Last Updated:
ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಟಾಕ್ಸಿಕ್ ಚಿತ್ರದ ಟೀಸರ್ ಬಗೆಗಿನ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಯಶ್ ಅವರ ಯಾವ ಚಿತ್ರ ಎದ್ದು ಬರುವ ಹಾಗೆ ಇದೆ ಹೇಳಿ? ಅಂತ ಮಾಧ್ಯಮಗಳಿಗೆ ಪ್ರಶ್ನೆ ಕೂಡ ಮಾಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ…
ರಾಕಿಂಗ್ ಸ್ಟಾರ್ ಯಶ್ (Rocking Star Yash) ಜನ್ಮ ದಿನಕ್ಕೆ ಬಂದ ಟೀಸರ್ ಧಮಾಕಾ ಮಾಡಿತ್ತು. ಒಳ್ಳೆ ಮಾತುಗಳಿಗಿಂತಲೂ ಇದೇನಿದು ಹೀಗೆ ಇದೆ ಅಂದವರೇ ಹೆಚ್ಚು. ಆದರೆ, ಯಶ್ ತಾಯಿ (Yash Mother) ಈ ಟೀಸರ್ ಬಗ್ಗೆ ಮಾತನಾಡಿದ್ದಾರೆ. ಟಾಕ್ಸಿಕ್ ಚಿತ್ರದ ಟೀಸರ್ (Toxic Movie Teaser) ಅನ್ನ ಅಟ್ರ್ಯಾಕ್ಷನ್ಗಾಗಿಯೇ ಆ ರೀತಿ ಮಾಡಿದ್ದಾರೆ. ಟೀಸರೇ ಇಡೀ ಸಿನಿಮಾ ಅಲ್ಲ. ಟೀಸರ್ ಅನ್ನೋದು ಒಂದು ಇನ್ವಿಟೇಷನ್ ಆಗಿರುತ್ತದೆ. ಇಡೀ ಸಿನಿಮಾ ಬೇರೆ ಇದೆ. ಟೀಸರ್ ನೋಡಿಯೇ ಸಿನಿಮಾ ಅಳೆಯಬೇಡಿ. ಟಾಕ್ಸಿಕ್ ಚಿತ್ರದಲ್ಲಿ (Toxic Movie) ಬೇರೆ ವಿಷಯ ಇದೆ. ಈ ಹಿಂದಿನ ಯಶ್ ಯಾವ ಚಿತ್ರದಲ್ಲಿ ವಲ್ಗ್ಯಾರಿಟಿ ಇದೆ ಹೇಳಿ? ಚಿತ್ರ ನೋಡುವುದಕ್ಕೆ ಥಿಯೇಟರ್ಗೆ ಹೋಗಿ ಎದ್ದು ಬಂದಿರೋದು ಇದಿಯಾ? ಹೀಗೆ ಯಶ್ ತಾಯಿ ಪ್ರಶ್ನೆ ಮಾಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಮುಂದೆ ಇದೆ ಓದಿ.
ಫಾರೀನ್ ಅವರು ನಮ್ಮ ಕನ್ನಡ ಚಿತ್ರಗಳನ್ನ ಯಾಕೆ ನೋಡ್ತಾರೆ ಹೇಳಿ? ಅವರ ಟೇಸ್ಟ್ಗೆ ತಕ್ಕನಾಗಿಯೇ ಸಿನಿಮಾ ಮಾಡ್ಬೇಕಾಗುತ್ತದೆ. ಆ ರೀತಿನೇ ಟೀಸರ್ ಇದೆ.
ಟೀಸರೇ ಇಡೀ ಸಿನಿಮಾ ಅಲ್ಲ…
ಈ ಟೀಸರ್ ಅನ್ನ ಅಟ್ರ್ಯಾಕ್ಷನ್ಗಾಗಿಯೇ ಮಾಡಿದ್ದಾರೆ. ಹಾಗಂತ ಟೀಸರೇ ಇಡೀ ಸಿನಿಮಾ ಅಲ್ಲ. ಈ ಚಿತ್ರ ಇನ್ನು ಥಿಯೇಟರ್ಗೆ ಬಂದೇ ಇಲ್ಲ. ಟೀಸರ್ ಅನ್ನೋದು ಒಂದು ಇನ್ವಿಟೇನ್ ಇದ್ದ ಹಾಗದೆ. ಇಡೀ ಸಿನಿಮಾ ಬೇರೆ ಇರುತ್ತದೆ.
ಯಶ್ ಅಭಿನಯದ ಯಾವ ಚಿತ್ರದಲ್ಲಿ ವಲ್ಗ್ಯಾರಿಟಿ ಇದೆ ಹೇಳಿ? ಚಿತ್ರ ನೋಡೋಕೆ ಥಿಯೇಟರ್ಗೆ ಹೋಗಿ ಎದ್ದು ಬಂದಿರೋದು ಇದಿಯಾ? ಇಲ್ಲ ಅಲ್ವಾ?
ಕನ್ನಡದಲ್ಲಿ ವಲ್ಗರ್ ಇರೋ ಸಿನಿಮಾಗಳು ಎಲ್ಲಿವೆ ಹೇಳಿ? ಮಚ್ಚು, ಲಾಂಗು ಇರೋ ಚಿತ್ರಗಳನ್ನ ಯುವಕರು ನೋಡ್ತಾರೆ. ಅವರು ಇಷ್ಟಪಡುವ ರೀತಿಯಲ್ಲಿಯೇ ಇಂದಿನ ಡೈರೆಕ್ಟರ್ಸ್ ಸಿನಿಮಾ ಮಾಡುತ್ತಿದ್ದಾರೆ.
ವಲ್ಗ್ಯಾರಿಟಿ ಯಾವ್ ಚಿತ್ರದಲ್ಲಿದೆ?
ಹಿಂದಿನ ಕಾಲದ ರೀತಿಯ ಚಿತ್ರಗಳನ್ನ ಇಂದಿನ ಯಾವ ಯುವಕರು ನೋಡ್ತಾರೆ ಹೇಳಿ? ಅವರು ನೋಡುವ ಹಾಗೆ ಇದ್ದರೆ ಆಯಿತು? ನಮ್ಮ ಡೈರೆಕ್ಟರ್ಸ್ ಅಂತಹದ್ದೆ ಸಿನಿಮಾ ಮಾಡ್ತಾರೆ. ಆದರೆ, ಇಂದಿನ ಸಿನಿಮಾ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಅವರ ಬೇಡಿಕೆಯಂತೆ ಸಿನಿಮಾ ಆಗುತ್ತಿವೆ ಅನ್ನೋದನ್ನೆ ಪುಷ್ಪಾ ಅರುಣ್ ಕುಮಾರ್ ಹೇಳಿಕೊಂಡಿದ್ದಾರೆ.
ಯಾವ ಚಿತ್ರ ವಲ್ಗರ್ ಆಗಿದೆ ಹೇಳಿ? ನಮ್ಮ ಕೊತ್ತಲವಾಡಿ ಚಿತ್ರ ಸಾಂಸಾರಿಕ ಚಿತ್ರ ಅಲ್ವೇ? ಈ ಚಿತ್ರಕ್ಕೆ ಥಿಯೇಟರ್ ಸಿಗಲಿಲ್ಲ ಬಿಡಿ. ಆದರೆ, ಕನ್ನಡದಲ್ಲಿ ಜನರ ಅಭಿರುಚಿಗೆ ತಕ್ಕನಾದ ಚಿತ್ರಗಳೇ ಬರ್ತಿವೆ ಅಂತಲೂ ಪುಷ್ಪಾ ಅರುಣ್ ಕುಮಾರ್ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ಆದರೆ, ನಮ್ಮ ಕನ್ನಡದಲ್ಲಿ ದೊಡ್ಡ ಚಿತ್ರ ಬರ್ತಿದೆ ಅಂತ ಹೆಮ್ಮೆ ಪಡಬೇಕಾ? ಇಲ್ಲವೆ ತಡವಾಗುತ್ತಿದೆ ಅಂತ ಬೇಸರ ಪಟ್ಟುಕೊಳ್ಳಬೇಕಾ ನೀವೇ ಹೇಳಿ ಅಂತಲೇ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್, ಮಾಧ್ಯಮಗಳ ವರದಿಗಾರರಿಗೆ ಪ್ರಶ್ನೆ ಮಾಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













