Kuldeep Yadav: ಕುಲದೀಪ್ ಯಾದವ್ ವೈಫಲ್ಯಕ್ಕೆ ಶುಭ್ಮನ್ ಗಿಲ್ ಕಾರಣ: ಅಚ್ಚರಿ ಹೇಳಿಕೆ ನೀಡಿದ ಅಶ್ವಿನ್ | ಕ್ರೀಡಾ ಸುದ್ದಿ | ACTPnews

ಕುಲ್ವೀಪ್ ಯಾದವ್


Last Updated:

ಗಾಲೆಯಲ್ಲಿ ನಡೆದ ಈ ಪಂದ್ಯವನ್ನು ಭಾರತ 165 ರನ್‌ಗಳ ಅಂತರದಿಂದ ಗೆದ್ದಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕುಲದೀಪ್ ಯಾದವ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ವಿಕೆಟ್ (1/65) ಪಡೆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ವಿಕೆಟ್ (0/37) ಪಡೆಯುವಲ್ಲಿ ವಿಫಲರಾದರು.

ಕುಲ್ವೀಪ್ ಯಾದವ್
ಕುಲ್ವೀಪ್ ಯಾದವ್

ಟೀಮ್ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್ (Kuldeep Yadav) ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 2 ಇನ್ನಿಂಗ್ಸ್ ಸೇರಿ ಕೇವಲ 1 ವಿಕೆಟ್ ಪಡೆದರು. ಸ್ಪಿನ್ ಸ್ನೇಹಿ ವಿಕೆಟ್‌ಗಳಲ್ಲಿ ಕುಲದೀಪ್ ಬಿಟ್ಟು ಉಳಿದ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ತೋರಿದರು. ಹಾಗಾಗಿ ಕುಲದೀಪ್ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಕಂಡುಬರದ ಕಾರಣ ಅವರನ್ನು ಮುಂದಿನ ಪಂದ್ಯದಲ್ಲಿ ಕೈಬಿಡುವ ಬಗ್ಗೆ ಮಾತನಾಡಲಾಗುತ್ತಿದೆ. ಆದರೆ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಕುಲದೀಪ್ ಪರ ಮಾತನಾಡಿದ್ದಾರೆ. ಕುಲದೀಪ್ ಅವರಿಗೆ ತಂಡದ ಆಡಳಿತ ಮಂಡಳಿಯಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ನಾಯಕ ಶುಭ್​ಮನ್ ಗಿಲ್ ಅವರಿಗೆ ಕುಲದೀಪ್ ಯಾದವ್ ಮೇಲೆ ನಂಬಿಕೆ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed