Last Updated:
Mother: ಲಿಖಿಬೆನ್ ಸೋಲಂಕಿ ಎಂಬಾಕೆ ತನ್ನ ಮಗಳನ್ನು ಹೊಡೆದು ಕೊಂದಿರೋ ಆರೋಪ ಹೊತ್ತು ಜೈಲು ಸೇರಿದ್ದಳು. ಹಸಿವಾಗುತ್ತಿದೆ ತಿಂಡಿ ಕೊಡು ಅಂತ ಮಗು ತೀವ್ರ ಹಠ ಮಾಡುತ್ತಿತ್ತು. ಇದರಿಂದ ಸಿಟ್ಟಿಗೆದ್ದ ತಾಯಿ, ಮಗಳನ್ನು ಕೊಲೆ ಮಾಡಿರೋ ಆರೋಪ ಕೇಳಿ ಬಂದಿತ್ತು.
ಗುಜರಾತ್: ತನ್ನ ಮಗುವನ್ನೇ (child) ಕೊಂದಿದ್ದ ತಾಯಿಯೊಬ್ಬಳಿಗೆ (mother) ಜಾಮೀನು (Bail) ನೀಡಿ ಅಹಮದಾಬಾದ್ ಕೋರ್ಟ್ (Ahmedabad court) ಆದೇಶಿಸಿದೆ. ಮಗಳ ಕೊಲೆ ಆರೋಪಿಯಾಗಿದ್ದ ತಾಯಿಗೆ ನ್ಯಾಯಮೂರ್ತಿ ಹಸ್ಮುಖ್ ಡಿ ಸುತಾರ್ (Justice Hasmukh D Sutar) ಅವರ ನೇತೃತ್ವದ ನ್ಯಾಯಪೀಠ ನಿಯಮಿತ ಜಾಮೀನು ನೀಡಿದೆ. ಲಿಖಿಬೆನ್ ಸೋಲಂಕಿ (Likhiben Solanki) ಎಂಬಾಕೆ ತನ್ನ ಮಗಳನ್ನು ಹೊಡೆದು ಕೊಂದಿರೋ ಆರೋಪ ಹೊತ್ತು ಜೈಲು ಸೇರಿದ್ದಳು. ಹಸಿವಾಗುತ್ತಿದೆ ತಿಂಡಿ ಕೊಡು ಅಂತ ಮಗು ತೀವ್ರ ಹಠ ಮಾಡುತ್ತಿತ್ತು. ಇದರಿಂದ ಸಿಟ್ಟಿಗೆದ್ದ ತಾಯಿ, ಮಗಳನ್ನು ಕೊಲೆ ಮಾಡಿರೋ ಆರೋಪ ಕೇಳಿ ಬಂದಿತ್ತು. ಇದೀಗ ರೆಗ್ಯುಲರ್ ಜಾಮೀನು ನೀಡಿರೋ ಕೋರ್ಟ್, ಆಕೆ ಹೊಡೆದು ಕೊಂದ ಕಾರಣ ಕೇಳಿ ಮರುಗಿದೆ.














