Last Updated:
ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಹಳ್ಳಿ ಪವರ್ ರಿಯಾಲಿಟಿ ಶೋನಲ್ಲಿ (Halli Power Reality Show) ಟಾಸ್ಕ್ ಸೋತ ಮಹಿಳಾ ಸ್ಪರ್ಧಿಗಳ ಮುಖಕ್ಕೆ ಸಗಣಿ ಅಥವಾ ಮಸಿ ಬಳಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕ್ರಮಕ್ಕೆ ಮುಂದಾಗಿದೆ
ಮನರಂಜನಾ ಕಾರ್ಯಕ್ರಮವೊಂದರಲ್ಲಿ ಮಹಿಳೆಯರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಹಳ್ಳಿ ಪವರ್ ರಿಯಾಲಿಟಿ ಶೋನಲ್ಲಿ (Halli Power Reality Show) ಟಾಸ್ಕ್ ಸೋತ ಮಹಿಳಾ ಸ್ಪರ್ಧಿಗಳ ಮುಖಕ್ಕೆ ಸಗಣಿ ಅಥವಾ ಮಸಿ ಬಳಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕ್ರಮಕ್ಕೆ ಮುಂದಾಗಿದೆ.














