Last Updated:
Jayam Ravi: ನಟ ಜಯಂ ರವಿ ದಾಂಪತ್ಯ ಕಲಹದ ನಡುವೆ ಖುಷ್ಬು ಸುಂದರ್ ಆರತಿ ರವಿ ಮತ್ತು ಮಕ್ಕಳ ಜೊತೆಗಿನ ಫೋಟೋ ಹಂಚಿ ಇದನ್ನು ನನ್ನ ಫ್ಯಾಮಿಲಿ ಎಂದು ಹೇಳಿ ಆರತಿಗೆ ಬೆಂಬಲ ಸೂಚಿಸಿದ್ದಾರೆ
ಇತ್ತೀಚಿನ ಕೆಲ ದಿನಗಳಿಂದ ನಟ ರವಿ ಮೋಹನ್ ಎಂದೇ ಪರಿಚಿತರಾದ ನಟ ಜಯಂ ರವಿ (Jayam Ravi) ಅವರ ದಾಂಪತ್ಯ ಕಲಹದ ವಿಚಾರವು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜೊತೆಗೆ ಈ ವಿವಾದದಲ್ಲಿ ಗಾಯಕಿ ಕೆನಿಶಾ (Singer Kenisha), ಅವರ ಪತ್ನಿ ಆರತಿ, ಮತ್ತು ನಟಿ-ರಾಜಕಾರಣಿ ಖುಷ್ಬು ಸುಂದರ್ ಈ ಮೂವರ ಹೆಸರುಗಳೇ ಹೆಚ್ಚಾಗಿ ಕೇಳಿಬಂದಿತ್ತು.ಅಷ್ಟೇ ಅಲ್ಲದೆ ಈ ವಿಚಾರವು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ಮಧ್ಯೆ ನಟಿ ಖುಷ್ಬು ಸುಂದರ್,(Khushbu Sundar) ನಟ ಜಯಂ ರವಿ ಪತ್ನಿ ಆರತಿ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ತಮಿಳು ನಟ ಜಯಂ ರವಿ ಅವರ ವೈವಾಹಿಕ ಜೀವನದಲ್ಲಿ ನಡೆದ ಕಲಹಗಳ ಬಗ್ಗೆ ಹಲವು ಬಾರಿ ಊಹಾಪೋಹಗಳು ನಡೆದಿದ್ದರೂ, ಇತ್ತೀಚಿನ ದಿನಗಳಲ್ಲಿ ನಡೆದ ಘಟನೆಗಳು ವಿವಾದವನ್ನು ಮತ್ತಷ್ಟು ಗಂಭೀರಗೊಳಿಸಿವೆ. ಕೆಲವರ ಪ್ರಕಾರ ಗಾಯಕಿ ಕೆನಿಶಾ ಅವರಿಂದಾಗಿಯೇ ಜಯಂ ರವಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನಲಾಗಿತ್ತು. ಹೀಗಾಗಿ ಕೆನಿಶಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆದ ಟ್ರೋಲ್ಗಳು, ಅವಮಾನಕಾರಿ ಕಾಮೆಂಟ್ ಗಳಿಂದ ಬೇಸತ್ತ ಅವರು ಊರನ್ನೇ ಬಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು.
ಇನ್ನು ತಮ್ಮ ಪತ್ನಿ ಆರತಿಯಿಂದ ಸಾಕಷ್ಟು ತೊಂದರೆಗಳು ಆಗುತ್ತಿವೆ ಎಂದು ಆರೋಪಿಸಿ ಸುದ್ದಿಗೋಷ್ಠಿಯಲ್ಲೇ ಕಣ್ಣೀರು ಹಾಕಿದ್ರು ನಟ ಜಯಂ ರವಿ. ಜೊತೆಗೆ ನನಗೆ ಪತ್ನಿ ಆರತಿಯಿಂದ ವಿಚ್ಛೇದನ ಸಿಗುವವರೆಗೂ ನಾನು ಸಿನಿಮಾ ಮಾಡೋದಿಲ್ಲ ಎಂದು ಹೇಳಿಕೊಂಡಿದ್ದರು. ಈ ಎಲ್ಲಾ ಬೆಳವಣಿಗೆ ಮಧ್ಯೆ ನಟ ಜಯಂ ರವಿ ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ. ಜೊತೆಗೆ ನನ್ನ ಸಂಸಾರ ಹಾಳಾಗಲು ಆ ಇಡ್ಲಿ ನಟಿಯೇ ಕಾರಣ ಎಂದು ನಟ ಜಯಂ ರವಿ ಹೇಳಿಕೊಂಡಿದ್ದರು.
ಈ ಎಲ್ಲಾ ವಿವಾದದ ಮಧ್ಯೆಯೇ ಖುಷ್ಬು, ಆರತಿ ರವಿ ಮತ್ತು ಅವರ ಮಕ್ಕಳು ಸೇರಿದಂತೆ ಹಲವರೊಂದಿಗೆ ತೆಗೆಸಿಕೊಂಡಿರುವ ಒಂದು ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ಅವರು ಇದು ‘ನನ್ನ ಫ್ಯಾಮಿಲಿ’ ಎಂಬ ಶೀರ್ಷಿಕೆ ನೀಡಿ, ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ . ನಟ ಜಯಂ ರವಿಯೊಂದಿಗೆ ನಡೆಯುತ್ತಿರುವ ಸಾರ್ವಜನಿಕ ವಿವಾದದ ನಡುವೆಯೂ ಆರತಿ ರವಿಗೆ ಬೆಂಬಲ ಸೂಚಿಸಿದ ಖುಷ್ಬು ನನ್ನ ನಿಲುವು ಇದೇ ಎಂದು ಮತ್ತೊಮ್ಮೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
Bangalore [Bangalore],Bangalore,Karnataka
May 24, 2026 12:55 PM IST













