LSG vs PBKS, IPL 2026: ಸತತ 6 ಸೋಲುಗಳ ಬಳಿಕ ಕೊನೆಗೂ ಗೆದ್ದ ಪಂಜಾಬ್! ಲಖನೌ ಮಣಿಸಿ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡ ಶ್ರೇಯಸ್ ಪಡೆ | ಕ್ರೀಡಾ ಸುದ್ದಿ | ACTPnews

ಶ್ರೇಯಸ್ ಅಯ್ಯರ್- ಪ್ರಭಸಿಮ್ರನ್ ಸಿಂಗ್


Last Updated:

ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಲಖನೌ ತಂಡ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 196 ರನ್​ಗಳ ಸವಾಲಿನ ಮೊತ್ತ ದಾಖಲಿಸಿತ್ತು. ಈ ಗುರಿಯನ್ನ ಪಂಜಾಬ್ ಕಿಂಗ್ಸ್ 12 ಎಸೆತಗಳಿರುವಂತೆ ತಲುಪಿ ಗೆಲುವು ಸಾಧಿಸಿತು.

ಶ್ರೇಯಸ್ ಅಯ್ಯರ್- ಪ್ರಭಸಿಮ್ರನ್ ಸಿಂಗ್
ಶ್ರೇಯಸ್ ಅಯ್ಯರ್- ಪ್ರಭಸಿಮ್ರನ್ ಸಿಂಗ್

IPL 2026ರ 68ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್​ಗಳ ಗೆಲುವು ಸಾಧಿಸಿದೆ. ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಲಖನೌ ತಂಡ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 196 ರನ್​ಗಳ ಸವಾಲಿನ ಮೊತ್ತ ದಾಖಲಿಸಿತ್ತು. ಪ್ಲೇಆಫ್​​ ರೇಸ್​​​ನಲ್ಲಿ ಉಳಿಯಬೇಕಾದರೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಂಜಾಬ್ ತಂಡ ದಿಟ್ಟ ಪ್ರದರ್ಶನ ತೋರಿ ಇನ್ನೂ 12 ಎಸೆತಗಳಿರುವಂತೆ ಗೆಲುವು ಸಾಧಿಸಿತು. ನಾಯಕ ಶ್ರೇಯಸ್ ಅಯ್ಯರ್ ಅಜೇಯ 101 ರನ್​ಗಳಿಸಿ ಗೆಲುವಿನ ರೂವಾರಿಯಾದರು. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿ ಪ್ಲೇಆಫ್​ ಸ್ಥಾನವನ್ನ ಜೀವಂತವಾಗಿರಿಸಿಕೊಂಡಿದೆ. 

197 ರನ್​ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡ  ಮೊದಲ ಎಸೆತದಲ್ಲೇ  ಸ್ಫೋಟಕ ಬ್ಯಾಟರ್ ಪ್ರಿಯಾಂಶ್ ಆರ್ಯ ವಿಕೆಟ್ ಪಡೆದುಕೊಂಡಿತು. ಆರ್ಯ ಶಮಿ ಬೌಲಿಂಗ್​​ನಲ್ಲಿ ಅರ್ಜುನ್ ತೆಂಡೂಲ್ಕರ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಕೊನೊಲಿ 10 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 18 ರನ್​ಗಳಿಸಿ ಶಮಿಗೆ 2ನೇ ಬಲಿಯಾದರು. ಪಂಜಾಬ್ ತಂಡ ಕೇವಲ 22 ರನ್​ಗಳಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು.

ಈ ಹಂತದಲ್ಲಿ ಪ್ರಭಸಿಮ್ರನ್ ಸಿಂಗ್ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್ 3ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 76 ಎಸೆತಗಳಲ್ಲಿ 140 ರನ್​ಗಳ ಬೃಹತ್ ಜೊತೆಯಾಟ ನಡೆಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಪ್ರಭಸಿಮ್ರನ್​​​​​​ ಸಿಂಗ್ 39 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್​ಗಳ ಸಹಿತ 69 ರನ್​ಗಳಿಸಿ ಅರ್ಜುನ್ ತೆಂಡೂಲ್ಕರ್​​ಗೆ ವಿಕೆಟ್ ಒಪ್ಪಿಸಿದರು.  ಆದರೆ ಶ್ರೇಯಸ್​ ಅಯ್ಯರ್ ಕೊನೆಯವರೆಗೂ ಅಬ್ಬರಿಸಿ ಚೊಚ್ಚಲ ಶತಕ ಸಿಡಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು.  ಅಯ್ಯರ್  51 ಎಸೆತಗಳಲ್ಲಿ  11 ಬೌಂಡರಿ, 5 ಸಿಕ್ಸರ್​ಗಳ ಸಹಿತ ಅಜೇಯ 101 ರನ್​ಗಳಿಸಿದರು. ಸೂರ್ಯಾಂಶ್ ಶೆಡ್ಗೆ ಅಜೇಯ 9 ರನ್​ಗಳಿಸಿದರು.

ಲಖನೌ ಸೂಪರ್ ಜೈಂಟ್ಸ್ ಪರ ಮೊಹಮ್ಮದ್ ಶಮಿ 45ಕ್ಕೆ2, ಅರ್ಜುನ್ ತೆಂಡೂಲ್ಕರ್ 36ಕ್ಕೆ1 ವಿಕೆಟ್ ಪಡೆದರು.

ಲಖನೌ ಸೂಪರ್ ಜೈಂಟ್ಸ್ ಹೈಲೈಟ್ಸ್

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಲಖನೌ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 196 ರನ್​ಗಳಿಸಿತ್ತು.  ಕೊನೆಯ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ಆರಂಭಿಸಿದ ಲಖನೌ ತಂಡ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ.  ಮಿಚೆಲ್ ಮಾರ್ಷ್ ಬದಲಿಗೆ ಆರಂಭಿಕನಾಗಿ ಅವಕಾಶ ಪಡೆದಿದ್ದ ಅರ್ಶಿನ್ ಕುಲಕರ್ಣಿ ಗೋಲ್ಡನ್ ಡಕ್ ಆದರು. ಒಮರ್ಝೈ ಬೌಲಿಂಗ್​​ನಲ್ಲಿ ವಿಕೆಟ್ ಕೀಪರ್ ಪ್ರಭಸಿಮ್ರನ್ ಸಿಂಗ್ಗೆ ಕ್ಯಾಚ್ ನೀಡಿ ಔಟ್ ಆದರು.​ ನಂತರ ಬಂದ   ನಿಕೋಲಸ್ ಪೂರನ್ 7 ಎಸೆತಗಳಲ್ಲಿ 2 ರನ್​ಗಳಿಸಿ ಮಾರ್ಕೊ ಯಾನ್ಸನ್​ ಬೌಲಿಂಗ್​​ನಲ್ಲಿ ಬೌಲ್ಡ್ ಆದರು.

ಚೇತರಿಕೆ ನೀಡಿದ ಬದೋನಿ

ಕೇವಲ 20 ರನ್​ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿದ್ದ   ಲಖನೌ ತಂಡಕ್ಕೆ ಬದೋನಿ ಹಾಗೂ ಇಂಗ್ಲಿಸ್​ 49 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಬದೋನಿ ಒಬ್ಬರೆ ಕೇವಲ 18 ಎಸೆತಗಳಲ್ಲಿ 43  ರನ್​ಗಳಿಸಿದರು.  ಇವರ ಇನ್ನಿಂಗ್ಸ್​​ನಲ್ಲಿ 5 ಬೌಂಡರಿ, 3 ಸಿಕ್ಸರ್​ಗಳಿದ್ದವು. ಬದೋನಿ ನಂತರ ಬಂದ ನಾಯಕ ರಿಷಭ್ ಪಂತ್ 4ನೇ ವಿಕೆಟ್​ಗೆ ಇಂಗ್ಲಿಸ್ ಜೊತೆಗೂಡಿ 65 ರನ್​ ಸೇರಿಸಿದರು. ಪಂತ್ ಇಂದೂ ಕೂಡ ನಿಧಾನಗತಿಯ ಆಟವಾಡಿದರು. 22 ಎಸೆತಗಳಲ್ಲಿ 3 ಬೌಂಡರಿಗಳ ಸಹಿತ 26 ರನ್​ಗಳಿಸಿ ನಿರ್ಗಮಿಸಿದರು.

ಜೋಸ್ ಇಂಗ್ಲಿಸ್ ಅರ್ಧಶತಕ

ಆರಂಭಿಕನಾಗಿ ಬಂದು 17ನೇ ಓವರ್​​ನಲ್ಲಿ ಔಟ್ ಆದ ಇಂಗ್ಲಿಸ್ 44 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ಗಳ ಸಹಿತ 72 ರನ್​ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಅಬ್ದುಲ್ ಸಮದ್ 20 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್​​ಗಳ ಸಹಿತ ಅಜೇಯ 37 ರನ್​ಗಳಿಸಿ ತಂಡದ ಮೊತ್ತವನ್ನ 190ರ ಗಡಿದಾಟಿಸಿದರು. ಅರ್ಜುನ್ ತೆಂಡೂಲ್ಕರ್ ಅಜೇಯ 5 ರನ್​ಗಳಿಸಿದರು.

ಮುಂಬೈ ಗೆಲುವಿಗೆ ಪಂಜಾಬ್ ಪ್ರಾರ್ಥನೆ

ಪಂಜಾಬ್ ತಂಡ 15 ಅಂಕಗಳೊಂದಿಗೆ ಲೀಗ್ ಅಂತ್ಯಗೊಳಿಸಿದೆ. ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದೆ. ಈಗಾಗಲೇ 14 ಅಂಕಗಳಿಸಿರುವ ರಾಜಸ್ಥಾನ್ ತಂಡಕ್ಕೆ ಇನ್ನೂ ಒಂದು ಪಂದ್ಯ ಬಾಕಿಯಿದ್ದು, ನಾಳೆ ರಾಜಸ್ಥಾನ್  ತಂಡ ಮುಂಬೈ ವಿರುದ್ಧ ಗೆದ್ದರೆ ಪಂಜಾಬ್ ತಂಡ ಟೂರ್ನಿಯಿಂದ ಹೊರಬೀಳಲಿದೆ. ಮುಂಬೈ ಗೆದ್ದರೆ ಪಂಜಾಬ್​ ಪ್ಲೇಆಫ್ ಪ್ರವೇಶಿಸಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed