Rashmika Mandanna: ಜಾಸ್ತಿ ನಿದ್ದೆ, ಒಂಚೂರು ಓದು, ಒಂದಷ್ಟು ಮೀಟಿಂಗ್! ರಶ್ಮಿಕಾ ದಿನಚರಿ ಕಂಪ್ಲೀಟ್ ಚೇಂಜ್ | | ACTPnews

ಜಾಸ್ತಿ ನಿದ್ದೆ, ಒಂಚೂರು ಓದು, ಒಂದಷ್ಟು ಮೀಟಿಂಗ್; ರಶ್ಮಿಕಾ ದಿನಚರಿ ಕಂಪ್ಲೀಟ್ ಚೇಂಜ್!


Last Updated:

ರಶ್ಮಿಕಾ ಮಂದಣ್ಣ ದಿನಚರಿ ಕಂಪ್ಲೀಟ್ ಬದಲಾಗಿದೆ. ಮನಸ್ಸು ಬಂದಾಗ ಏಳುತ್ತಾರೆ. ಜಾಸ್ತಿ ನಿದ್ದೆ ಮಾಡ್ತಿದ್ದಾರೆ. ಕಡಿಮೆ ತಿನ್ನೋಕೆ ಟ್ರೈ ಮಾಡ್ತಿದ್ದಾರೆ. ಇದನ್ನೆಲ್ಲ ಸ್ವತಃ ರಶ್ಮಿಕಾ ಹೇಳಿಕೊಂಡಿದ್ದಾರೆ. ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.

ಜಾಸ್ತಿ ನಿದ್ದೆ, ಒಂಚೂರು ಓದು, ಒಂದಷ್ಟು ಮೀಟಿಂಗ್; ರಶ್ಮಿಕಾ ದಿನಚರಿ ಕಂಪ್ಲೀಟ್ ಚೇಂಜ್!
ಜಾಸ್ತಿ ನಿದ್ದೆ, ಒಂಚೂರು ಓದು, ಒಂದಷ್ಟು ಮೀಟಿಂಗ್; ರಶ್ಮಿಕಾ ದಿನಚರಿ ಕಂಪ್ಲೀಟ್ ಚೇಂಜ್!

ರಶ್ಮಿಕಾ ಮಂದಣ್ಣ (Rashmika Mandanna) ದಿನಚರಿ ಚೇಂಜ್ (Routine Change) ಆಗಿದೆ. ಮೊದಲಿನ ತರ ಅಲಾರಾಂ ಕಿರಿಕಿರಿ ಇಲ್ಲ. ಸ್ವಲ್ಪ ನಿದ್ದೆ ಮಾಡ್ಬೇಕು ಅನ್ನುವ ಅವಶ್ಯಕತೆನೂ ಇಲ್ಲ. ಮನಸ್ಸು ಬಂದಾಗ ಏಳೋದು? ಎಷ್ಟು ಬೇಕೋ ಅಷ್ಟು ತಿನ್ನಬೇಕು ಅಂತಲೂ ಇಲ್ಲ. ಜಾಸ್ತಿನೇ ತಿನ್ನುತ್ತಿದ್ದಾರೆ. ಆದರೂ, ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ನೆಚ್ಚಿನ ನಾಯಿ ಜೊತೆಗೆ ಟೈಮ್ ಕಳೆಯುತ್ತಿದ್ದಾರೆ. ಮದುವೆ ಫೋಟೋಗಳನ್ನು (Marriage Photos) ನೋಡ್ತಿದ್ದಾರೆ. ಟಿವಿ ಶೋ ನೋಡೋದು ಇದೆ. ಸಿನಿಮಾ ಮೀಟಿಂಗ್ (Movie Meetings) ಕೂಡ ಇರುತ್ತವೆ. ಹೀಗೆ ತಮ್ಮ ದಿನಚರಿಯ ಕತೆಯನ್ನ ಸ್ವತಃ ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ನನ್ನ ದಿನಗಳು ಸೂಪರ್

ರಶ್ಮಿಕಾ ಮಂದಣ್ಣ ಆರಾಮಾಗಿದ್ದಾರೆ. ಸೊಂಟಕ್ಕೆ ಪೆಟ್ಟು ಬಿದ್ದಿರೋದು ಗೊತ್ತೇ ಇದೆ. ಆದರೆ, 6 ವಾರ ರೆಸ್ಟ್ ತೆಗೆದುಕೊಳ್ಳಬೇಕು ಅಲ್ಲವೇ? ಅದಕ್ಕೆ ತಮ್ಮ ದಿನಚರಿಯನ್ನ ಬದಲಿಸಿದ್ದಾರೆ.
rashmika mandanna hip injury recovery routine at home

6 ವಾರಗಳ ಕಂಪ್ಲೀಟ್ ರೆಸ್ಟ್

(ಚಿತ್ರ ಕೃಪೆ: ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್)

ಜಾಸ್ತಿ ನಿದ್ದೆ ಮಾಡ್ತಿದ್ದಾರೆ. ಅಲಾರಾಂ ಕಿರಿಕಿರಿ ಇಲ್ಲ. ತಿನ್ನುವ ವಿಚಾರದಲ್ಲಿ ಕಂಟ್ರೋಲ್ ಮಾಡೋಕೆ ಟ್ರೈ ಮಾಡ್ತಿದ್ದಾರೆ. ಸ್ವಲ್ಪ ಓದುತ್ತಾರೆ. ಪಜಲ್ ಬಿಡಿಸುವುದನ್ನು ಮಾಡ್ತಾರೆ.

ಟಿವಿ ಶೋಗಳನ್ನ ನೋಡ್ತಾರೆ

ರಶ್ಮಿಕಾ ಮಂದಣ್ಣ ಸದ್ಯ ರೆಸ್ಟ್ ಅಲ್ಲಿಯೇ ಇದ್ದಾರೆ. ಅದಕ್ಕೆ ಕೆಲವು ಟಿವಿ ಶೋಗಳನ್ನು ನೋಡ್ತಾ ಇದ್ದಾರೆ. ಅಗತ್ಯ ಇದೆ ಅನಿಸಿದ್ರೆ ಹೇರ್ ಕೇರ್ ಮಾಡಿಕೊಳ್ಳುವುದು ಇದೆ.

ಮದುವೆ ಫೋಟೋ ನೋಡ್ತಿದ್ದಾರೆ

ರಶ್ಮಿಕಾ ಮಂದಣ್ಣ ಅವರಿಗೆ ಟೈಮ್ ಸಿಕ್ಕಿದೆ. ಅದನ್ನ ಚೆನ್ನಾಗಿಯೇ ಬಳಕೆ ಮಾಡುತ್ತಿದ್ದಾರೆ. ತಮ್ಮ ಮದುವೆಯ ಆಲ್ಬಂ ನೋಡುತ್ತಿದ್ದಾರೆ. ವಿಡಿಯೋಗಳನ್ನು ವೀಕ್ಷಿಸುತ್ತಿದ್ದಾರೆ.

ಸಾಕು ನಾಯಿ ಔರಾ ಜೊತೆಗೂ ಆಟವನ್ನು ಆಡ್ತಾರೆ. ಇದು ರಶ್ಮಿಕಾ ಮಂದಣ್ಣ ಅವರ ಸದ್ಯ ದಿನಚರಿ ಆಗಿದೆ. ಮದುವೆ ಮುಂಚೆ ಮತ್ತು ಮದುವೆ ನಂತರವೂ ರಶ್ಮಿಕಾ ಬ್ಯುಸಿನೇ ಇದ್ದರು. ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಅಲ್ಲಿ ಬ್ಯುಸಿ ಆಗಿರ್ತಾ ಇದ್ದರು.

rashmika mandanna hip injury recovery routine at home

ಶೂಟಿಂಗ್ ಸಮಯದಲ್ಲಿ ಗಾಯ

(ಚಿತ್ರ ಕೃಪೆ: ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್)

ಶೂಟಿಂಗ್ ಸಮಯದಲ್ಲಿ ಗಾಯ

ರಶ್ಮಿಕಾ ಮಂದಣ್ಣ ಸದ್ಯ ಒಪ್ಪಿರೋ ಎರಡು ಚಿತ್ರಗಳು ಬಿಗ್ ಬಜೆಟ್ ಚಿತ್ರಗಳೇ ಆಗಿವೆ. ಈ ಚಿತ್ರಗಳು ಹೆಚ್ಚಿನ ಶ್ರಮವನ್ನು ಕೇಳುತ್ತವೆ. ಇದರಲ್ಲಿ ಮೈಸಾ ಚಿತ್ರದಲ್ಲಿ ಆ್ಯಕ್ಷನ್‌ಗಳಿವೆ.

ಈ ಆ್ಯಕ್ಷನ್ ಮಾಡೋಕೆ ಬೇಕಿರೋ ಎಲ್ಲ ತಯಾರಿ ಮಾಡಿಕೊಂಡೇ ರಶ್ಮಿಕಾ ಶೂಟಿಂಗ್‌ಗೆ ಹೋಗಿದ್ದರು. ರಣಬಾಲಿ ಚಿತ್ರದ ಕೆಲಸವು ನಡೆಯುತ್ತಿತ್ತು. ಹಾಗಾಗಿಯೇ ಬ್ಯಾಕ್ ಟು ಬ್ಯಾಕ್ ಕೆಲಸ ಮಾಡ್ತಾ ಇದ್ದರು. ಈ ಸಮಯದಲ್ಲಿ ಸೊಂಟಕ್ಕೆ ಗಾಯ ಮಾಡಿಕೊಂಡಿದ್ದಾರೆ ನೋಡಿ.

6 ವಾರಗಳ ಕಂಪ್ಲೀಟ್ ರೆಸ್ಟ್

ರಶ್ಮಿಕಾ ಮಂದಣ್ಣ ಅವರನ್ನ ನೋಡಿರೋ ವೈದ್ಯರು ಸಲಹೆ ಕೊಟ್ಟಿದ್ದಾರೆ. 6 ವಾರಗಳವರೆಗೂ ರೆಸ್ಟ್ ತೆಗೆದುಕೊಳ್ಳಬೇಕು ಅಂತಲೇ ಹೇಳಿದ್ದಾರೆ.

ಈ ಕಾರಣಕ್ಕೇನೆ ರಶ್ಮಿಕಾ ಮಂದಣ್ಣ ಮನೆಯಲ್ಲಿಯೇ ಇದ್ದಾರೆ. ಮನೆಯವರ ಜೊತೆಗೆ ಟೈಮ್ ಕಳೆಯುತ್ತಿದ್ದಾರೆ. ಪುಸ್ತಕ ಓದುತ್ತಿದ್ದಾರೆ. ಪಜಲ್ ಬಿಡಿಸುತ್ತಿದ್ದಾರೆ. ಸಾಕು ನಾಯಿಯ ಜೊತೆಗೆ ಆಟವನ್ನು ಆಡುತ್ತಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed