Last Updated:
Darshan Case: ಪ್ರದೋಷ್ ಮಾಫಿ ಸಾಕ್ಷಿಯಾಗ್ತೀನಿ ಎಂದು ಅರ್ಜಿ ಸಲ್ಲಿಸಿದ ಬೆನ್ನಲ್ಲೇ ದರ್ಶನ್ ಲಾಯರ್ ಇದನ್ನು ಆಕ್ಷೇಪಿಸಿದ್ದಾರೆ. ಇದಕ್ಕೆ ಎಸ್ಪಿಪಿ ಹೇಳಿದ್ದೇನು ಗೊತ್ತಾ?
ರೇಣುಕಾಸ್ವಾಮಿ ಕೇಸ್ನಲ್ಲಿ (Renukaswamy Case) ತನ್ನನ್ನು ಮಾಫಿ ಸಾಕ್ಷಿ ಮಾಡಬೇಕು ಎಂದು ಆರೋಪಿ ಪ್ರದೋಷ್ (Pradosh) ಅರ್ಜಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಬಂದಿದೆ. ಸದ್ಯ ಈ ಅರ್ಜಿ ಸಂಬಂಧ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಸದ್ಯ ಎಸ್ಪಿಪಿ ಪ್ರಸನ್ನ ಕುಮಾರ್ (SPP Prasanna Kumar) ಅವರು ಕೆಲವು ಷರತ್ತುಗಳನ್ನಿಟ್ಟು ಮಾಫಿಸಾಕ್ಷಿಗೆ ಒಪ್ಪಿಗೆ ಸೂಚಿಸಿದ್ದಾರೆ.
14ನೇ ಆರೋಪಿ ಪ್ರದೋಷ್ ಮಾಫಿಸಾಕ್ಷಿಗೆ ಪ್ರಾಸಿಕ್ಯೂಷನ್ ಒಪ್ಪಿಗೆ ಕೊಟ್ಟಿದ್ದು, ದರ್ಶನ್ & ಗ್ಯಾಂಗ್ ಕೊಲೆ ಆರೋಪ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮಾಫಿಸಾಕ್ಷಿಯಾಗಿ ಪ್ರದೋಷ್ ನನ್ನು ಪರಿಗಣಿಸುವಂತೆ ಪ್ರಾಸಿಕ್ಯೂಷನ್ ಒಪ್ಪಿಗೆ ಕೊಟ್ಟಿದೆ.
ತಮಗೆ ಪ್ರದೋಶ್ ಸಲ್ಲಿಸಿರೋ ಅರ್ಜಿ ಪ್ರತಿ ನೀಡುವಂತೆ ಮನವಿ ಮಾಡಿದ್ದು ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲಾಗುವುದು. ಇದು ಸಾಕ್ಷಿಗಳು ಕೊರತೆ ಇರುವ ಪ್ರಕರಣ ಅಲ್ಲ. ಸಾಕಷ್ಟು ಸಾಕ್ಷಿ ಇದೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಹೀಗಾಗಿಯೂ ಮಾಫಿ ಸಾಕ್ಷಿ ಪಡೆಯಲು ಮುಂದಾಗಿರೋದು ಯಾಕೆ ಎಂದು ದರ್ಶನ್ ಪರ ವಕೀಲ ಹಸ್ಮತ್ ಪಾಷ ವಾದ ಮಾಡಿದ್ದಾರೆ.
ದರ್ಶನ್ ಲಾಯರ್ಗೆ ತಿರುಗೇಟು ಕೊಟ್ಟ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿ, ಮಾಫಿ ಸಾಕ್ಷಿ ಪ್ರಕ್ರಿಯೆಯನ್ನ ಸಹ ಆರೋಪಿಗಳು ಪ್ರಶ್ನಿಸಬಹುದು. ಉಳಿದಂತೆ ಮಾಫಿ ಪ್ರಶ್ನಿಸುವ ಅಧಿಕಾರ ಸಹ ಆರೋಪಿಗಳಿಲ್ಲ ಎಂದಿದ್ದಾರೆ.
‘ಕೋಳಿ ಕೇಳಿ ಖಾರ ಅರಿಬೇಕಾ’ ಎಂಬ ಗಾದೆ ಉಲ್ಲೇಖಿಸಿ ವಾದಿಸಿದ ಎಸ್ಪಿಪಿ ಪ್ರಸನ್ನ ಕುಮಾರ್ ಮಾಫಿ ಸಾಕ್ಷಿ ಅರ್ಜಿ ಸಲ್ಲಿಕೆಗೆ ಇತರೆ ಆರೋಪಿಗಳ ಸಹಮತಿ ಅಗತ್ಯವಿಲ್ಲ. ಮಾಫಿ ಸಾಕ್ಷಿ ಅಂಗೀಕರಿಸುವಾಗ ಆರೋಪಿ ಪಾತ್ರ ಕೂಡ ಪ್ರಮುಖವಾಗಿದೆ. ದರ್ಶನ್ ಹಲ್ಲೆ ಮಾಡುವಾಗ ಬೇಡ ಸಾರ್ ಬೇಡ ಸಾರ್ ಅಂತ ಪಕ್ಕಕ್ಕೆ ಕರ್ಕೊಂಡು ಹೋಗಿದ್ದಾನೆ ಎಂದಿದ್ದಾರೆ.
ಎ14 ಪ್ರದೂಷ್ ಮಾಫಿ ಸಾಕ್ಷಿಗೆ ಒಪ್ಪಿಗೆ ಸೂಚಿಸಿದ ಪ್ರಾಸಿಕ್ಯೂಷನ್ ಕೋರ್ಟ್ ಗೆ ಷರತ್ತುಬದ್ಧ ಒಪ್ಪಿಗೆ ಸೂಚಿಸಿದೆ. ಎಸ್ಪಿಪಿ ಪ್ರಸನ್ನ ಕುಮಾರ್ ಅವರಿಂದ ಒಪ್ಪಿಗೆ ಮೆಮೋ ಸಲ್ಲಿಕೆಯಾಗಿದೆ.
ಕೆಲ ಷರತ್ತುಗಳಿಗೆ ಒಳಪಟ್ಟು ಎಸ್ಪಿಪಿ ಒಪ್ಪಿಗೆ ಸೂಚಿಸಿದ್ದು ಆರೋಪಿ ಪ್ರದೂಷ್ ಗೆ ಗೊತ್ತಿರೋ ಎಲ್ಲಾ ಸತ್ಯವನ್ನ ಹೇಳಬೇಕು. ಕೇವಲ ಆತನ ವಿರುದ್ದ ಮಾತ್ರವಲ್ಲ ಉಳಿದ ಆರೋಪಿಗಳ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ವಿಷಯ ಹೇಳಬೇಕು ಎಂದಿದ್ದಾರೆ.
ವರದಿ: ಮಂಜುನಾಥ್ ಎನ್. ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು
Bangalore,Karnataka














