Hit and Run Case: ಗುರುಗ್ರಾಮ್ ಹಿಟ್ ಅಂಡ್ ರನ್​ ಕೇಸ್​ ಬಗ್ಗೆ ಆರೋಪಿ ಮೊದಲ ರಿಯಾಕ್ಷನ್! ಬೈಕರ್​​ಗೆ ಡಿಕ್ಕಿ ಹೊಡೆದ ಬಗ್ಗೆ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಕಲ್ಯಾಣ್ ಬೈನ್ಸ್ಲಾ


Last Updated:

ಹಿಟ್ ಅಂಡ್ ರನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಖಾಸಗಿ ಮಾಧ್ಯಮಕ್ಕೆ ಮಾತನಾಡಿದ್ದಾರೆ. ಬೈಕ್ ಸವಾರರು ಪದೇ ಪದೇ ನನ್ನ ಕಾರಿನ ಮುಂದೆ ಬಂದು ಬೈಕ್‌ನ ವೇಗವನ್ನು ಕಡಿಮೆ ಮಾಡುತ್ತಿದ್ದರು. ನಾನೇನು ರೋಡ್​​ನಲ್ಲಿ ಸಿಕ್ಕಸಿಕ್ಕವರೆಲ್ಲರಿಗೂ ಡಿಕ್ಕಿ ಹೊಡೆಯುತ್ತಾ ತಿರುಗುತ್ತಿದ್ದೇನೆಯೇ? ನೀವು ಬೇಕಿದ್ದರೆ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಬಹುದು ಎಂದು ತಿಳಿಸಿದ್ದಾರೆ.

ಕಲ್ಯಾಣ್ ಬೈನ್ಸ್ಲಾ
ಕಲ್ಯಾಣ್ ಬೈನ್ಸ್ಲಾ

ಗುರುಗ್ರಾಮ್ ಹಿಟ್ ಅಂಡ್ ರನ್ ಪ್ರಕರಣದ ಆರೋಪಿ ಕಲ್ಯಾಣ್ ಬೈನ್ಸ್ಲಾ (Kalyan Bainsla) ದಿಢೀರ್ ಮಾಧ್ಯಮದ ಮುಂದೆ ಪ್ರತ್ಯಕ್ಷವಾಗಿದ್ದು, ಮಹಿಳಾ ಬೈಕರ್‌ಗೆ ತಾನು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿದ್ದೇನೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಈ ಅಪಘಾತವು ಆಕಸ್ಮಿಕವಾಗಿ ನಡೆದಿದೆ ಮತ್ತು ಬೈಕ್​ ಚಲಾಯಿಸುತ್ತಿದ್ದದ್ದು ಮಹಿಳೆ ಎಂಬುದು ತನಗೆ ತಿಳಿದಿರಲಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ. ಘಟನೆಯ ಸಂಪೂರ್ಣ ಸರಣಿಯನ್ನು ಸಿಸಿಟಿವಿ (CCTV) ದೃಶ್ಯಾವಳಿಗಳ ಮೂಲಕ ಪರಿಶೀಲಿಸಬೇಕು ಎಂದು ಬೈನ್ಸ್ಲಾ ಕೇಳಿಕೊಂಡಿದ್ದಾರೆ. ಇಬ್ಬರು ಬೈಕರ್‌ಗಳು ತನ್ನ ಕಾರನ್ನು ಪದೇ ಪದೇ ಓವರ್‌ಟೇಕ್ ಮಾಡಿ, ನಂತರ ತನ್ನ ಕಾರಿನ ಮುಂದಕ್ಕೆ ಬರುತ್ತಿದ್ದರು. ವೇಗವನ್ನು ಕಡಿಮೆ ಮಾಡುತ್ತಿದ್ದರು, ಇದರಿಂದ ಅಪಘಾತವಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed