Last Updated:
ಪತ್ರಕರ್ತರು, ಸಂಪಾದಕರು ಹಾಗೂ ಸುದ್ದಿ ಸಂಸ್ಥೆಗಳ ಸಿಬ್ಬಂದಿಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು DataLEADS ಜಂಟಿಯಾಗಿ ಆಗಸ್ಟ್ 19ರಂದು ವಿಶೇಷ ಆನ್‌ಲೈನ್ ಎಐ ತರಬೇತಿ ಕಾರ್ಯಾಗಾರ ಆಯೋಜಿಸಿವೆ.
ಬೆಂಗಳೂರು: ಡಿಜಿಟಲ್ ಯುಗದಲ್ಲಿ (Digital Era) ಪತ್ರಿಕೋದ್ಯಮವೂ ವೇಗವಾಗಿ ಬದಲಾಗುತ್ತಿದೆ. ವಿಶೇಷವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪತ್ರಕರ್ತರು ಮತ್ತು ಸುದ್ದಿ ಸಂಸ್ಥೆಗಳ ಸಿಬ್ಬಂದಿಗೆ AI ತಂತ್ರಜ್ಞಾನದ ಪ್ರಾಯೋಗಿಕ ತರಬೇತಿ ನೀಡಲು ವಿಶೇಷ ಆನ್‌ಲೈನ್ ಕಾರ್ಯಾಗಾರ ಆಯೋಜಿಸಲಾಗಿದೆ.














