Last Updated:
ನನ್ನ ಚಿತ್ರಗಳನ್ನ ನೋಡಿ ಗೆಲ್ಲಿಸಿದ್ದೀರಿ. ಪ್ರತಿ ಗೆಲುವು ನನಗೆ ಹುಮ್ಮಸ್ಸು ನೀಡಿದೆ. ಈ ಗೆಲುವುಗಳ ಪ್ರತೀಕವೇ ಈ ಟಾಕ್ಸಿಕ್ ಸಿನಿಮಾ ಅಂತ ಯಶ್ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರಕ್ಕೆ (Toxic Movie) ಯಶ್ ಸುಮಾರು 4 (Yash) ವರ್ಷ ಡೆಡಿಕೇಟ್ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಹಗಲಿರುಳು ದುಡಿದಿದ್ದಾರೆ. ಪತ್ನಿ ಮತ್ತು ಮಕ್ಕಳಿಂದಲೂ ದೂರ ಉಳಿದಿದ್ದಾರೆ. ಆದರೆ, ಇಷ್ಟೆಲ್ಲ ಮಾಡೋಕೆ ಇವರಿಗೆ ಸ್ಪೂರ್ತಿ ಏನು ಗೊತ್ತಾ? ಈ ಹಿಂದೆ ಕನ್ನಡದ ಜನತೆ ಕೊಟ್ಟ ಗೆಲುವೇ ಆಗಿದೆ. ಈ ಗೆಲುವು ಹೊಸದನ್ನ ಮಾಡ್ಬೇಕು ಅಂತ ಹುಮ್ಮಸ್ಸು ಕೊಟ್ಟಿದೆ. ಈ ಮೊದಲಿನ ಗೆಲುವುಗಳ ಪ್ರತೀಕವೇ ಈ ಒಂದು ಟಾಕ್ಸಿಕ್ ಸಿನಿಮಾ (Toxic Movie) ಆಗಿದೆ. ಈ ಒಂದು ಮಾತನ್ನ ಸ್ವತಃ ಯಶ್ (Yash) ಹೇಳಿಕೊಂಡಿದ್ದಾರೆ. ಇವರ ಮನದ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.














