ICC World Cup: ವೆಸ್ಟ್ ಇಂಡೀಸ್​ಗೆ ಬಿಗ್​ ಶಾಕ್! ಸತತ 3ನೇ ಬಾರಿಗೆ ವಿಶ್ವಕಪ್​​ ನೇರ ಅರ್ಹತೆ ತಪ್ಪಿಸಿಕೊಂಡ 2 ಬಾರಿಯ ಚಾಂಪಿಯನ್ | ಕ್ರೀಡಾ ಸುದ್ದಿ | ACTPnews

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ


Last Updated:


ಸೆಪ್ಟೆಂಬರ್ 30, 2026ರಂದು ಶ್ರೇಯಾಂಕದ ಕಟ್‌ಆಫ್ ಇದೆ. ಪ್ರಸ್ತುತ ವೆಸ್ಟ್ ಇಂಡೀಸ್ 10ನೇ ಸ್ಥಾನದಲ್ಲಿದ್ದು ಕೇವಲ 73 ಪಾಯಿಂಟ್‌ಗಳನ್ನು ಹೊಂದಿದೆ. ಬಾಂಗ್ಲಾದೇಶ 9ನೇ ಸ್ಥಾನದಲ್ಲಿ 83 ಪಾಯಿಂಟ್ ಮತ್ತು ಅಫ್ಘಾನಿಸ್ತಾನ 7ನೇ ಸ್ಥಾನದಲ್ಲಿ 90 ಪಾಯಿಂಟ್‌ಗಳೊಂದಿಗೆ ಮುಂದಿದೆ. ಐಸಿಸಿ ಶ್ರೇಯಾಂಕದಲ್ಲಿರುವ ಟಾಪ್ 8 ತಂಡಗಳಿಗೆ ಮಾತ್ರ ನೇರ ಅರ್ಹತೆ ಸಿಗಲಿದೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ

ಅಫ್ಘಾನಿಸ್ತಾನ ಐರ್ಲೆಂಡ್ (India vs Afghanistan) ವಿರುದ್ಧ 92 ರನ್‌ಗಳಿಂದ ಗೆದ್ದ ನಂತರ ವೆಸ್ಟ್ ಇಂಡೀಸ್‌ನ (West Indies) 2027 ODI ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವ ಆಶೆ ಸಂಪೂರ್ಣವಾಗಿ ಮುಚ್ಚಿಹೋಗಿದೆ. ಎರಡು ಬಾರಿ ವಿಶ್ವಕಪ್ (World Cup) ಗೆದ್ದ ಈ ತಂಡವು ಈಗ ಮೂರನೇ ಸತತ ಬಾರಿ ಕ್ವಾಲಿಫಯರ್ಸ್‌ ಸುತ್ತಿನಲ್ಲಿ ಆಡಬೇಕಾದ ಪರಿಸ್ಥಿತಿ ಎದುರಿಸುತ್ತಿದೆ. ಐರ್ಲೆಂಡ್ ವಿರುದ್ಧದ ಎರಡನೇ ODIಯಲ್ಲಿ ಅಫ್ಘಾನಿಸ್ತಾನ 299/8 ರನ್ ಗಳಿಸಿ, ರಶೀದ್ ಖಾನ್‌ನ (Rashid Khan) ಅದ್ಭುತ 6/34 ಬೌಲಿಂಗ್‌ನಿಂದ ಐರ್ಲೆಂಡ್ ಅನ್ನು 207 ರನ್‌ಗಳಿಗೆ ಆಲೌಟ್ ಮಾಡಿತು. ಈ ಗೆಲುವು ಅಫ್ಘಾನಿಸ್ತಾನದ ಐಸಿಸಿ ಏಕದಿನ ಶ್ರೇಯಾಂಕವನ್ನ 7ನೇ ಸ್ಥಾನಕ್ಕೆ ಏರಿಸಿದೆ. ಇದರಿಂದ ವೆಸ್ಟ್ ಇಂಡೀಸ್‌ಗೆ ಉಳಿದಿದ್ದ ಕೊನೆಯ ಮಾರ್ಗವನ್ನೂ ಮುಚ್ಚಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed