Last Updated:
ವಿಶ್ವದ ಎರಡನೇ ಶ್ರೀಮಂತ ಜೆಫ್ ಬೆಜೋಸ್ ಅವರು ತಮ್ಮ ಗೆಳತಿ ಲಾರೆನ್ ಸ್ಯಾಂಚೆಜ್ ಅವರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎನ್ನಲಾಗಿದ್ದು, ಇದಕ್ಕಾಗಿ ಬರೋಬ್ಬರಿ ಐದು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಿದ್ದಾರೆ ಎನ್ನಲಾಗಿದೆ.
ಅಮೆಜಾನ್ ಸಂಸ್ಥಾಪಕ (Amazon Founder) ಮತ್ತು ವಿಶ್ವದ ಅಗ್ರ ಸಿರಿವಂತರ (World’s Richest) ಪೈಕಿ ಜೆಫ್ ಬೆಜೋಸ್ (Jeff Bezos) ಅವರು ಎರಡನೇ ಭಾರೀ ವಿವಾಹವಾಗಲಿದ್ದಾರೆ ಎನ್ನಲಾಗಿದೆ. ಕೊಲೊರಾಡೋದಲ್ಲಿ (Colorado) ತಮ್ಮ ಸಹೋದ್ಯೋಗಿ ಲಾರಾ ಸ್ಯಾಂಚೆಜ್ (Laura Sanchez) ಅವರನ್ನು ವಿವಾಹವಾಗಲಿದ್ದು, ತನ್ನ ಮದುವೆಗೆ ಬರೋಬ್ಬರಿ 5000 ಕೋಟಿ ($600 ಶತಕೋಟಿ) ಖರ್ಚು ಮಾಡಲಿದ್ದಾರೆ ಎಂದು ವರದಿಯಾಗಿದೆ. ಇನ್ನು ಇಬ್ಬರೂ 2023 ರ ಮೇ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇನ್ನು ಈ ದಂಪತಿಗಳು ತಮ್ಮ ಮದುವೆಯ ಸ್ಥಳವಾಗಿ ಐಷಾರಾಮಿ ಸುಶಿ ರೆಸ್ಟೋರೆಂಟ್ (Sushi Restaurant) ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವಿವಿಧ ಮಾಧ್ಯಮ ವರದಿಗಳು ಸೂಚಿಸಿದ್ದು, ಡಿಸೆಂಬರ್ 28ಕ್ಕೆ ಇವರಿಬ್ಬರು ಮದುವೆಯಾಗಲಿದ್ದಾರೆ ಎನ್ನಲಾಗಿದೆ.
ಇಬ್ಬರೂ ಡಿಸೆಂಬರ್ 26 ರಿಂದ 27 ರವರೆಗೆ ಈ ಐಷಾರಾಮಿ ರೆಸ್ಟೋರೆಂಟ್ ಅನ್ನು ಬುಕ್ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಮದುವೆಗೆ ಸುಮಾರು 180 ಅತಿಥಿಗಳು ಆಗಮಿಸುವ ನಿರೀಕ್ಷೆಯಿದ್ದು, ಬಿಲ್ ಗೇಟ್ಸ್, ಲಿಯೊನಾರ್ಡೊ ಡಿಕಾಪ್ರಿಯೊ ಮತ್ತು ಜೋರ್ಡಾನ್ ಮಹಾರಾಣಿ ರಾನಿಯಾ ಅವರು ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದ್ದು, ಮದುವೆಗೆ ಸಂಬಂಧಿಸಿದ ಯಾವುದೇ ಮಾಹಿತಿ ನೀಡದಂತೆ ವೆಡ್ಡಿಂಗ್ ಪ್ಲಾನರ್‌ಗಳಿಗೆ ಸೂಚನೆ ನೀಡಲಾಗಿದೆ. ಏತನ್ಮಧೆ ಮದುವೆಯ ಆಯೋಜಕಿ ಸಾರಾ ರೋಸ್ ಅಟ್ಮನ್ ಅವರು ವಿಶ್ವದಾದ್ಯಂತ ಅತ್ಯುತ್ತಮ ಅಲಂಕಾರಗಳನ್ನು ಮದುವೆ ನಡೆಯುತ್ತಿರುವ ಸ್ಥಳಕ್ಕೆ ತರಲಾಗಿದೆ ಎಂದು ವಿವಿಧ ಮಾಧ್ಯಮಗಳಿಂದ ಉಲ್ಲೇಖಿಸಲಾಗಿದೆ.
ಜೆಫ್ ಬೆಜೋಸ್ ಅವರ ನಿಶ್ಚಿತ ವಧು ಲಾರಾ ವೆಂಡಿ ಸ್ಯಾಂಚೆಝ್ ಅವರು ಮೆಕ್ಸಿಕನ್-ಅಮೇರಿಕನ್ ಕುಟುಂಬದಲ್ಲಿ ಡಿಸೆಂಬರ್ 19, 1969 ರಂದು ನ್ಯೂ ಮೆಕ್ಸಿಕೋದ ಅಲ್ಬುಕರ್ಕ್ನಲ್ಲಿ ಜನಿಸಿದರು. ಅಮೆರಿಕದ ಹೆಸರಾಂತ ಪತ್ರಕರ್ತೆ ಮತ್ತು ಉದ್ಯಮಿಯಾಗಿರುವ ಇವರು ಪತ್ರಿಕೋದ್ಯಮದ ಹೊರತಾಗಿ, ಪೈಲಟ್ ಆಗಿಯೂ ತಮ್ಮ ಛಾಪು ಮೂಡಿಸಿದರು.
2018 ರಿಂದ ಜೆಫ್ ಬೆಜೋಸ್ ಅವರೊಂದಿಗೆ ಪ್ರತಿಯಲ್ಲಿರುವ ಲಾರಾ ಈ ಹಿಂದೆ ಪ್ಯಾಟ್ರಿಕ್ ವೈಟ್‌ಸೆಲ್ ಅವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಜೊತೆಗೆ NFL ತಾರೆ ಟೋನಿ ಗೊನ್ಜಾಲೆಜ್ ಅವರೊಂದಿಗಿನ ಸಂಬಂಧದಿಂದ ಲಾರಾ ಸ್ಯಾಂಚೆಜ್‌ಗೆ ಇನ್ನೊಬ್ಬ ಮಗನಿದ್ದಾನೆ. ಇದರೊಂದಿಗೆ ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆಯನ್ನು ನಿಭಾಯಿಸಲು ಬೆಜೋಸ್ ಸ್ಥಾಪಿಸಿದ ಸಂಸ್ಥೆಯಾದ ಬೆಜೋಸ್ ಅರ್ಥ್ ಫಂಡ್‌ನ ಉಪಾಧ್ಯಕ್ಷರಾಗಿ ಸ್ಯಾಂಚೆಜ್ ಕಾರ್ಯನಿರ್ವಹಿಸುತ್ತಿದ್ದಾರೆ.
ಮತ್ತೊಂದೆಡೆ, ಬಿಲಿಯನೇರ್ ಬಿಲ್ ಅಕ್‌ಮನ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬೆಜೋಸ್ ಅವರು, ವರದಿಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ. “ಇದು ನಂಬಲರ್ಹವಲ್ಲ. ನಿಮ್ಮ ಅತಿಥಿಗಳ ಮನೆಯನ್ನು ನೀವು ಖರೀದಿಸದ ಹೊರತು, ನೀವು ಇಷ್ಟು ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ ” ಎಂದು ಅಕ್ಮನ್ ಸುದ್ದಿ ವರದಿಯನ್ನು ಹಂಚಿಕೊಂಡು ಎಕ್ಸ್ (ಟ್ವೀಟ್) ಖಾತೆಯಲ್ಲಿ ಮಾಡಿದ್ದಾರೆ.













