Last Updated:
ಕರ್ನಾಟಕದಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಪೊಲೀಸ್ ಅನುಮತಿ ಪಡೆಯುವುದು ಹೇಗೆ? ಬೇಕಾಗುವ ದಾಖಲೆಗಳು, NOC, ಅಗ್ನಿಶಾಮಕ ಪ್ರಮಾಣಪತ್ರ, ವಿದ್ಯುತ್ ಅನುಮತಿ ಹಾಗೂ ಹಬ್ಬದ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು: ರಾಜ್ಯದಲ್ಲಿ ಗೌರಿ–ಗಣೇಶ ಹಬ್ಬದ ಸಂಭ್ರಮಕ್ಕೆ (Celebration) ಸಿದ್ಧತೆ ಆರಂಭವಾಗಿದೆ. ನಿಮ್ಮ ಬೀದಿ, ಬಡಾವಣೆ ಅಥವಾ ಏರಿಯಾದಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸುತ್ತಿದ್ದರೆ, ಪೊಲೀಸ್ ಅನುಮತಿ ಪಡೆಯುವುದು ಸೇರಿದಂತೆ ಹಲವು ನಿಯಮಗಳನ್ನು (Rules) ಪಾಲಿಸಬೇಕಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೊದಲು ಸ್ಥಳೀಯ ಪೊಲೀಸ್ ಠಾಣೆ (Police Station) ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅನುಮತಿ ಹಾಗೂ ನಿರಾಕ್ಷೇಪಣಾ ಪತ್ರಗಳನ್ನು ಪಡೆಯಬೇಕಾಗುತ್ತದೆ. ಆಯೋಜಕರಿಗೆ (Organizers) ಪ್ರಕ್ರಿಯೆ ಸುಲಭವಾಗುವಂತೆ ಹಲವು ಕಡೆ ಏಕಗವಾಕ್ಷಿ ಕೇಂದ್ರ ವ್ಯವಸ್ಥೆ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.














