Celebrity Taxpayers: ಅತ್ಯಧಿಕ ತೆರಿಗೆ ಪಾವತಿಸಿದ ಸೆಲೆಬ್ರಿಟಿ! ಬರೋಬ್ಬರಿ 92 ಕೋಟಿ ರೂ. ಟ್ಯಾಕ್ಸ್ ಕಟ್ಟಿದ ನಟ | India s biggest celebrity taxpayer paid 92 crore rs tax in 2024 | | ACTPnews

Celebrity Taxpayers: ಅತ್ಯಧಿಕ ತೆರಿಗೆ ಪಾವತಿಸಿದ ಸೆಲೆಬ್ರಿಟಿ! ಬರೋಬ್ಬರಿ 92 ಕೋಟಿ ರೂ. ಟ್ಯಾಕ್ಸ್ ಕಟ್ಟಿದ ನಟ | India s biggest celebrity taxpayer paid 92 crore rs tax in 2024 |


ಸಿನೆಮಾ ಸೆಲೆಬ್ರಿಟಿಗಳು ಸಹ ತಮ್ಮ ಗಳಿಕೆಯಲ್ಲಿ ದೊಡ್ಡ ಪ್ರಮಾಣದ ಮೊತ್ತದ ತೆರಿಗೆಯನ್ನು ಪಾವತಿಸುತ್ತಾರೆ ಮತ್ತು ತೆರಿಗೆ ಪಾವತಿಸುವುದರಲ್ಲಿ ಇವರು ದೊಡ್ಡ ದೊಡ್ಡ ಉದ್ಯಮಿಗಳಿಗೆ ಪ್ರತಿಸ್ಪರ್ಧಿಯಾಗಿ ಹೊರ ಹೊಮ್ಮಬಹುದು.

ಸಾಧಾರಣವಾಗಿ ನಮಗೆಲ್ಲಾ ನಮ್ಮ ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಬನ್ನಿ ಹಾಗಾದರೆ ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು ಅಂತ ತಿಳಿದುಕೊಂಡು ಬರೋಣ.

ಭಾರತದಲ್ಲಿ, ಟಾಪ್ ಚಲನಚಿತ್ರ ತಾರೆಯರು ಮತ್ತು ಕ್ರೀಡಾ ಐಕಾನ್‌ಗಳು ಕೋಟಿಗಟ್ಟಲೆ ಹಣವನ್ನು ತೆರಿಗೆಯ ರೂಪದಲ್ಲಿ ಪಾವತಿಸುತ್ತಾರೆ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಎಂದರೆ ಅದು ನಟ ಶಾರುಖ್ ಖಾನ್ ಅಂತೆ. ಅವರು 2023-2024 ರಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 92 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರಂತೆ.

ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಮಾಡಿದ ಫಾರ್ಚೂನ್ ಇಂಡಿಯಾ

ಫಾರ್ಚೂನ್ ಇಂಡಿಯಾ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಪಟ್ಟಿಯಲ್ಲಿ 2023-24 ಹಣಕಾಸು ವರ್ಷಕ್ಕೆ ಹೆಚ್ಚಿನ ತೆರಿಗೆ ಪಾವತಿಸಿದ ಖ್ಯಾತನಾಮರು ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸೂಪರ್ ಸ್ಟಾರ್ ಶಾರುಖ್ ಖಾನ್ ಅಗ್ರಸ್ಥಾನದಲ್ಲಿದ್ದು, ಅಚ್ಚರಿಯಿಲ್ಲದ ರೀತಿಯಲ್ಲಿ 92 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಿದ್ದಾರೆ.

ನಟ ಶಾರುಖ್ ಖಾನ್ 2023 ರಲ್ಲಿ ಮೂರು ಬ್ಲಾಕ್‌ಬಸ್ಟರ್ ಚಿತ್ರಗಳ ಬಿಡುಗಡೆಗಳೊಂದಿಗೆ ಬಂಪರ್ ಹೊಂದಿದ್ದರಿಂದ ಇದನ್ನು ನಿರೀಕ್ಷಿಸಲಾಗಿತ್ತು. ಆದರೆ ಅವರೇ ಅತಿ ಹೆಚ್ಚು ತೆರಿಗೆ ಪಾವತಿಸಿದ್ದರ ಬಗ್ಗೆ ಅನೇಕರಿಗೆ ಆಶ್ಚರ್ಯಕರವಾಗಿರಬಹುದು. ನಟ ಶಾರುಖ್ ಖಾನ್ ನಂತರದ ಹೆಸರು ತಮಿಳು ಚಿತ್ರೋದ್ಯಮದ ಸ್ಟಾರ್ ವಿಜಯ್, ಅಭಿಮಾನಿಗಳಲ್ಲಿ ದಳಪತಿ ಎಂದು ಜನಪ್ರಿಯವಾಗಿದೆ. 50 ವರ್ಷ ವಯಸ್ಸಿನ ಈ ನಟ 2023-24 ರಲ್ಲಿ 80 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಿದ್ದಾರೆ.

ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿ ನಟ ಸಲ್ಮಾನ್ ಖಾನ್ (75 ಕೋಟಿ ರೂಪಾಯಿ), ಅಮಿತಾಭ್ ಬಚ್ಚನ್ (71 ಕೋಟಿ ರೂಪಾಯಿ) ಮತ್ತು ವಿರಾಟ್ ಕೊಹ್ಲಿ (66 ಕೋಟಿ ರೂಪಾಯಿ) ಇದ್ದಾರೆ. ಈ ಪಟ್ಟಿಯಲ್ಲಿ ಅಗ್ರ ಶ್ರೇಯಾಂಕದ ಮಹಿಳಾ ಸೆಲೆಬ್ರಿಟಿಗಳಲ್ಲಿ ನಟಿ ಕರೀನಾ ಕಪೂರ್ ಅವರು 20 ಕೋಟಿ ರೂಪಾಯಿ ತೆರಿಗೆ ಪಾವತಿಸುವ ಮೂಲಕ ಟಾಪ್ 10 ಪಟ್ಟಿಯಿಂದ ಹೊರಗಿದ್ದಾರೆ.

ಶಾರುಖ್ ಖಾನ್ ಮತ್ತು ವಿಜಯ್ ಈ ಪಟ್ಟಿಯಲ್ಲಿ ಮುಂದಿರುವುದು ಹೇಗೆ ನೋಡಿ

2023-24 ರಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಪಟ್ಟಿಯಲ್ಲಿ ಶಾರುಖ್ ಖಾನ್ ಮತ್ತು ವಿಜಯ್ ಇಬ್ಬರೂ ಇರುವುದು ಅನೇಕರಿಗೆ ಆಶ್ಚರ್ಯ ಅಂತ ಅನ್ನಿಸಬಹುದು. ನಟ ಶಾರುಖ್ ಖಾನ್ ಜನವರಿ 2023 ರಲ್ಲಿ ಪಠಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪುನರಾಗಮನವನ್ನು ಮಾಡಿದರು, ಇದು ವಿಶ್ವದಾದ್ಯಂತ 1000 ಕೋಟಿ ರೂಪಾಯಿಯನ್ನು ಗಳಿಸಿತು.

ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಡುಂಕಿ ಚಿತ್ರ ನಿರೀಕ್ಷೆಯ ಮಟ್ಟದಲ್ಲಿ ದೊಡ್ಡ ಹಿಟ್ ಆಗಲಿಲ್ಲ, ಆದರೆ ಅದು ಸಹ 400 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಯಿತು. ಲಾಭದ ಪಾಲು ಮತ್ತು ಗಳಿಕೆಗಳು ಸುಮಾರು ಒಂದು ದಶಕದ ನಂತರ ಶಾರುಖ್‌ರನ್ನು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನನ್ನಾಗಿ ಮಾಡಿತು.

ಇದನ್ನೂ ಓದಿ: Pooja Gandhi: ದೇವದಾಸನ ಜೊತೆಗೆ ಮಳೆ ಹುಡುಗಿ! ಇದಕ್ಕೇನಂತಾರೆ ಈಗ ಪೂಜಾ ಗಾಂಧಿ?

ಅದೇ ರೀತಿ ವಿಜಯ್ 2023-24ರಲ್ಲಿ ದೊಡ್ಡ ಬ್ಲಾಕ್‌ಬಸ್ಟರ್ ಚಿತ್ರಗಳ ಬಿಡುಗಡೆ ಹೊಂದಿದ್ದರು. ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್, ಇದು 600 ಕೋಟಿಗೂ ಹೆಚ್ಚು ಹಣವನ್ನು ಗಳಿಸಿತು. ಕೆಲವು ವರದಿಗಳ ಪ್ರಕಾರ, ಈ ನಟ ಈ ಚಿತ್ರಕ್ಕಾಗಿ 200 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದರಂತೆ. 2023-24 ರ ಹಣಕಾಸು ವರ್ಷದಲ್ಲಿ ಈ ಇಬ್ಬರ ಸೆಲೆಬ್ರಿಟಿಗಳು ಮುಂಗಡ ತೆರಿಗೆ ಪಾವತಿಗಳನ್ನು ಬಳಸಿಕೊಂಡು ಅಂಕಿ ಅಂಶಗಳನ್ನು ಲೆಕ್ಕ ಹಾಕಲಾಗಿದೆ ಎಂದು ಫಾರ್ಚೂನ್ ಇಂಡಿಯಾ ನಿರ್ದಿಷ್ಟಪಡಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed