕೆ ಅರ್ಹತೆ ಮತ್ತು ಪ್ರತಿಭೆ ಅಗತ್ಯ ಎಂದು ಹೇಳಿದ್ದಾರೆ.

ತಮ್ಮನ್ನು ಟೀಕಿಸುವವರಿಗೆ ಪರೋಕ್ಷವಾಗಿ ಟಾಂಗ್ ನೀಡಿರುವ ಕಂಗನಾ, ಪೌರಕಾರ್ಮಿಕರ ಕೆಲಸ ಸಿಗಬೇಕಾದರೂ ಅರ್ಹತೆ ಬೇಕಾಗುತ್ತದೆ ಎಂಬ ಅರ್ಥದಲ್ಲಿ ಕಟುವಾಗಿ ಮಾತನಾಡಿದ್ದಾರೆ. ತಮ್ಮ ವಿಡಿಯೋಗಳನ್ನು ನೋಡುತ್ತಾ ಕುಳಿತುಕೊಳ್ಳುವುದಕ್ಕಿಂತ ತಮ್ಮದೇ ಬದುಕಿನ ಬಗ್ಗೆ ಗಮನ ಹರಿಸುವುದು ಉತ್ತಮ ಎಂಬ ರೀತಿಯಲ್ಲಿ ಸಲಹೆ ನೀಡಿದ್ದಾರೆ.

ತಮಗಿಂತ ಹೆಚ್ಚಿನ ಯಶಸ್ಸು ಸಾಧಿಸಿರುವವರ ವಿಮರ್ಶೆಯನ್ನು ತಾವು ಸ್ವೀಕರಿಸಲು ಸಿದ್ಧ ಎಂದು ಕಂಗನಾ ಹೇಳಿದ್ದಾರೆ. ಆದರೆ ಯಾವುದೇ ಸಾಧನೆಯಿಲ್ಲದೆ ಕೇವಲ ಪ್ರಚಾರಕ್ಕಾಗಿ ತಮ್ಮ ವಿರುದ್ಧ ಮಾತನಾಡುವವರ ಟೀಕೆಯನ್ನು ಇನ್ನು ಮುಂದೆ ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಕಂಗನಾ ರಣಾವತ್ ಇತ್ತೀಚೆಗೆ ಭಾರತ್ ಭಾಗ್ಯ ವಿಧಾತಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮತ್ತೊಂದೆಡೆ ರಾಖಿ ಸಾವಂತ್ ಕೂಡ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡು ತಮ್ಮ ಹೇಳಿಕೆಗಳಿಂದ ಗಮನ ಸೆಳೆದಿದ್ದರು. ಇದೀಗ ಇಬ್ಬರ ನಡುವಿನ ಮಾತಿನ ಸಮರದಿಂದಾಗಿ ಬಾಲಿವುಡ್ ವಲಯದಲ್ಲಿ ಈ ವಿಚಾರ ಮತ್ತಷ್ಟು ಚರ್ಚೆಯಾಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed