Last Updated:
ಸ್ಟಾರ್ ಸುವರ್ಣ ಗೃಹಮಂತ್ರಿ ಶೋ ಹೋಸ್ಟ್ ರವಿಂಶಕರ್ ಗೌಡ ಹುಬ್ಬಳ್ಳಿಗೆ ಬಂದಿದ್ದಾರೆ. ಈ ಸಮಯದಲ್ಲಿ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ Exclusive ಆಗಿ ಮಾತನಾಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ರವಿಶಂಕರ್ ಗೌಡ (Ravishankar Gowda) ಎಲ್ಲರಿಗೂ ಡಾಕ್ಟರ್ ವಿಠ್ಠಲ್ ರಾವ್ ಆಗಿಯೇ ಚಿರಪರಿಚಿತರು. ಇಂದಿಗೂ ಇವರನ್ನ ಹಾಗೆ ಕರೆಯೋರು ಇದ್ದಾರೆ. ಆದರೆ, ಇದೇ ರವಿಶಂಕರ್ (Ravishankar) ಅವರು ಇದೀಗ ಸುವರ್ಣ ಗೃಹಮಂತ್ರಿ (Suvarna GruhaMantri) ಮೂಲಕ ಅಣ್ಣನಾಗಿಯೇ ಹೆಣ್ಣುಮಕ್ಕಳ ಹೃದಯದಲ್ಲಿ ಜಾಗ ಮಾಡಿಕೊಂಡಿದ್ದಾರೆ. ಮನೆಗೆ ಹೋಗಿ ಸಹೋದರಿಯ ಇಡೀ ಕುಟುಂಬವನ್ನ ಮಾತನಾಡಿಸುತ್ತಾರೆ. ಮನೆ ಮಂದಿಗೆ ಗೇಮ್ಸ್ ಕೂಡ ಆಡಿಸುತ್ತಾರೆ. ಮನೆಯ ಗೃಹಮಂತ್ರಿ ಸಹೋದರಿಗೆ ಬಾಗಿನಕೊಟ್ಟು ಪ್ರೀತಿ ತೋರಿಸುತ್ತಾರೆ. ಗೆಳೆಯ ಸೃಜನ್ ಲೋಕೇಶ್ (Srujan Lokesh) ಅವರ ನಿರ್ಮಾಣದ ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಬಂದಿದ್ದಾರೆ. ಈ ಸಮಯದಲ್ಲಿ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ Exclusive ಆಗಿ ಮಾತನಾಡಿದ್ದಾರೆ. ಇವರ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ.














