Last Updated:
ಸ್ಯಾಂಕಿ ಟ್ಯಾಂಕ್ ನಲ್ಲಿ ನೀರಿನ ಮಟ್ಟ ತೀವ್ರ ಕುಸಿತ, ಮಲ್ಲೇಶ್ವರಂ ನಿವಾಸಿಗಳು ಆತಂಕ, ತಜ್ಞರು ಒಳಹರಿವು, ಸೋರಿಕೆ, ಅಂತರ್ಜಲ ಕುಸಿತ ಎಚ್ಚರಿಕೆ, ಬಿಡಬ್ಲ್ಯೂಸಿಸಿ, IISc ಪರಿಶೀಲನೆ ಆರಂಭ.
ಬೆಂಗಳೂರು: ನಗರದ ಅತ್ಯಂತ ಸುಂದರ ಮತ್ತು ಐತಿಹಾಸಿಕ ಕೆರೆಗಳಲ್ಲಿ (Lake) ಒಂದಾದ ಸ್ಯಾಂಕಿ ಟ್ಯಾಂಕ್ (Sankey Tank) ಈಗ ಅಕ್ಷರಶಃ ಕಣ್ಣೀರು ಹಾಕುತ್ತಿದೆ. ದಿನದಿಂದ ದಿನಕ್ಕೆ ಇಲ್ಲಿನ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಸುತ್ತಮುತ್ತಲ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ನಾವು ಹುಟ್ಟಿ ಬೆಳೆದ ಈ ಮಲ್ಲೇಶ್ವರಂನಲ್ಲಿ (Malleswaram) ಇಂತಹ ದೃಶ್ಯವನ್ನು ಎಂದೂ ನೋಡಿರಲಿಲ್ಲ ಸ್ಥಳೀಯರು (Publics)ಬೇಸರ ವ್ಯಕ್ತಪಡಿಸಿದ್ದಾರೆ.
– ಸೋರಿಕೆಯ ಸಂಚು: ಕೆರೆಯ ಹೊರಹರಿವಿನ ಕವಾಟದಲ್ಲಿ (Valve) ಬಿರುಕು ಕಾಣಿಸಿಕೊಂಡು ಕೆಳಭಾಗದ ಕಾಲುವೆಗೆ ನೀರು ವ್ಯರ್ಥವಾಗಿ ಹರಿಯುತ್ತಿರಬಹುದು.
– ಅಂತರ್ಜಲದ ಕುಸಿತ: ಮಲ್ಲೇಶ್ವರಂ ಸುತ್ತಮುತ್ತ ಅಂತರ್ಜಲ ಮಟ್ಟ ಕುಸಿದಿರುವುದು ಕೆರೆಯ ಮೇಲೂ ಪ್ರಭಾವ ಬೀರುತ್ತಿರಬಹುದು.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ‘ಸಿಟಿಜನ್ಸ್ ಫಾರ್ ಸ್ಯಾಂಕಿ’ ತಂಡ ಸರ್ಕಾರಕ್ಕೆ ಪತ್ರ ಬರೆದಿದೆ. ಬಿಡಬ್ಲ್ಯೂಸಿಸಿ ಆಯುಕ್ತ ರಾಜೇಂದ್ರ ಕೆ.ವಿ. ಅವರು ಭಾರತೀಯ ವಿಜ್ಞಾನ ಸಂಸ್ಥೆಯ (IISc) ಮೊರೆ ಹೋಗಿದ್ದಾರೆ. ಈ ಕೆರೆಯನ್ನು ಉಳಿಸಿಕೊಳ್ಳಲು ಸುತ್ತಮುತ್ತಲಿನ ತೆರೆದ ಬಾವಿಗಳ ಮ್ಯಾಪಿಂಗ್ ಮಾಡುವುದು ಅನಿವಾರ್ಯವಾಗಿದೆ.
Bangalore [Bangalore],Bangalore,Karnataka
May 07, 2026 10:01 AM IST













