Achievement: ಕೊಹ್ಲಿ ಪಕ್ಕ ಮಲೆನಾಡ ಕನ್ನಡಿಗ; ವಿರಾಟ್‌ಗೆ ಖಡಕ್‌ ಬೌಲಿಂಗ್‌ ಮಾಡಿದ ಈ ಹುಡುಗ ಯಾರು ಗೊತ್ತಾ? ಕುಗ್ರಾಮದಿಂದ ಕಿಂಗ್‌ ಕೊಹ್ಲಿವರೆಗೆ! | ಕ್ರೀಡಾ ಸುದ್ದಿ | ACTPnews

ನಾಗರಾಜ್‌ ಹೆಗಡೆ


Last Updated:

ಮಕ್ಕಿಗದ್ದೆಯ ನಾಗರಾಜ ಹೆಗಡೆ, ವಿರಾಟ್ ಕೊಹ್ಲಿ ಜೊತೆ Oakley Meta Sunglasses ಅಂತರಾಷ್ಟ್ರೀಯ ಜಾಹೀರಾತಿನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ, ಕರ್ನಾಟಕ ತಂಡದಲ್ಲಿ ಆಡೋದು ತಮ್ಮ ಗುರಿ ಎಂದು ಹೇಳಿದ್ದಾರೆ

ನಾಗರಾಜ್‌ ಹೆಗಡೆ
ನಾಗರಾಜ್‌ ಹೆಗಡೆ

ಮಲೆನಾಡಿನ ಸಣ್ಣ ಊರಿನಿಂದ ಹೊರಟ ಒಬ್ಬ ಯುವಕ, ಕೋಟಿ ಮಂದಿ ಕನಸು ಕಾಣುವ ಜಾಗದಲ್ಲಿ ನಿಂತಿದ್ದಾನೆ!  ಸಾಕ್ಷಾತ್ ವಿರಾಟ್ ಕೊಹ್ಲಿ (Virat Kohli) ಅವರ ಪಕ್ಕದಲ್ಲಿ! ಹೌದು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಕ್ಕಿಗದ್ದೆ ಮೂಲದ, ಪ್ರಸ್ತುತ ಸಿದ್ದಾಪುರದ (Siddapura) ವಿದ್ಯಾಗಿರಿಯಲ್ಲಿ ವಾಸವಿರುವ ನಾಗರಾಜ ಹೆಗಡೆ ಎಂಬ ಯುವ ಪ್ರತಿಭೆ, ವಿಶ್ವಪ್ರಸಿದ್ಧ ‘ಓಕ್ಲಿ ಮೆಟಾ ಸನ್ ಗ್ಲಾಸ್’ (Oakley Meta Sunglasses) ಅಂತರಾಷ್ಟ್ರೀಯ ಜಾಹೀರಾತಿನಲ್ಲಿ (Advertisement)  ಕಿಂಗ್ ಕೊಹ್ಲಿ ಜೊತೆ ಸ್ಕ್ರೀನ್ ಹಂಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬಹು ಕ್ರೀಡಾ ಪ್ರವೀಣ ಈ ನಾಗರಾಜ!

ಖ್ಯಾತ ಶಿಕ್ಷಕ ದಂಪತಿಗಳಾದ ತಂದೆ ಜಿ.ಜಿ. ಹೆಗಡೆ ಮತ್ತು ತಾಯಿ ರೂಪಾ ಹೆಬ್ಬಾರ ಅವರ ಪುತ್ರನಾಗಿ ಹುಟ್ಟಿ, ಬಾಲ್ಯದಿಂದಲೇ ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ನಾಗರಾಜ, ಸಿದ್ದಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ನಂತರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪದವಿ ಹಾಗೂ ಜೈನ್ ಕಾಲೇಜಿನಲ್ಲಿ MBA ಪೂರೈಸಿದ ಈ ಯುವಕ, ಕೇವಲ ಓದಿಗೆ ಮಾತ್ರ ಸೀಮಿತವಾಗದೆ ಕ್ರಿಕೆಟ್, ವಾಲಿಬಾಲ್ ಮತ್ತು ಬ್ಯಾಡ್ಮಿಂಟನ್ ಮೂರೂ ಕ್ರೀಡೆಗಳಲ್ಲಿ ಗುರುತಿಸಿಕೊಂಡರು.

ಕಳೆದ 5 ವರ್ಷಗಳ ಕಠಿಣ ಪರಿಶ್ರಮ

ಪದವಿಯ ನಂತರವೂ ಕ್ರೀಡೆಯ ಬಗೆಗಿನ ಆಸಕ್ತಿ ಬಿಟ್ಟುಕೊಡದ ನಾಗರಾಜ, ಕಳೆದ ಐದು ವರ್ಷಗಳಿಂದ ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಕ್ರಿಕೆಟ್ ಅಭ್ಯಾಸ ನಡೆಸುತ್ತಾ, ಕ್ರೀಡಾ ವಿಜ್ಞಾನದಲ್ಲಿ (Sports Science) ಸಹ ಪರಿಣತಿ ಪಡೆದಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನ ’91 ಸ್ಪೋರ್ಟಿಂಗ್’ ಕಂಪನಿಯಲ್ಲಿ ಸ್ಟ್ರೆಂತ್ ಎಂಡ್ ಕಂಡೀಷನಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
30 ಜನರ ನಡುವೆ ಆಯ್ಕೆ

ಈ ಜಾಹೀರಾತಿನ ಆಯ್ಕೆ ಪ್ರಕ್ರಿಯೆ ಸುಲಭವಾಗಿರಲಿಲ್ಲ! ಸಂಸ್ಥೆ ನಡೆಸಿದ ಕಠಿಣ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 30 ಜನ ಸ್ಪರ್ಧಿಗಳ ನಡುವೆ ನಾಗರಾಜ ತಮ್ಮ ಅದ್ಭುತ ಆಟದ ವೈಖರಿ ಮತ್ತು ಅಸಾಧಾರಣ ದೈಹಿಕ ಕ್ಷಮತೆಯಿಂದ (Fitness) ಆಯ್ಕೆದಾರರ ಗಮನ ಸೆಳೆದು, ಅಂತಿಮವಾಗಿ ವಿಜೇತರಾದರು. “ಕೊಹ್ಲಿ ಜೊತೆ ಕೆಲಸ ಮಾಡಿದ್ದು ನನ್ನ ವರ್ಷಗಳ ಪರಿಶ್ರಮಕ್ಕೆ ಸಿಕ್ಕ ಗೌರವ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ತಂಡ ಹಾಗೂ ಭಾರತ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದೇ ನನ್ನ ಗುರಿ” ಎನ್ನುತ್ತಾರೆ ನಾಗರಾಜ್‌.

ಮಕ್ಕಿಗದ್ದೆ ಮಣ್ಣಿಂದ ಮೇರು ಆಟಗಾರನ ಗರಡಿವರೆಗೆ!

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Achievement: ಕೊಹ್ಲಿ ಪಕ್ಕ ಮಲೆನಾಡ ಕನ್ನಡಿಗ; ವಿರಾಟ್‌ಗೆ ಖಡಕ್‌ ಬೌಲಿಂಗ್‌ ಮಾಡಿದ ಈ ಹುಡುಗ ಯಾರು ಗೊತ್ತಾ? ಕುಗ್ರಾಮದಿಂದ ಕಿಂಗ್‌ ಕೊಹ್ಲಿವರೆಗೆ!



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed