Last Updated:
ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಮ್ಯಾಚ್ನ ಮೊದಲ ದಿನ, ಬಾಂಗ್ಲಾದೇಶದ ಆಟಗಾರ ಟಾಸ್ಕಿನ್ ಅಹ್ಮದ್ ಮತ್ತು ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್ವುಡ್ ನಡುವೆ ವಾಗ್ವಾದ ನಡೆಯಿತು. ಹ್ಯಾಜಲ್ವುಡ್ ಕ್ಯಾಚ್ ಹಿಡಿಯಬೇಕಾದರೆ ಈ ಘಟನೆ ನಡೆಯಿತು.
ಆಸ್ಟ್ರೇಲಿಯಾ (Australia) ಮತ್ತು ಬಾಂಗ್ಲಾದೇಶ (Bangladesh) ನಡುವಿನ ಎರಡು ಪಂದ್ಯಗಳ ಟೆಸ್ಟ್ (Test) ಸರಣಿಯ ಎರಡನೇ ಪಂದ್ಯದತ್ತ ಇಡೀ ಕ್ರಿಕೆಟ್ (Cricket) ಜಗತ್ತಿನ ಗಮನವಿದೆ. ಮೆಲ್ಬೋರ್ನ್(Melbourne)ನಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ದಿನ ಸ್ಫೋಟಕವಾಗಿತ್ತು. ಒಟ್ಟು 18 ವಿಕೆಟ್ಗಳು ಬಿದ್ದವು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಕೇವಲ 64 ರನ್ಗಳಿಗೆ ಆಲೌಟಾಯಿತು. ಬಾಂಗ್ಲಾದೇಶದ ಇನ್ನಿಂಗ್ಸ್ನಲ್ಲಿ ಬ್ಯಾಟರ್ ಟಾಸ್ಕಿನ್ ಅಹ್ಮದ್ ಮತ್ತು ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್ವುಡ್ (Josh Hazlewood) ನಡುವೆ ವಾಗ್ವಾದ ನಡೆಯಿತು.














