Chetan Chandra: ಬ್ರಹ್ಮಚಾರಿ ರಾಮಣ್ಣನ ಪೈಲ್ವಾನ್‌ಗಿರಿ! ಸೀರಿಯಲ್‌ಗಾಗಿ ಕುಸ್ತಿ ಕಲಿತ ಸಿಕ್ಸ್‌ಪ್ಯಾಕ್ ಚೇತನ್ ಚಂದ್ರ! | | ACTPnews

ಸೀರಿಯಲ್‌ಗಾಗಿಯೇ ಕುಸ್ತಿ ಕಲಿತ ಸಿಕ್ಸ್‌ಪ್ಯಾಕ್ ಚೇತನ್ ಚಂದ್ರ!


Last Updated:

ಮರ್ಯಾದೆ ರಾಮಣ್ಣ ಸೀರಿಯಲ್ ನಾಯಕ ನಟ ಚೇತನ್ ಚಂದ್ರ ಗರಡಿ ಮನೆಯಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಜಿಮ್‌ ಅಲ್ಲಿ ವರ್ಕೌಟ್ ಮಾಡ್ತಿದ್ದ ಚೇತನ್ ಈ ಸೀರಿಯಲ್‌ಗಾಗಿಯೇ ಅಖಾಡಕ್ಕೆ ಇಳಿದಿದ್ದಾರೆ. ಗರಡಿ ಮನೆಯ ಮಟ್ಟಿ ಅಗೆದಿದ್ದಾರೆ. ಇದರಿಂದ ತೇಟ್ ಪೈಲ್ವಾನ್ ರೀತಿ ಕಾಣಿಸುತ್ತಿದ್ದಾರೆ. ಈ ಸೀರಿಯಲ್‌ನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸೀರಿಯಲ್‌ಗಾಗಿಯೇ ಕುಸ್ತಿ ಕಲಿತ ಸಿಕ್ಸ್‌ಪ್ಯಾಕ್ ಚೇತನ್ ಚಂದ್ರ!
ಸೀರಿಯಲ್‌ಗಾಗಿಯೇ ಕುಸ್ತಿ ಕಲಿತ ಸಿಕ್ಸ್‌ಪ್ಯಾಕ್ ಚೇತನ್ ಚಂದ್ರ!

ಚೇತನ್ ಚಂದ್ರ (Chetan Chandra) ಯಾರು ಅಂತ ಗೊತ್ತೇ ಇದೆ. ಸೀರಿಯಲ್ ಮತ್ತು ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದಾರೆ. ಆದರೆ, ಕನ್ನಡದ ಸೀರಿಯಲ್ (Kannada Serial) ಒಂದಕ್ಕಾಗಿಯೇ ಚೇತನ್ ಚಂದ್ರ ಸಾಕಷ್ಟು ಕಷ್ಟಪಟ್ಟಿದ್ದಾರೆ. ಗರಡಿ ಮನೆ ಮಟ್ಟಿ ಹೊಡೆದಿದ್ದಾರೆ. ದಂಡು ಹೊಡೆದಿದ್ದಾರೆ. ಕುಸ್ತಿ ಮಾಡಿದ್ದಾರೆ. ಹೆಚ್ಚು ಕಡಿಮೆ 6 ತಿಂಗಳು ಇದನ್ನೆ ಮಾಡಿದ್ದಾರೆ. ಇಷ್ಟೆಲ್ಲ ಕಷ್ಟ ಆದ್ಮೇಲೆ ಪ್ರತಿ ಫಲ ಸಿಗೋದಿಲ್ವೇ? ಅದು ಸಿಕ್ಕಿದೆ. ಗರಡಿ ಪೈಲ್ವಾನ್ ರೂಪವೂ ಬಂದಿದೆ. ಇದರಿಂದ ಮರ್ಯಾದೆ ರಾಮಣ್ಣ (Maryade Ramanna) ಆಗಿದ್ದಾರೆ. ತೇಟ್ ಸಿನಿಮಾ ರೀತಿನೇ ಈ ಸೀರಿಯಲ್ (Serial) ಬಂದಿದೆ. ಇದರ ಇನ್ನಷ್ಟು ಕುತೂಹಲಕಾರಿ ವಿಷಯ ಇಲ್ಲಿದೆ ಓದಿ.

ಗರಡಿ ರಾಮಣ್ಣ…

ಮರ್ಯಾದೆ ರಾಮಣ್ಣ ಹೆಸರಿನ ಸಿನಿಮಾ ಬಂದಿದೆ. ಕೋಮಲ್ ಈ ಚಿತ್ರದ ನಾಯಕ ಅನ್ನೋದು ಗೊತ್ತೇ ಇದೆ. ಆದರೆ, ಸ್ಟಾರ್ ಸುವರ್ಣ ವಾಹಿನಿಯ ಈ ರಾಮಣ್ಣ ಅಮ್ಮನ ಪ್ರೀತಿಯ ಮಗನೇ ಆಗಿದ್ದಾರೆ.

Star suvarna Maryade Ramanna Chetan Chandra Jeevitha Vasishta Serial Telecast Soon

ಸೀರಿಯಲ್‌ಗಾಗಿಯೇ ಕುಸ್ತಿ ಕಲಿತ ಸಿಕ್ಸ್‌ಪ್ಯಾಕ್ ಚೇತನ್ ಚಂದ್ರ! (ಚಿತ್ರ ಕೃಪೆ: ಸ್ಟಾರ್ ಸುವರ್ಣ ಇನ್‌ಸ್ಟಾಗ್ರಾಮ್)

ಬ್ರಹ್ಮಚಾರಿ ಅನ್ನೋದು ಮತ್ತೊಂದು ವಿಷಯವೇ ಆಗಿದೆ. ಅಮ್ಮ ಹೇಳಿದಳು ಅಂತ ಮದುವೆನೇ ಆಗಿಲ್ಲ. ಅಮ್ಮನ ಪ್ರೀತಿ ಮತ್ತು ಗರಡಿ ಮನೆಯ ಕುಸ್ತಿನೇ ಜೀವನಾಳ ಮತ್ತು ಜಗತ್ತು ಅಂತಲೇ ಈ ರಾಮಣ್ಣ ಬದುಕುತ್ತಿದ್ದಾರೆ.

ರಾಮನ ಜೀವನದಲ್ಲಿ ಐಶು

ಪೈಲ್ವಾನ್ ರಾಮಣ್ಣನ ಜೀವನದಲ್ಲಿ ಐಶ್ವರ್ಯಳ ಪ್ರವೇಶ ಆಗುತ್ತದೆ. ಇದರಿಂದ ಏನೆಲ್ಲ ಆಗುತ್ತದೆ ಅನ್ನು ಕುತೂಹಲ ಇದೆ. ಆದರೆ, ಈ ಸೀರಿಯಲ್ ಪೋಸ್ಟರ್ಸ್ ನೋಡಿದರೆ, ರಮೇಶ್ ಅರವಿಂದ್ ಅವರ ತುತ್ತಾ-ಮುತ್ತಾ ಸಿನಿಮಾದ ಕಂಟೆಂಟ್ ನೆನಪಿಗೆ ಬರುತ್ತದೆ.

ಅಪ್ಪ ಮತ್ತು ಅಮ್ಮನನ್ನ ತೀರ್ಥಯಾತ್ರೆಗೆ ಕರೆದುಕೊಂಡು ಹೋದ ಶ್ರವಣ ಕುಮಾರನ ಕಥೆನೂ ಕಣ್ಮುಂದೆ ಬರುತ್ತದೆ. ಒಂದು ಕಡಗೆ ಐಶ್ವರ್ಯ ಇದ್ದಾರೆ. ಇನ್ನೊಂದು ಕಡೆಗೆ ಅಮ್ಮ ಜಯಮ್ಮ ಇದ್ದಾರೆ. ಇವರ ನಡುವೆ ಮರ್ಯಾದೆ ರಾಮಣ್ಣ ಇದ್ದಾರೆ.

ರಾಮನಾದ ಚೇತನ್ ಚಂದ್ರ

ಚೇತನ್ ಚಂದ್ರ ಇಲ್ಲಿ ಮರ್ಯಾದೆ ರಾಮಣ್ಣ ಪಾತ್ರ ಮಾಡಿದ್ದಾರೆ. ಐಶ್ವರ್ಯ ಅನ್ನುವ ಪಾತ್ರವನ್ನ ನಟಿ ಜೀವಿತಾ ವಸಿಷ್ಠ ನಿರ್ವಹಿಸಿದ್ದಾರೆ.

Star suvarna Maryade Ramanna Chetan Chandra Jeevitha Vasishta Serial Telecast Soon

ಬ್ರಹ್ಮಾಚಾರಿ ರಾಮಣ್ಣನ ಪೈಲ್ವಾನಗಿರಿ (ಚಿತ್ರ ಕೃಪೆ: ಸ್ಟಾರ್ ಸುವರ್ಣ ಇನ್‌ಸ್ಟಾಗ್ರಾಮ್)

ವೀಣಾ ಸುಂದರ್ ಇಲ್ಲಿ ಜಯಮ್ಮನ ಪಾತ್ರ ಮಾಡಿದ್ದಾರೆ. ಇಡೀ ಸೀರಿಯಲ್ ಹಳ್ಳಿ ಬ್ಯಾಗ್ರೌಂಡ್ ಅಲ್ಲಿಯೇ ಇದೆ. ಕುಸ್ತಿ ಕಣಗಳು ಇಲ್ಲಿದೆ. ರಾಮಣ್ಣನ ಊರಿನ ದೃಶ್ಯ ವೈಭವವೂ ಇಲ್ಲಿ ಖುಷಿಕೊಡುತ್ತದೆ. ಐಶ್ವರ್ಯ ಪಾತ್ರದ ಶ್ರೀಮಂತಿಕೆಯ ಸೊಕ್ಕಿನ ದೃಶ್ಯಗಳು ಇಲ್ಲಿವೆ.

ಗರಡಿ ಮನೆಯಲ್ಲಿ ಕಸರತ್ತು

ಚೇತನ್ ಚಂದ್ರ ಅವರಿಗೆ ವರ್ಕೌಟ್ ಎಲ್ಲ ಹೊಸದೇನೂ ಅಲ್ಲ. ಗರಡಿ ಮನೆ ತಾಲೀಮು ಹೊಸದು ಅಂತಲೂ ಹೇಳಬಹುದು. ಪೈಲ್ವಾನ ಪಾತ್ರ ಮಾಡೋಕೆ ನಿಜವಾಗಲೂ ಕುಸ್ತಿ ಕಲಿತುಕೊಂಡಿದ್ದಾರೆ.

ಗರಡಿ ಮನೆಯಲ್ಲಿ ಬೆವರಿಳಿಸಿದ್ದಾರೆ. ದಂಡು ಹೊಡೆದಿದ್ದಾರೆ. ಅಖಾಡದ ಮಟ್ಟಿ ಅಗೆದಿದ್ದಾರೆ. ಕಸ್ತಿನೂ ಆಡಿದ್ದಾರೆ. ಹೀಗೆ ಸೀರಿಯಲ್‌ಗಾಗಿ ಚೇತನ್ ಚಂದ್ರ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅದರಿಂದ ನಾಯಕ ನಟ ಚೇತನ್ ಚಂದ್ರ ಪಕ್ಕಾ ಗರಡಿ ಪೈಲ್ವಾನ್ ಆಗಿ ಬಿಟ್ಟಿದ್ದಾರೆ.

Star suvarna Maryade Ramanna Chetan Chandra Jeevitha Vasishta Serial Telecast Soon

ಮೇ-25 ರಿಂದ ಪ್ರಸಾರ (ಚಿತ್ರ ಕೃಪೆ: ಸ್ಟಾರ್ ಸುವರ್ಣ ಇನ್‌ಸ್ಟಾಗ್ರಾಮ್)
ಮೇ-25 ರಿಂದ ಪ್ರಸಾರ

ಮರ್ಯಾದೆ ರಾಮಣ್ಣ ಸೀರಿಯಲ್ ರೆಡಿ ಆಗಿದೆ. ಪ್ರೋಮೋಗಳು ಕುತೂಹಲ ಮೂಡಿಸುತ್ತಿವೆ. ಮೇ-25 ರಂದು ಈ ಸೀರಿಯಲ್‌ನ ಮೊದಲ ಸಂಚಿಕೆ ಪ್ರಸಾರ ಆಗುತ್ತಿದೆ.

ಮರ್ಯಾದೆ ರಾಮಣ್ಣ ಸೀರಿಯಲ್ ಪ್ರತಿ ದಿನ ರಾತ್ರಿ 9 ರಂದು ಪ್ರಸಾರ ಆಗುತ್ತಿದೆ. ಈ ವಿಷಯ ಅಧಿಕೃತವಾಗಿಯೇ ಹೊರ ಬಂದಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಲ್ಲಿವರೆಗೂ ಕಳೆದ 6 ವರ್ಷದಿಂದ ಈ ಸಮಯದಲ್ಲಿ ಪೌರಾಣಿಕ ಸೀರಿಯಲ್‌ಗಳು ಬಂದಿವೆ. ಆದರೆ, ಈಗ ಮರ್ಯಾದೆ ರಾಮಣ್ಣ ಸೀರಿಯಲ್ ಪ್ರಸಾರ ಆಗುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed