Last Updated:
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯ ಆಗಸ್ಟ್ 15ರಂದು ನಡೆಯಲಿದೆ. ಅದಕ್ಕೂ ಮುಂಚೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್-11 ರ ಬಗ್ಗೆ ಚರ್ಚೆ ನಡೆಯುತ್ತದೆ.
ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವಿನ ಟೆಸ್ಟ್ (Test) ಸರಣಿಗೆ ಕೇವಲ 5 ದಿನಗಳು ಮಾತ್ರ ಬಾಕಿ ಉಳಿದಿವೆ. ಟೀಮ್ ಇಂಡಿಯಾ ಅಭ್ಯಾಸ ಪಂದ್ಯ ಆಡಿ ಗೆದ್ದಿದೆ. ಈಗ ಮೊದಲ ಟೆಸ್ಟ್ಗೆ ಟೀಮ್ ಇಂಡಿಯಾದಲ್ಲಿ ಯಾರು ಆಡುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಸರ್ಫರಾಜ್ ಖಾನ್ (Sarfaraz Khan) ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಆದರೆ ಅವರು ಆಡುತ್ತಾರೆಯೋ ಇಲ್ಲವೋ ಎಂಬುದು ಚರ್ಚೆ ಆಗುತ್ತಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಯಾವ ಪ್ಲೇಯಿಂಗ್-11 ಅನ್ನು ಆಯ್ಕೆ ಮಾಡಬಹುದು ಎಂದು ನೋಡೋಣ ಬನ್ನಿ.














