Sonam Kapoor: ಕೆಲಸಗಾರರಿಗೆ ₹51.4 ಕೋಟಿ ಮೌಲ್ಯದ ಫ್ಲಾಟ್ ಖರೀದಿಸಿದ ಸೋನಮ್ ಕಪೂರ್; ಆದ್ರೆ ಅಕ್ಕಪಕ್ಕದವ್ರದ್ದೇ ಆಕ್ಷೇಪ! ಕಾರಣವೇನು? | | ACTPnews

ಸೋನಂ ಕಪೂರ್


Last Updated:

Sonam Kapoor: ಸೋನಮ್ ಮತ್ತು ಆನಂದ್ ಅವರು ಲಂಡನ್‌ನ ನಾಟಿಂಗ್ ಹಿಲ್‌ ಪ್ರದೇಶದಲ್ಲಿರುವ ತಮ್ಮ ಮಹಲಿನ ಹತ್ತಿರದ ಕಟ್ಟಡವೊಂದರಲ್ಲಿ ಸುಮಾರು 4 ಮಿಲಿಯನ್ ಪೌಂಡ್ (ಸುಮಾರು 51.4 ಕೋಟಿ ರೂ) ಮೌಲ್ಯದ ಐದು ಫ್ಲಾಟ್‌ಗಳನ್ನು ಖರೀದಿಸಿದ್ದಾರೆ.

 ಸೋನಂ ಕಪೂರ್
ಸೋನಂ ಕಪೂರ್

ಬಾಲಿವುಡ್ ದಂಪತಿ ಸೋನಂ ಕಪೂರ್ (Sonam Kapoor) ಮತ್ತು ಆನಂದ್ ಅಹುಜಾ (Anand Ahuja) ಲಂಡನ್‌ನಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ನೆಲೆಸಿರುವುದು ಈಗಾಗಲೇ ತಿಳಿದಿರುವ ವಿಚಾರ. ಆದರೆ ಇದೀಗ ಇವರ ಹೆಸರು ಮತ್ತೊಮ್ಮೆ ಯುಕೆಯಲ್ಲಿ ದೊಡ್ಡ ಮಟ್ಟದ ಆಸ್ತಿ ಹೂಡಿಕೆಯಿಂದಾಗಿ ಗಮನ ಸೆಳೆದಿದೆ. ನಾಟಿಂಗ್ ಹಿಲ್‌ನಲ್ಲಿರುವ ತಮ್ಮ ಐಷಾರಾಮಿ ಮಹಲಿನ ಬಳಿಕ ದಂಪತಿಗಳು ಇನ್ನೊಂದು ಪ್ರಮುಖ ಹೂಡಿಕೆಯನ್ನು ಮಾಡಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ.

ವರದಿಗಳ ಪ್ರಕಾರ, ಸೋನಮ್ ಮತ್ತು ಆನಂದ್ ಅವರು ಲಂಡನ್‌ನ ನಾಟಿಂಗ್ ಹಿಲ್‌ ಪ್ರದೇಶದಲ್ಲಿರುವ ತಮ್ಮ ಮಹಲಿನ ಹತ್ತಿರದ ಕಟ್ಟಡವೊಂದರಲ್ಲಿ ಸುಮಾರು 4 ಮಿಲಿಯನ್ ಪೌಂಡ್ (ಸುಮಾರು 51.4 ಕೋಟಿ ರೂ) ಮೌಲ್ಯದ ಐದು ಫ್ಲಾಟ್‌ಗಳನ್ನು ಖರೀದಿಸಿದ್ದಾರೆ.

ಇವುಗಳನ್ನು ಸಿಬ್ಬಂದಿ ವಸತಿಗಾಗಿ ಬಳಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದ್ದು, ಇದೀಗ ಕಟ್ಟಡದ ಕೆಲವು ನಿವಾಸಿಗಳು ಈ ಬೆಳವಣಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Puttakkana Makkalu Hero: ‘ಪುಟ್ಟಕ್ಕನ ಮಕ್ಕಳು’ ಕಂಠಿ ಈಗ ಹೀರೋ! ಈ ಸಿನಿಮಾದಲ್ಲಿ ಮಳೆಯೇ ಹೈಲೈಟ್

ಈ ಫ್ಲಾಟ್‌ಗಳ ಹಕ್ಕು ಮಾಲೀಕತ್ವಕ್ಕೆ ಸಂಬಂಧಿಸಿದ ವಿಷಯದೊಂದಿಗೆ ಕಟ್ಟಡದ ಕೆಲವು ನಿವಾಸಿಗಳು ತಮ್ಮ ವಾತಾವರಣ ಬದಲಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಕೆಲವು ಮನೆಗಳು ಈಗ ಖಾಲಿಯಾಗಿದ್ದು, ಕೆಲವು ದುರಸ್ತಿ ಕಾರ್ಯದಲ್ಲಿ ತೊಡಗಿವೆ. ಸ್ಥಳೀಯ ನಿವಾಸಿಗಳ ಅಭಿಪ್ರಾಯದಲ್ಲಿ, ಈ ಬದಲಾವಣೆಗಳು ಅವರ ಸಮುದಾಯದ ಶಾಂತ ವಾತಾವರಣಕ್ಕೆ ಧಕ್ಕೆಯಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ ದಂಪತಿಗಳ ಪರವಾಗಿ ಮಾತನಾಡಿದ ಪ್ರತಿನಿಧಿಯೊಬ್ಬರು, ಸೋನಮ್ ಮತ್ತು ಆನಂದ್ ಅವರು ಈ ಕಂಪನಿಯೊಂದಿಗೆ ನೇರ ಸಂಬಂಧ ಹೊಂದಿಲ್ಲ ಮತ್ತು ಈ ಖರೀದಿಗಳು ಹೂಡಿಕೆ ನಿಟ್ಟಿನಲ್ಲಿ ಮಾತ್ರ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ತಮ್ಮ ನಾಟಿಂಗ್ ಹಿಲ್ ಮಹಲಿನ ನವೀಕರಣಕ್ಕಾಗಿ ದಂಪತಿಗಳು ಸುಮಾರು 4.7 ಮಿಲಿಯನ್ ಪೌಂಡ್ (ಸುಮಾರು 60.4 ಕೋಟಿ ರೂ) ವೆಚ್ಚ ಮಾಡಿದ್ದಾರೆ ಎಂಬ ವರದಿಯಾಗಿದೆ . ಲಂಡನ್ ಆಸ್ತಿಗಳ ಹೊರತಾಗಿ, ದಂಪತಿಗಳು ಮುಂಬೈ ಮತ್ತು ಡೆಲ್ಲಿಯಲ್ಲೂ ನಿವಾಸಗಳನ್ನು ಹೊಂದಿದ್ದಾರೆಂದು ವರದಿಯಾಗಿದೆ.

ಸೋನಮ್ ಕಪೂರ್ ಮತ್ತು ಆನಂದ್ ಅಹುಜಾ ಅವರು ಮಾರ್ಚ್ 2018ರಲ್ಲಿ ವಿವಾಹವಾಗಿದ್ದು, 2022ರಲ್ಲಿ ತಮ್ಮ ಮೊದಲ ಮಗ ವಾಯುವನ್ನು ಸ್ವಾಗತಿಸಿದ್ದರು. ಈ ವರ್ಷದ ಮಾರ್ಚ್ 29 ರಂದು ತಮ್ಮ ಎರಡನೇ ಮಗುವಿನ ಆಗಮನವನ್ನು ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತವಾಗಿ ಘೋಷಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed