Last Updated:
ಇದು ಜಾತಿ, ಧರ್ಮ, ಮಾತೃಭಾಷೆ, ಶಿಕ್ಷಣ, ಉದ್ಯೋಗ, ವಲಸೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಮುಖ್ಯವಾಗಿ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್ ಮತ್ತು ಚಾಲನಾ ಪರವಾನಗಿ ಲಭ್ಯತೆಯಂತಹ ಮಾಹಿತಿಯನ್ನು ಜನರನ್ನು ಕೇಳಬಹುದು. ಇದರರ್ಥ ಈ ಬಾರಿ ಜನಗಣತಿ ನಮೂನೆ ಗಮನಾರ್ಹವಾಗಿ ದೊಡ್ಡದಾಗಿರುತ್ತದೆ ಮತ್ತು ಹೆಚ್ಚು ಡೇಟಾ-ಕಲೆಕ್ಟ್ ಮಾಡಲಾಗುತ್ತದೆ.
ನವದೆಹಲಿ(ಆ.14): ಭಾರತದ ಮುಂದಿನ ಜನಗಣತಿಯು ಮನೆ ಮನೆಗೆ ತೆರಳಿ ಹೆಸರು ಮತ್ತು ವಯಸ್ಸಿನ ಎಣಿಕೆಗಷ್ಟೇ ಸೀಮಿತವಾಗಿರುವುದಿಲ್ಲ. 2027 ರ ಜನಗಣತಿಯು ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಸಾಮಾನ್ಯ ಜಾತಿಗಳ ಎಣಿಕೆಯನ್ನು ಸಹ ಒಳಗೊಂಡಿರುತ್ತದೆ. ಶುಕ್ರವಾರ, ಆಗಸ್ಟ್ 14, 2026 ರಂದು, ಕೇಂದ್ರ ಸರ್ಕಾರವು ಜನಗಣತಿಯ ಎರಡನೇ ಹಂತವಾದ ಜನಸಂಖ್ಯಾ ಗಣತಿಗಾಗಿ 40 ಪ್ರಶ್ನೆಗಳ ಸಂಪೂರ್ಣ ಪಟ್ಟಿಯನ್ನು ಪ್ರಕಟಿಸಿದೆ.














