Last Updated:
ಬೆಂಗಳೂರು ಕಬ್ಬನ್ ಪಾರ್ಕ್ ನಲ್ಲಿ 10 ದಿನಗಳ ಮಾವು ಹಲಸು ಮೇಳ ಆರಂಭ, ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ರೈತರು ನೇರವಾಗಿ ಮಾರಾಟ, ರಫ್ತು ಗುಣಮಟ್ಟದ ತಳಿಗಳೂ ಲಭ್ಯ.
ಬೆಂಗಳೂರು: ಮಾವಿನ ಹಣ್ಣು (Mango) ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಮಿಶ್ರಿತ ಹಣ್ಣುಗಳನ್ನು ಕಂಡು ನೀವು ಆತಂಕದಲ್ಲಿದ್ದರೆ, ನಿಮಗಾಗಿ ಒಂದು ಅದ್ಭುತ ಅವಕಾಶ ಬಂದಿದೆ. ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ಬೆಂಗಳೂರಿನ (Bengaluru) ಕಬ್ಬನ್ ಉದ್ಯಾನವನದಲ್ಲಿ (Cubbon Park) ಇಂದಿನಿಂದ ರಾಜ್ಯ ಮಟ್ಟದ ಮಾವು ಮತ್ತು ಹಲಸು (Jackfruit) ಪ್ರದರ್ಶನ ಹಾಗೂ ಮಾರಾಟ ಮೇಳ ಆರಂಭಗೊಂಡಿದೆ. 10 ದಿನಗಳ (10 Days) ಕಾಲ ಈ ಮೇಳ ನಡೆಯಲಿದೆ.
ಈ ಬಾರಿ ಹವಾಮಾನ ವೈಪರೀತ್ಯದಿಂದ ಮಾವು ಸ್ವಲ್ಪ ತಡವಾಗಿದ್ದರೂ, ಮೇಳದಲ್ಲಿ ಚಿಕ್ಕಬಳ್ಳಾಪುರದ ಚಿಂತಾಮಣಿ, ರಾಮನಗರದ ಚನ್ನಪಟ್ಟಣ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಉತ್ತಮ ತಳಿಗಳು ಲಭ್ಯವಿವೆ. ವಿಶೇಷವೆಂದರೆ, ಅಮೆರಿಕ ಮತ್ತು ಜರ್ಮನಿಯಂತಹ ದೇಶಗಳಿಗೆ ರಫ್ತಾಗುವ ಗುಣಮಟ್ಟದ ಹಣ್ಣುಗಳನ್ನು ನೀವು ಇಲ್ಲಿ ಕಣ್ತುಂಬಿಕೊಳ್ಳಬಹುದು ಮತ್ತು ಸವಿಯಬಹುದು.
Bangalore,Karnataka













