Last Updated:
Narendra Modi: ಪ್ರಧಾನಿ ನರೇಂದ್ರ ಮೋದಿಯವರು ಸೇವಾತೀರ್ಥದಲ್ಲಿ ಇಂದು 20 ಬಾಹ್ಯಾಕಾಶ ನವೋದ್ಯಮ ಸಿಇಒಗಳು ಮತ್ತು ಸಂಸ್ಥಾಪಕರ ಜೊತೆ ಮಹತ್ವದ ಸಂವಾದ ನಡೆಸಿದರು. ಭಾರತವು ತನ್ನ ಖಾಸಗಿ ಬಾಹ್ಯಾಕಾಶ ಉದ್ಯಮವನ್ನು ಬಲಪಡಿಸಲು ಮತ್ತು ಜಾಗತಿಕ ಬಾಹ್ಯಾಕಾಶ ವಲಯದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವುದರಿಂದ ಈ ಸಂವಾದವು ಮಹತ್ವ ಪಡೆದಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಸೇವಾತೀರ್ಥದಲ್ಲಿ (Seva Teertha) ಇಂದು 20 ಬಾಹ್ಯಾಕಾಶ ನವೋದ್ಯಮ ಸಿಇಒಗಳು (space start-up CEO) ಮತ್ತು ಸಂಸ್ಥಾಪಕರ ಜೊತೆ ಮಹತ್ವದ ಸಂವಾದ ನಡೆಸಿದರು. ಭಾರತವು ತನ್ನ ಖಾಸಗಿ ಬಾಹ್ಯಾಕಾಶ ಉದ್ಯಮವನ್ನು ಬಲಪಡಿಸಲು ಮತ್ತು ಜಾಗತಿಕ ಬಾಹ್ಯಾಕಾಶ ವಲಯದಲ್ಲಿ (global space sector) ತನ್ನ ಅಸ್ತಿತ್ವವನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವುದರಿಂದ ಈ ಸಂವಾದವು ಮಹತ್ವ ಪಡೆದಿದೆ.














