Ambulance: ಒಂದೊಂದು ನಿಮಿಷಕ್ಕೂ 5 ಸಾವಿರ ಕಟ್‌, ಆ್ಯಂಬುಲೆನ್ಸ್‌ ವಿಷಯಕ್ಕೆ 7 ಕಠಿಣ ನಿರ್ಧಾರ ಜಾರಿ! ಇಲ್ಲಿದೆ ಪೂರ್ಣ ಮಾಹಿತಿ | | ACTPnews

ಹೊಸ ನಿಯಮ


Last Updated:

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತದ ಗಾಯಾಳುಗಳಿಗೆ ತ್ವರಿತ ಚಿಕಿತ್ಸೆ ಸಿಗುವಂತೆ NHAI ಆ್ಯಂಬುಲೆನ್ಸ್ ಸೇವೆಗೆ ಕಟ್ಟುನಿಟ್ಟಿನ ಮಾನದಂಡಗಳನ್ನು ಜಾರಿಗೆ ತಂದಿದೆ. ಟೋಲ್ ಪ್ಲಾಜಾದಿಂದ 10 ಕಿ.ಮೀ. ವ್ಯಾಪ್ತಿಯ ಅಪಘಾತ ಸ್ಥಳಕ್ಕೆ 10 ನಿಮಿಷದೊಳಗೆ ಆ್ಯಂಬುಲೆನ್ಸ್ ತಲುಪದಿದ್ದರೆ ₹10,000 ದಂಡ ವಿಧಿಸಲಾಗುತ್ತದೆ

ಹೊಸ ನಿಯಮ
ಹೊಸ ನಿಯಮ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) ಸಂಭವಿಸುವ ಅಪಘಾತಗಳ ವೇಳೆ ಗಾಯಾಳುಗಳಿಗೆ ತಕ್ಷಣವೇ ವೈದ್ಯಕೀಯ ನೆರವು (Medical Support) ಒದಗಿಸಲು ಹಾಗೂ ಆ್ಯಂಬುಲೆನ್ಸ್ ಸೇವೆಗಳ ವಿಳಂಬಕ್ಕೆ ಬ್ರೇಕ್ ಹಾಕಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅತ್ಯಂತ ಕಟ್ಟುನಿಟ್ಟಿನ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ರಸ್ತೆ ಅಪಘಾತದಲ್ಲಿ ಒದ್ದಾಡುವ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಆ್ಯಂಬುಲೆನ್ಸ್‌ಗಳ (Ambulance) ಸೇವಾ ಗುಣಮಟ್ಟ ಹೆಚ್ಚಿಸಲು ಈ ಖಡಕ್ ನಿರ್ಧಾರ ಕೈಗೊಳ್ಳಲಾಗಿದ್ದು, ತುರ್ತು ಸೇವೆಗೆ ಸ್ಪಂದಿಸಲು ನಿರ್ಲಕ್ಷ್ಯ ತೋರಿದರೆ ಆ್ಯಂಬುಲೆನ್ಸ್ ನಿರ್ವಾಹಕರಿಗೆ ಪ್ರತಿ ನಿಮಿಷಕ್ಕೂ ಸಾವಿರಾರು ರೂಪಾಯಿ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed