Last Updated:
ಕರ್ನಾಟಕದಲ್ಲಿ ಮಳೆಯ ಅಬ್ಬರ: ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳು ಭರ್ತಿ. ಹಾರಂಗಿ 94.94%, ಕಬಿನಿ 93.59%, ಆಲಮಟ್ಟಿ 90.06% ಭರ್ತಿ. ನದಿ ಪಾತ್ರದ ಜನರಿಗೆ ಎಚ್ಚರಿಕೆ.
ಬೆಂಗಳೂರು: ಕರ್ನಾಟಕದಲ್ಲಿ ಮಳೆಯ (Rain) ಅಬ್ಬರ ಮುಂದುವರಿದಿದ್ದು, ರಾಜ್ಯದ ಜೀವನಾಡಿಗಳಾದ ಪ್ರಮುಖ ಜಲಾಶಯಗಳು (Reservoirs) ಭರ್ತಿಯಾಗುವ ಹಂತ ತಲುಪಿವೆ. ಕಾವೇರಿ (Cauvery) ಮತ್ತು ಕೃಷ್ಣಾ (Krishna) ಜಲಾನಯನ ಪ್ರದೇಶಗಳಲ್ಲಿ ವರುಣ ದೇವನ ಕೃಪೆ ಮುಂದುವರಿದಿರುವುದರಿಂದ, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಕಾವೇರಿ ಕೊಳ್ಳದ ಹಾರಂಗಿ ಜಲಾಶಯವು ಶೇಕಡಾ 94.94 ರಷ್ಟು ಭರ್ತಿಯಾಗಿದ್ದು, ಗರಿಷ್ಠ ಮಟ್ಟದ ಸನಿಹದಲ್ಲಿದೆ. ಹಾಗೆಯೇ ಕಬಿನಿ ಅಣೆಕಟ್ಟು ಕೂಡ ಶೇಕಡಾ 93.59 ರಷ್ಟು ತುಂಬಿದ್ದು, ಯಾವುದೇ ಕ್ಷಣದಲ್ಲಿ ಪೂರ್ಣ ಪ್ರಮಾಣದ ಭರ್ತಿಯಾಗುವ ನಿರೀಕ್ಷೆಯಿದೆ.
ಹಾರಂಗಿ: ಶೇಕಡಾ 94.94 ಭರ್ತಿ (ಒಳಹರಿವು: 5,931 ಕ್ಯೂಸೆಕ್)
ಹೇಮಾವತಿ: ಶೇಕಡಾ 79.01 ಭರ್ತಿ (ಒಳಹರಿವು: 6,758 ಕ್ಯೂಸೆಕ್)
ಕಬಿನಿ: ಶೇಕಡಾ 93.59 ಭರ್ತಿ
ಆಲಮಟ್ಟಿ: ಶೇಕಡಾ 90.06 ಭರ್ತಿ (ಒಳಹರಿವು: 1,47,675 ಕ್ಯೂಸೆಕ್)
ತುಂಗಭದ್ರಾ: ಶೇಕಡಾ 61.27 ಭರ್ತಿ (ಒಳಹರಿವು: 60,751 ಕ್ಯೂಸೆಕ್)
ಹಿಡ್ಕಲ್: ಶೇಕಡಾ 85.54 ಭರ್ತಿ (ಒಳಹರಿವು: 21,018 ಕ್ಯೂಸೆಕ್)
ಹೀಗೆ ರಾಜ್ಯದ ಬಹುತೇಕ ಅಣೆಕಟ್ಟುಗಳಿಗೆ ಭಾರೀ ಪ್ರಮಾಣದ ನೀರು ಹರಿದುಬರುತ್ತಿರುವುದರಿಂದ ಕುಡಿಯುವ ನೀರು ಹಾಗೂ ಕೃಷಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಸಮಾಧಾನಕರ ಸಂಗತಿ ಹೊರಬಿದ್ದಿದೆ. ಮುಂಗಾರು ಮಳೆಯ ಈ ಅಬ್ಬರ ಹೀಗೆಯೇ ಮುಂದುವರಿದರೆ, ಮುಂದಿನ ಕೆಲವೇ ದಿನಗಳಲ್ಲಿ ಬಹುತೇಕ ಎಲ್ಲ ಅಣೆಕಟ್ಟುಗಳು ಕೋಡಿ ಬೀಳುವ ಸಾಧ್ಯತೆಯಿದೆ. ನದಿ ತೀರದ ಜನತೆ ಎಚ್ಚರಿಕೆಯಿಂದಿರಲು ಆಡಳಿತ ಯಂತ್ರ ಸೂಚಿಸಿದೆ.
Bangalore [Bangalore],Bangalore,Karnataka














