Darshan-Pavithra: ದರ್ಶನ್​, ಪವಿತ್ರಾ ಗೌಡಕ್ಕೆ ಇದೆಂಥಾ ಸ್ಥಿತಿ ಬಂತು! ಕೋರ್ಟ್​​ನಲ್ಲಿ ‘ಮಾಫಿ ಸಾಕ್ಷಿ’ಗಳ ಆಟಕ್ಕೆ ದಾಸನ ರಿಯಾಕ್ಷನ್ ಹೇಗಿತ್ತು? | | ACTPnews

News18


Last Updated:

ನಟ ದರ್ಶನ್ , ಪವಿತ್ರಾ ಗೌಡ ಹಾಗೂ ಕೆಲ ಆರೋಪಿಗಳು ಕೂಡ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾಗಿದ್ರು. ಆರೋಪಿಗಳು ಮಾಫಿ ಸಾಕ್ಷಿಗಳಾಗುತ್ತಿರೋ ಸುದ್ದಿ ಕೇಳಿ ದಾಸ ಮೌನಕ್ಕೆ ಜಾರಿದ್ದಾರೆ.

News18
News18

ಬೆಂಗಳೂರು (ಆ.06): ರೇಣುಕಾಸ್ವಾಮಿ ಹತ್ಯೆ ಕೇಸ್​​ನಲ್ಲಿ (Renukaswamy Case) ಮಹತ್ವದ ಬೆಳವಣಿಗೆ ನಡೆದಿದ್ದು, ಆರೋಪಿ ದರ್ಶನ್ (Darshan) ಹಾಗೂ ಪವಿತ್ರಾ ಗೌಡಗೆ (Pavithra Gowda) ಇದು ಬಿಗ್ ಶಾಕಿಂಗ್ ನ್ಯೂಸ್ ಆಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಕೋರಿ ಅರ್ಜಿ ಸಲ್ಲಿಸಿದ್ದು, ಇದರ ನಡುವೆಯೇ ಮತ್ತಿಬ್ಬರು ಆರೋಪಿಗಳು ಕೂಡ ಮಾಫಿ ಸಾಕ್ಷಿಯನ್ನಾಗಿ ಮಾಡುವಂತೆ ಕೋರ್ಟ್​ ಮೊರೆ ಹೋಗಿದ್ದಾರೆ. ಇದನ್ನೆಲ್ಲಾ ಕಂಡು ದರ್ಶನ್​ ಹಾಗೂ ಪವಿತ್ರಾ ಗೌಡ ಮೌನಕ್ಕೆ ಜಾರಿದ್ದಾರೆ.

ಮಾಫಿ ಸಾಕ್ಷಿಗಳ ಆಟ, ದರ್ಶನ್​​ ಒಂಟಿಯಾದ್ರಾ?

ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ನಡೆದಿದ್ದು, ನಟ ದರ್ಶನ್ , ಪವಿತ್ರಾ ಗೌಡ ಹಾಗೂ ಕೆಲ ಆರೋಪಿಗಳು ಕೂಡ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾಗಿದ್ರು. ಆರೋಪಿಗಳು ಮಾಫಿ ಸಾಕ್ಷಿಗಳಾಗುತ್ತಿರೋ ಸುದ್ದಿ ಕೇಳಿ ನಟ ದರ್ಶನ್​ ಬೇಸರಗೊಂಡಿದ್ದಾರೆ.

ಬೇಸರದಿಂದ ಮೌನಕ್ಕೆ ಜಾರಿದ ದರ್ಶನ್​?

ವಿಡಿಯೋ ಕಾನ್ಫೆರೆನ್ಸ್ ವೇಳೆ ನಟ ದರ್ಶನ್​ ಅವರು ಕೊನೆಯ ಬೇಂಜ್​ನಲ್ಲಿ ಸೈಲೆಂಟ್​ ಆಗಿ ಕೂತಿದ್ರು. ಮಾಫಿ ಸಾಕ್ಷಿಗಳು ಮುಂದೆ ಕುಳಿತುಕೊಂಡಿದ್ರು. ದರ್ಶನ್ ಮುಖದಲ್ಲಿ ಬೇಸರ ಎದ್ದು ಕಾಣ್ತಿತ್ತು. ಮಾಫಿ ಸಾಕ್ಷಿಗಳ ಹೇಳಿಕೆ ಬಳಿಕ ಕೇಸ್ ಕಥೆ ಏನಾಗುತ್ತೋ ಅನ್ನೋ ಟೆನ್ಷನ್ ದರ್ಶನ್ ಮುಖ ಮೂಡಿದೆ.

ತಲೆ ಮೇಲೆ ಕೈ ಹಾಕಿ ಕುಳಿತ ಪವಿತ್ರಾ ಗೌಡ

ಮಾಫಿ ಸಾಕ್ಷ್ಯ ಅರ್ಜಿ ವಾದವನ್ನ ಎಲ್ಲಾ ಆರೋಪಿಗಳು ಕೇಳ್ತಿದ್ದಾರೆ. ಈ ವೇಳೆ ದರ್ಶನ್ ಹಾಗೂ ಪವಿತ್ರಗೌಡ ಇಬ್ಬರೂ ಚಿಂತೆಯಲ್ಲಿ ಮುಳುಗಿದ್ದು, ತಲೆ ಮೇಲೆ ಕೈ ಇಟ್ಟುಕೊಂಡು ಕೂತಿದ್ದಾರೆ.

(ವರದಿ: ಮಂಜುನಾಥ್​, ನ್ಯೂಸ್​18 ಕನ್ನಡ, ಬೆಂಗಳೂರು)

ಕನ್ನಡ ಸುದ್ದಿ/ ನ್ಯೂಸ್/ಮನರಂಜನೆ/

Darshan-Pavithra: ದರ್ಶನ್​, ಪವಿತ್ರಾ ಗೌಡಕ್ಕೆ ಇದೆಂಥಾ ಸ್ಥಿತಿ ಬಂತು! ಕೋರ್ಟ್​​ನಲ್ಲಿ ‘ಮಾಫಿ ಸಾಕ್ಷಿ’ಗಳ ಆಟಕ್ಕೆ ದಾಸನ ರಿಯಾಕ್ಷನ್ ಹೇಗಿತ್ತು?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed