Achievement: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿ ಮಾಡಿದ ಕನ್ನಡಿಗ; ಗೋಕರ್ಣದ ʼಚಾಮಿʼ ಇಂದು ಅಮೆರಿಕಾದ ನಂ.1 ವಿಜ್ಞಾನಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಡಾ. ನಾರಾಯಣ ಹೊಸ್ಮನೆ


Last Updated:

ಡಾ. ನಾರಾಯಣ ಚಾಮಿ ಹೊಸ್ಮನೆ Research.com 2026 ರ‍್ಯಾಂಕಿಂಗ್ ನಲ್ಲಿ ರಸಾಯನ ಶಾಸ್ತ್ರ ವಿಭಾಗದ ಅಮೆರಿಕಾದ ಶ್ರೇಷ್ಠ ವಿಜ್ಞಾನಿ, BNCT ಸಂಶೋಧನೆ, Humboldt Research Award ವಿಜೇತ

ಡಾ. ನಾರಾಯಣ ಹೊಸ್ಮನೆ
ಡಾ. ನಾರಾಯಣ ಹೊಸ್ಮನೆ

ಬೆಂಗಳೂರು: ರಥಬೀದಿಯ ಸಣ್ಣ ಮನೆಯಲ್ಲಿ ಬಡತನದ ನಡುವೆ ಬೆಳೆದ ಹುಡುಗ, ಇಂದು ಅಮೆರಿಕಾದ ಶ್ರೇಷ್ಠ ವಿಜ್ಞಾನಿ! ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಗೋಕರ್ಣದ ರಥಬೀದಿ ಮೂಲದ ಡಾ. ನಾರಾಯಣ ಸದಾಶಿವ ಹೊಸ್ಮನೆಅವರು Academic Platform for Research (Research.com) 2026ರ ರ‍್ಯಾಂಕಿಂಗ್ (Ranking) ಪಟ್ಟಿಯಲ್ಲಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಅಮೆರಿಕಾದ ಶ್ರೇಷ್ಠ ವಿಜ್ಞಾನಿ ಎಂದು ಘೋಷಿತರಾಗಿದ್ದಾರೆ. ಇದು ಇಡೀ ಕರ್ನಾಟಕಕ್ಕೆ ಹೆಮ್ಮೆಯ (Proud) ಕ್ಷಣ!

ಸರ್ಕಾರಿ ಶಾಲೆಯಲ್ಲೇ ಶಿಕ್ಷಣ ಪೂರೈಸಿ ಸಾಧನೆ

ಹೊಸ್ಮನೆ ವೈದಿಕ ಮನೆತನದಲ್ಲಿ ಜನಿಸಿದ ನಾರಾಯಣ ಅವರು ಗೋಕರ್ಣದ ಕೆನರಾ ಪ್ರಸಾರಕ ಮಂಡಳಿಯ ಭದ್ರಕಾಳಿ ಪ್ರೌಢಶಾಲೆಯಲ್ಲಿ SSLC ಮುಗಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ BS ಮತ್ತು MS ಪಡೆದರು. ಬಡತನ ಅವರ ಕನಸಿನ ಮುಂದೆ ತಲೆ ಬಾಗಿತು. 1974ರಲ್ಲಿ ಸ್ಕಾಟ್‌ಲ್ಯಾಂಡ್‌ನ ಪ್ರತಿಷ್ಠಿತ ಎಡಿನ್‌ಬರಾ ವಿಶ್ವವಿದ್ಯಾಲಯದಿಂದ Inorganic Chemistryಯಲ್ಲಿ PhD ಪಡೆದ ಚಾಮಿ, 1970-80ರ ದಶಕದಲ್ಲಿ ಅಮೆರಿಕಾಗೆ ತೆರಳಿ ಇಲಿನಾಯ್ ರಾಜ್ಯದ Northern Illinois University (NIU), DeKalbನಲ್ಲಿ ಕಾಲಿಟ್ಟರು. ಮತ್ತು ಇಂದಿಗೂ 50ಕ್ಕೂ ಹೆಚ್ಚು ವರ್ಷಗಳಿಂದ Distinguished Research Professor ಮತ್ತು Board of Trustees Professor ಆಗಿ ಸೇವೆ ಸಲ್ಲಿಸುತ್ತಿದ್ದಾರೆ!

ಜೀವದಾಯಿನಿಯಾಗಿರುವ ಸಂಶೋಧನೆ

ಅವರ ಸಂಶೋಧನೆ ಬಗ್ಗೆ ಕೇಳಿದರೆ ನಿಜಕ್ಕೂ ಬೆರಗಾಗುತ್ತೀರಿ. ಕ್ಯಾನ್ಸರ್ ಚಿಕಿತ್ಸೆಯ ಕ್ರಾಂತಿಕಾರಿ ಕ್ಷೇತ್ರವಾದ Boron Neutron Capture Therapy (BNCT) ಅಭಿವೃದ್ಧಿಯಲ್ಲಿ ಡಾ. ಹೊಸ್ಮನೆ ಅವರ ಕೊಡುಗೆ ಅಸಾಮಾನ್ಯ. ಬೋರಾನ್ ರಸಾಯನ ಶಾಸ್ತ್ರ (Boron Chemistry) ಮೂಲಕ ಗ್ಲಿಯೋಬ್ಲಾಸ್ಟೋಮಾ (GBM) ಮತ್ತು ಮಿದುಳಿನ ಗಡ್ಡೆ (Brain Tumor) ಗಳಿಗೆ ಔಷಧ ಅಭಿವೃದ್ಧಿ ಮಾಡಿ ವಿಶ್ವ ವೈದ್ಯ ವಿಜ್ಞಾನಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
350ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ ಹಾಗೂ 5 ಪುಸ್ತಕಗಳ ಪ್ರಕಟಣೆ

ಇಲ್ಲಿಯವರೆಗೆ 350ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮತ್ತು 5 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. BUSA (Boron in the Americas) ಸಂಸ್ಥೆ ಸ್ಥಾಪಿಸಿ, ಅಂತರಾಷ್ಟ್ರೀಯ ಬೋರಾನ್ ಸಂಶೋಧನಾ ಸಮುದಾಯಕ್ಕೆ ನೇತೃತ್ವ ನೀಡಿದ್ದಾರೆ. ಅತ್ಯಂತ ಪ್ರತಿಷ್ಠಿತ Humboldt Research Award ಎರಡು ಬಾರಿ ಪಡೆದ ಸಾಧನೆ ಅವರ ಹಿರಿಮೆಯನ್ನು ಸಾರುತ್ತದೆ.

ಚಾಮಿ ಟ್ರಸ್ಟ್‌ ಮೂಲಕ ಸ್ವಂತ ಊರಿನ ಉದ್ಧಾರ!

ಇದನ್ನೂ ಓದಿ: Power Cut: ವೀಕೆಂಡ್‌ನಲ್ಲೇ ಕೈ ಕೊಡಲಿದೆ ಕರೆಂಟ್‌, ಬೆಂಗಳೂರಿನ ಈ ಪ್ರದೇಶಗಳಲ್ಲಿ 10-11 ತಾಸು ಪವರ್‌ ಕಟ್;‌ ನಿಮ್ಮ ಏರಿಯಾನೂ ಲಿಸ್ಟಲ್ಲಿದೆಯಾ? ಚೆಕ್‌ ಮಾಡಿ

ಜಾಗತಿಕ ಕೀರ್ತಿ ಪಡೆದರೂ ತಮ್ಮ ಮಣ್ಣಿನ ಋಣ ಮರೆಯದ ಈ ಮಹಾ ವ್ಯಕ್ತಿ, ತಾವು ಕಲಿತ ಭದ್ರಕಾಳಿ ಪ್ರೌಢಶಾಲೆಯ ಅಭಿವೃದ್ಧಿಗಾಗಿ “ಶ್ರೀಚಾಮಿ ವಿದ್ಯಾವಾಹಿನಿ ಟ್ರಸ್ಟ್” ರಚಿಸಿ ನಿರಂತರ ನೆರವು ನೀಡುತ್ತಿದ್ದಾರೆ. ಕಷ್ಟದ ದಿನಗಳಲ್ಲಿ ತಮಗೆ ನೆರವಾದ ಮಣ್ಣಿಗೆ ಕೃತಜ್ಞತೆ ತೋರುವ ಈ ಹೃದಯ ವೈಶಾಲ್ಯ ನಿಜಕ್ಕೂ ಅನುಕರಣೀಯ. ಟ್ರಸ್ಟ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಸೇರಿದಂತೆ ಅನೇಕರು ಅಭಿನಂದನೆ ಸುರಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 📧 hosmane@niu.edu ಅಥವಾ NIU ವೆಬ್‌ಸೈಟ್ ಸಂಪರ್ಕಿಸಬಹುದು. ರಥಬೀದಿಯ ಬಡ ಮನೆಯಿಂದ ವಿಶ್ವದ ಸಂಶೋಧನಾ ರ‍್ಯಾಂಕಿಂಗ್ ಪಟ್ಟಿವರೆಗೆ  ಡಾ. ನಾರಾಯಣ “ಚಾಮಿ” ಹೊಸ್ಮನೆ ಅವರ ಸಾಧನೆ ಗೋಕರ್ಣದ ಹಿರಿಮೆ, ಕರ್ನಾಟಕದ ಕೀರ್ತಿ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed