Last Updated:
AAP Satyendar Jain: ದೆಹಲಿ ಮಾಜಿ ಸಚಿವ, ಎಎಪಿ ಹಿರಿಯ ನಾಯಕ ಸತ್ಯೇಂದರ್ ಜೈನ್‌ರನ್ನು ಬಂಧಿಸಲಾಗಿದೆ. ಸತ್ಯೇಂದರ್ ಜೈನ್ ಸೇರಿದಂತೆ ಇತರ 6 ಜನರನ್ನು ದೆಹಲಿ ಜಲ್ ಬೋರ್ಡ್‌ನಲ್ಲಿ ನಡೆದ ಹಗರಣದಲ್ಲಿ ದೆಹಲಿ ವಿರೋಧಿ-ಭ್ರಷ್ಟಾಚಾರ ಶಾಖೆ (ಎಸಿಬಿ) ಬಂಧಿಸಿದೆ.
ದೆಹಲಿ: ಮಾಜಿ ಸಚಿವ (Delhi Former minister), ಎಎಪಿ ಹಿರಿಯ ನಾಯಕ (AAP Senior Leader) ಸತ್ಯೇಂದರ್ ಜೈನ್‌ರನ್ನು (Satyendar Jain) ಬಂಧಿಸಲಾಗಿದೆ. ಸತ್ಯೇಂದರ್ ಜೈನ್ ಸೇರಿದಂತೆ ಇತರ 6 ಜನರನ್ನು ದೆಹಲಿ ಜಲ್ ಬೋರ್ಡ್‌ನಲ್ಲಿ ನಡೆದ ಹಗರಣದಲ್ಲಿ (Delhi Jal Board) ದೆಹಲಿ ಭ್ರಷ್ಟಾಚಾರ ವಿರೋಧಿ ಘಟಕ (ಎಸಿಬಿ) ಬಂಧಿಸಿದೆ. ಈ ಪ್ರಕರಣದಲ್ಲಿ ಸುಮಾರು ₹1.94 ಕೋಟಿ ಹಣದ ವಂಚನೆ ನಡೆದಿದೆ ಎಂದು ಆರೋಪಿಸಲಾಗಿದೆ. ಇನ್ನು ಸತ್ಯೇಂದ್ರ ಜೈನ್ ಬಂಧನಕ್ಕೆ ಆಮ್ ಆದ್ಮಿ ಮುಖ್ಯಸ್ಥ (Aam Aadmi Party chief) ಅರವಿಂದ್ ಕೇಜ್ರಿವಾಲ್ (Arvind Kejriwal) ಕಿಡಿಕಾರಿದ್ದಾರೆ.














