Last Updated:
ಪ್ರಮುಖವಾಗಿ ವಿವೋ ದೊಡ್ಡ ಮಟ್ಟದ ಸ್ಪಾನ್ಸರ್ಶಿಪ್ ನೀಡುತ್ತಿದೆ. ಪ್ರತಿ ವರ್ಷ 440 ಕೋಟಿ ರೂಪಾಯಿ ಹಣ ಬಿಸಿಸಿಐಗೆ ಸಂದಾಯವಾಗುತ್ತಿದೆ. ಹೀಗಾಗಿ, ವಿವೋ ಜೊತೆಗಿನ ಒಪ್ಪಂದ ರದ್ದು ಅಸಾಧ್ಯವೇ ಆಗಿದೆ.
ಭಾರತ ಗಡಿಯಲ್ಲಿ ಡ್ರ್ಯಾಗನ್ ಉಪಟಳ ಹೆಚ್ಚುತ್ತಿದ್ದಂತೆ ಚೀನಾ ವಸ್ತುಗಳನ್ನು ಬ್ಯಾನ್ ಮಾಡುವಂತೆ ಆಂದೋಲನ ಆರಂಭಗೊಂಡಿದೆ. ಚೀನಾ ಆ್ಯಪ್ಗಳನ್ನು ಡೀಲೀಟ್ ಮಾಡುವಂತೆ ಅನೇಕರು ಕೋರುತ್ತಿದ್ದಾರೆ. ಈ ಮಧ್ಯೆ ವಿವೋ ಐಪಿಎಲ್ಗೆ ನೀಡಿರುವ ಸ್ಪಾನ್ಸರ್ಶಿಪ್ ರದ್ದು ಮಾಡುವಂತೆ ಆಗ್ರಹ ಕೇಳಿ ಬಂದಿದೆ. ಈ ಬಗ್ಗೆ ಐಸಿಸಿ ನಿಜವಾಗಲೂ ಗಂಭೀರವಾಗಿ ಗಮನ ಹರಿಸಲಿದೆಯೇ? ಇದಕ್ಕೆ ತಜ್ಞರು ಏನಂತಾರೆ ಎಂಬುದಕ್ಕೆ ಇಲ್ಲಿದೆ ಉತ್ತರ.
ಇತ್ತೀಚೆಗೆ ಮಾತನಾಡಿದ್ದ ಬಿಸಿಸಿಐ ಖಜಾಂಚಿ, ವಿವೋ ಜೊತೆ ಮಾಡಿಕೊಂಡಿರುವ ಒಪ್ಪಂದ ರದ್ದು ಮಾಡುವ ಆಲೋಚನೆ ಇಲ್ಲ. ಸ್ಪಾನ್ಸರ್ಶಿಪ್ಗೆ ಚೀನಾ ನೀಡುವ ಹಣ ನೇರವಾಗಿ ಭಾರತಕ್ಕೆ ಬರುತ್ತದೆ. ಇದರಿಂದ ಭಾರತ ಸರ್ಕಾರಕ್ಕೆ ಲಾಭ ಇದೆ ಎಂದು ಹೇಳುವ ಮೂಲಕ ಸ್ಪಾನ್ಸರ್ಶಿಪ್ ಕೈ ಬಿಡೋ ವಿಚಾರ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಚೀನಾ ಕಂಪನಿಗಳು ಕೇವಲ ಇಂಡಿಯಾದ ಕ್ರಿಕೆಟ್ಮೇಲೆ ಮಾತ್ರ ಹೂಡಿಕೆ ಮಾಡಿಲ್ಲ. ಚೀನಾ ಸಂಸ್ಥೆಗಳು ಸ್ಮಾರ್ಟ್ಫೋನ್, ಆರ್ಥಿಕ ವಲಯ, ಆನ್ಲೈನ್ ಗೇಮಿಂಗ್ ಸೇರಿ ಅನೇಕ ವಲಯಗಳ ಮೇಲೆ ಹೂಡಿಕೆ ಮಾಡಿವೆ. ಈಗ ಏಕಾಏಕಿ ಚೀನಾ ಸಂಸ್ಥೆಗಿನ ಜೊತೆಗಿನ ಒಪ್ಪಂದ ರದ್ದು ಮಾಡಿದರೆ ಈ ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಿ ತಮಾಗಾದ ನಷ್ಟವನ್ನು ತುಂಬಿಕೊಡುವಂತೆ ಕೇಳಬಹುದಂತೆ. ಏಕೆಂದರೆ ಅವರು ಮಾಡಿಕೊಂಡಿರುವ ಒಪ್ಪಂದಲ್ಲಿಯೇ ಆ ರೀತಿಯ ನಿಯಮಗಳು ಇವೆಯಂತೆ.
ವಿಚಿತ್ರ ಎಂದರೆ, ಅನೇಕ ಚೀನಾ ಸಂಸ್ಥೆಗಳು ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಂಡಿವೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಬಿಸಿಐ ಜೊತೆ ಒಪ್ಪಂದ ಮಾಡಿಕೊಂಡಿರುವ ಬೈಜುಸ್, ಪೇಟಿಎಂ, ಡ್ರೀಮ್ ಇಲವೆನ್ ಕಂಪನಿಗಳ ಮೇಲೆ ಚೀನಾ ಹೂಡಿಕೆ ದಾರರ ಹಣವಿದೆ.
ಇನ್ನು, ಪ್ರಮುಖವಾಗಿ ವಿವೋ ದೊಡ್ಡ ಮಟ್ಟದ ಸ್ಪಾನ್ಸರ್ಶಿಪ್ ನೀಡುತ್ತಿದೆ. ಪ್ರತಿ ವರ್ಷ 440 ಕೋಟಿ ರೂಪಾಯಿ ಹಣ ಬಿಸಿಸಿಐಗೆ ಸಂದಾಯವಾಗುತ್ತಿದೆ. ಹೀಗಾಗಿ, ವಿವೋ ಜೊತೆಗಿನ ಒಪ್ಪಂದ ರದ್ದು ಅಸಾಧ್ಯವೇ ಆಗಿದೆ.
Jun 24, 2020 10:07 AM IST













