Last Updated:
Bigg Boss Jhanvi: ಬಿಗ್ ಬಾಸ್ನಲ್ಲಿ ತಮ್ಮ ಸೌಂದರ್ಯ, ವಿಶಿಷ್ಟ ಉಡುಗೆ, ತನ್ನ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದ ನಿರೂಪಕಿ ಜಾನ್ವಿ ಇದೀಗ ರಾಜಕಾರಣದತ್ತ ಹೆಜ್ಜೆ ಇಟ್ಟಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ, ಗಮನ ಸೆಳೆದಿದ್ದರು. ಅಲ್ಲಿಂದ ಹೋದವರು ಮತ್ತೆಲ್ಲಿ ಹೋದ್ರು ಅಂತ ಅಭಿಮಾನಿಗಳು ಪ್ರಶ್ನಿಸುತ್ತಿದ್ದರು.
ಬೆಂಗಳೂರು: ಬಿಗ್ ಬಾಸ್ನಲ್ಲಿ (Bigg Boss) ತಮ್ಮ ಸೌಂದರ್ಯ, ವಿಶಿಷ್ಟ ಉಡುಗೆ, ತನ್ನ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದ ನಿರೂಪಕಿ ಜಾನ್ವಿ (Jhanvi) ಇದೀಗ ರಾಜಕಾರಣದತ್ತ (Politics) ಹೆಜ್ಜೆ ಇಟ್ಟಿದ್ದಾರೆ. ಹೌದು, ಈಗಾಗಲೇ ಕೆಲ ಸುದ್ದಿ ವಾಹಿನಿಗಳಲ್ಲಿ ನಿರೂಪಕಿಯಾಗಿ ಗಮನ ಸೆಳೆದಿದ್ದ ಜಾನ್ವಿ, ಬಳಿಕ ಕಲರ್ಸ್ ಕನ್ನಡದ (Colors Kannada) ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ, ಗಮನ ಸೆಳೆದಿದ್ದರು. ಅಲ್ಲಿಂದ ಹೋದವರು ಮತ್ತೆಲ್ಲಿ ಹೋದ್ರು ಅಂತ ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ಇದೀಗ ರಾಜಕಾರಣದತ್ತ ಜಾನ್ವಿ ಮುಖ ಮಾಡಿದ್ದಾರೆ. ಇಂದು ಜೆಡಿಎಸ್ಗೆ (JDS) ಜಾನ್ವಿ ಸೇರ್ಪಡೆಯಾಗಿದ್ದಾರೆ.
ಖ್ಯಾತ ನಿರೂಪಕಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾನ್ವಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಖುದ್ದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರೇ ಜೆಡಿಎಸ್ ಧ್ವಜ ನೀಡಿ, ಜಾನ್ವಿಯವ್ರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಬೆಂಗಳೂರಿನ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಜಾನ್ವಿ ಜೆಡಿಎಸ್ ಸೇರ್ಪಡೆಯಾದರು. ಈ ವೇಳೆ ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಶೈಲಜಾ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Bangalore,Karnataka













