Last Updated:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026 ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಈಗ ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಆರ್ಸಿಬಿಗೆ ಬಿಗ್ ಶಾಕ್ ಎದುರಾಗಿದೆ.
ಐಪಿಎಲ್ (IPL) 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಅದ್ಭುತ ಪ್ರದರ್ಶನ ನೀಡಿದ್ದು, ಪ್ಲೇಆಫ್ (Playoff) ಗೆ ಅರ್ಹತೆ ಪಡೆದಿದೆ. ಹಾಲಿ ಚಾಂಪಿಯನ್ (Champion) ಆರ್ಸಿಬಿ ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ (High voltage) ಪಂದ್ಯವು ಮೇ 26 ರಂದು ನಡೆಯಲಿದೆ. ಆರ್ಸಿಬಿ ಈ ಪಂದ್ಯಕ್ಕೆ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಆದರೆ ಇದಕ್ಕೂ ಮೊದಲು ಆರ್ಸಿಬಿ ತಂಡಕ್ಕೆ ಬಿಗ್ ಶಾಕ್ (Shock) ಎದುರಾಗಿದೆ.
ಆರ್ಸಿಬಿ ತಂಡದ ವಿದೇಶಿ ಸ್ಪೋಟಕ ಬ್ಯಾಟರ್ ದಿಡೀರ್ ತವರಿಗೆ ಮರಳಿದ್ದಾರೆ. ಜಾಕೋಬ್ ಬೆಥೆಲ್ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಫಿಲ್ ಸಾಲ್ಟ್ ಅನುಪಸ್ಥಿತಿಯಲ್ಲಿ ಬೆಥೆಲ್ ನಿರಂತರವಾಗಿ ಇನ್ನಿಂಗ್ಸ್ ಆರಂಭಿಸುತ್ತಿದ್ದರು. ಈಗ ಆರ್ಸಿಬಿ ತಂಡವು ಬೆಥೆಲ್ ಅವರನ್ನು ಮಿಸ್ ಮಾಡಿಕೊಳ್ಳಲಿದೆ.
ಐಪಿಎಲ್ 2026 ರ ಸಮಯದಲ್ಲಿ ಆರ್ಸಿಬಿ ಸ್ಟಾರ್ ಬ್ಯಾಟರ್ ಜಾಕೋಬ್ ಬೆಥೆಲ್ ಬೆರಳಿಗೆ ಗಾಯ ಮಾಡಿಕೊಂಡರು. ಈ ಕಾರಣದಿಂದಾಗಿ, ಅವರು ಎಸ್ಆರ್ಹೆಚ್ ವಿರುದ್ಧದ ಆರ್ಸಿಬಿಯ ಅಂತಿಮ ಲೀಗ್ ಹಂತದ ಪಂದ್ಯವನ್ನು ತಪ್ಪಿಸಿಕೊಂಡರು. ಪರಿಣಾಮ ಜಾಕೋಬ್ ಬೆಥೆಲ್ ಟೂರ್ನಮೆಂಟ್ನಿಂದ ಹೊರಗುಳಿದಿದ್ದು, ಇಂಗ್ಲೆಂಡ್ ತೆರಳಲಿದ್ದಾರೆ ಎಂದು ಆರ್ಸಿಬಿ ಈಗ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ನೀಡಿದೆ.
ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಜೂನ್ 4 ರಂದು ಆರಂಭವಾಗಲಿದೆ. ಲಾರ್ಡ್ಸ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ನಲ್ಲಿ ಬೆಥೆಲ್ ಭಾಗವಹಿಸುವುದು ಅನಿಶ್ಚಿತವಾಗಿದೆ ಎಂದು ಇಂಗ್ಲೆಂಡ್ ಹೇಳಿಕೆಯಲ್ಲಿ ತಿಳಿಸಿದೆ. ಜಾಕೋಬ್ ಬೆಥೆಲ್ ಇಂಗ್ಲೆಂಡ್ ಪುರುಷರ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಉಳಿಯುತ್ತಾರೆ. ಬೆಥೆಲ್ ಫಿಟ್ ಆಗಿದ್ದರೆ, ಅವರು ಆಡಲು ಸಾಧ್ಯವಾಗಬಹುದು.
ಜಾಕೋಬ್ ಬೆಥೆಲ್ ಅನುಪಸ್ಥಿತಿಯ ಹೊರತಾಗಿಯೂ, ಕ್ವಾಲಿಫೈಯರ್ 1 ಕ್ಕೂ ಮುನ್ನ ಆರ್ಸಿಬಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ಐಪಿಎಲ್ 2026 ರ ಆವೃತ್ತಿ ಮಧ್ಯದಲ್ಲಿ ಸಾಲ್ಟ್ ಬೆರಳಿನ ಗಾಯದಿಂದ ಬಳಲುತ್ತಿದ್ದರು. ಬಳಿಕ ಅವರು ಚೇತರಿಸಿಕೊಳ್ಳಲು ಇಂಗ್ಲೆಂಡ್ಗೆ ಮರಳಿದರು. ಇದಾದ ಬಳಿಕ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ಸಂಪೂರ್ಣ ಫಿಟ್ನೆಸ್ ಜೊತೆಗೆ ಮರಳಿ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ.
ಆದರಿಂದ ಕ್ವಾಲಿಫೈಯರ್ 1 ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಆರ್ಸಿಬಿ, ಸಾಲ್ಟ್ ಅವರ ಉಪಸ್ಥಿತಿಯನ್ನು ಅಪಾಯಕ್ಕೆ ತೆಗೆದುಕೊಳ್ಳದಿರಲು ನಿರ್ಧರಿಸಿತು. ಹೀಗಾಗಿ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಸಾಲ್ಟ್ ಆಡಲಿಲ್ಲ. ಈಗ, ಅವರು ಮೇ 26 ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ಮುಂಬರುವ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ.
May 23, 2026 10:28 PM IST













