Last Updated:
Reality Show: ರಿಯಾಲಿಟಿ ಶೋನಲ್ಲಿ ವಿವಾಹೇತರ ಸಂಬಂಧ ಸಮಸ್ಯೆಯಲ್ಲ. ಅದು ಕಾಮನ್, ಅದರಲ್ಲೇನು ತಪ್ಪು ಎನ್ನುವಂತಹ ಬಹಿರಂಗ ಚರ್ಚೆ ನಡೆಸಿದ್ದು ಭಾರೀ ಟೀಕೆಗೆ ಕಾರಣವಾಗಿದೆ.
ಇತ್ತೀಚೆಗೆ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ (Reality Show) ಒಂದು ಸಿಕ್ಕಾಪಟ್ಟೆ ಟೀಕೆಯನ್ನು ಎದುರಿಸುತ್ತಿದೆ. ವಿವಾಹೇತರ ಸಂಬಂಧ (Extra Marital Relationship), ಸಂಗಾತಿಗೆ ವಂಚನೆ, ಅಕ್ರಮ ಸಂಬಂಧವನ್ನು ವೈಭವೀಕರಿಸುತ್ತಿರುವ ವಿಚಾರವಾಗಿ ನೆಟ್ಫ್ಲಿಕ್ಸ್ನಲ್ಲಿ ಪ್ರೀಮಿಯರ್ ಆದ ದೇಸಿ ಬ್ಲಿಂಗ್ ಈಗ ಪ್ರಮುಖರಿಂದ ಟೀಕೆಯನ್ನು ಎದುರಿಸುತ್ತಿದೆ.
ವಿವಾಹೇತರ ಸಂಬಂಧದ ಬಗ್ಗೆ ಈ ಶೋನಲ್ಲಿ ಭಾಗವಹಿಸುವವರು ನೀಡಿದ ಹೇಳಿಕೆಗಳು ಎಲ್ಲಾ ಟ್ರೋಲ್ಗೆ ಕಾರಣವಾಗಿದೆ. ಸತೀಶ್ ಸನ್ಪಾಲ್ ಹಾಗೂ ತಬಿಂದಾ ಸನ್ಪಾಲ್ ಅವರು ವಿವಾಹೇತರ ಸಂಬಂಧ ವೈಭವೀಕರಿಸುವ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ಶೋನಿಂದ ಕಮೆಂಟ್ಸ್ ಹಾಗೂ ಕ್ಲಿಪ್ ವೈರಲ್ ಆಗುತ್ತಿದ್ದಂತೆ ತೀವ್ರ ಟೀಕೆ ಶುರುವಾಗಿದೆ.
ಸರಣಿಯಲ್ಲಿ ತೋರಿಸಿರುವ ದಂಪತಿ ನೀಡಿದ ಹೇಳಿಕೆಗಳು ಮತ್ತು ವರ್ತನೆಯನ್ನು ಹಲವಾರು ವೀಕ್ಷಕರು ಟೀಕಿಸಿದರು. ಆಧುನಿಕ ಸಂಬಂಧಗಳು ಮತ್ತು ಐಷಾರಾಮಿ ಜೀವನಶೈಲಿ ಮನೋರಂಜನೆ ಎನ್ನುವ ಹೆಸರಿನಲ್ಲಿ ರಿಯಾಲಿಟಿ ಶೋ ಮಾಡಿ ಕೆಟ್ಟ ಸಂಬಂಧಗಳ ಮಾನದಂಡಗಳನ್ನು ವೈಭವೀಕರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹಿನ್ನಡೆಯ ನಡುವೆ, ಚಲನಚಿತ್ರ ನಿರ್ಮಾಪಕಿ ಲಕ್ಷ್ಮಿ ಆರ್ ಅಯ್ಯರ್ ಕೂಡ ವಿವಾದದ ಬಗ್ಗೆ ಪ್ರತಿಕ್ರಿಯಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಅವರು ಪ್ರತಿಕ್ರಿಯಿಸಿ, “ಒಂದೇ ಮಹಿಳೆಯ ಜೊತೆಯೇ ಪದೇ ಪದೇ ಇದ್ದು ತನಗೆ ಮೋಸ ಮಾಡಬಾರದು. ಅದು ಬಿಟ್ಟರೆ ಅದರಿಂದ ನನಗೆ ತೊಂದರೆ ಇಲ್ಲ ಎಂದು ಹೆಂಡತಿ ಹೇಳುವ ಒಂದು ರಿಯಾಲಿಟಿ ಶೋನ ಕ್ಲಿಪ್ ಅನ್ನು ನೋಡಿದೆ. ಈ ಅಸಂಬದ್ಧತೆಯನ್ನು ಕಾಮನ್ ಎಂದು ತೋರಿಸುವುದನ್ನು ನಿಲ್ಲಿಸಿ ಎಂದಿದ್ದಾರೆ.
“ಆಧುನಿಕ” ಅಥವಾ “ಕೂಲ್” ಹೆಸರಿನಲ್ಲಿ ಇಂಥಹ ಕೆಟ್ಟ ಉದಾಹರಣೆಗಳನ್ನು ನೀಡುವುದನ್ನು ನಿಲ್ಲಿಸಿ. ನಿಷ್ಠರಾಗಿರುವುದು ಮೋಸ ಮಾಡುವುದಕ್ಕಿಂತಲೂ ಆಕರ್ಷಕವಾಗಿದೆ. ಪ್ರಾಮಾಣಿಕವಾಗಿರುವುದು ಇನ್ನೂ ಆಕರ್ಷಕವಾಗಿದೆ. ಸಾಮಾಜಿಕ ಮಾಧ್ಯಮವು ನಿಮ್ಮನ್ನು ಬೇರೆ ರೀತಿಯಲ್ಲಿ ಮನವೊಲಿಸದಂತೆ ನೋಡಿಕೊಳ್ಳಿ ಎಂದಿದ್ದಾರೆ.
“ಹೌದು… ಒಂದೇ ಮಹಿಳೆಯನ್ನು ಗಂಡ ಪದೇ ಪದೇ ಭೇಟಿಯಾದರೆ ಆ ಪುರುಷ ಪ್ರೀತಿಯಲ್ಲಿ ಬೀಳುತ್ತಾನೆ ಎಂಬುದು ಸ್ಪಷ್ಟ” ಎಂದು ಕಿರುತೆರೆ ನಟಿ ದೇವೋಲೀನಾ ಭಟ್ಟಾಚಾರ್ಜಿ ಪ್ರತಿಕ್ರಿಯಿಸಿದ್ದಾರೆ.
ದೇಸಿ ಬ್ಲಿಂಗ್ನ ಉದ್ದಕ್ಕೂ, ಸತೀಶ್ ಸನ್ಪಾಲ್ ಪದೇ ಪದೇ ಸ್ತ್ರೀದ್ವೇಷ ಮತ್ತು ಲೈಂಗಿಕತೆಯ ಹೇಳಿಕೆಗಳನ್ನು ನೀಡುತ್ತಿದ್ದರೆ, ತಬಿಂದಾ ಸನ್ಪಾಲ್ ತನ್ನ ಕೆಲಸ ಸಮರ್ಥಿಸಿಕೊಳ್ಳುತ್ತಲೇ ಇದ್ದರು. ತಾನು ಅವನನ್ನು ನಂಬುತ್ತೇನೆ ಮತ್ತು ಪ್ರೀತಿಸುತ್ತೇನೆ ಎಂದು ಹೇಳಿಕೊಳ್ಳುತ್ತಾರೆ.
ಟೀಕೆಗಳ ಹೊರತಾಗಿಯೂ, ದೇಸಿ ಬ್ಲಿಂಗ್ ಆನ್ಲೈನ್ನಲ್ಲಿ ಟ್ರೆಂಡಿಂಗ್ ವಿಷಯವಾಗಿ ಮುಂದುವರೆದಿದೆ. ವೈರಲ್ ಕ್ಲಿಪ್ಗಳು ರಿಲೀಸ್ ಆದ ನಂತರ ಕಾರ್ಯಕ್ರಮದ ಸುತ್ತಲಿನ ಚರ್ಚೆಗಳು ತೀವ್ರಗೊಂಡವು.
Bangalore,Karnataka













