Actor Death: ಸ್ಯಾಂಡಲ್​ವುಡ್​ಗೆ ದೊಡ್ಡ ಆಘಾತ! ದರ್ಶನ್ ಸಿನಿಮಾದಲ್ಲಿ ನಟಿಸಿದ್ದ ಖ್ಯಾತ ಖಳನಾಯಕ ನಿಧನ | | ACTPnews

ಪ್ರದೀಪ್ ರಾಮ್ ಸಿಂಗ್ ರಾವತ್


Last Updated:

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಖಳನಾಯಕ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದ ಹಿರಿಯ ನಟ ಪ್ರದೀಪ್ ರಾಮ್ ಸಿಂಗ್ ರಾವತ್ (Pradeep Ram Singh Rawat) ನಿಧನರಾಗಿದ್ದಾರೆ.

ಪ್ರದೀಪ್ ರಾಮ್ ಸಿಂಗ್ ರಾವತ್
ಪ್ರದೀಪ್ ರಾಮ್ ಸಿಂಗ್ ರಾವತ್

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಖಳನಾಯಕ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದ ಹಿರಿಯ ನಟ ಪ್ರದೀಪ್ ರಾಮ್ ಸಿಂಗ್ ರಾವತ್ (Pradeep Ram Singh Rawat) ನಿಧನರಾಗಿದ್ದಾರೆ. 74 ವರ್ಷದ ಅವರು ವಯೋಸಹಜ ಅನಾರೋಗ್ಯ ಮತ್ತು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಹಿಂದಿ, ಕನ್ನಡ, ತಮಿಳು ಹಾಗೂ ತೆಲುಗು ಚಿತ್ರರಂಗಗಳಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಖ್ಯಾತಿ ಗಳಿಸಿದ್ದ ಅವರ ನಿಧನದ ಸುದ್ದಿ ಸಿನಿರಂಗಕ್ಕೆ ಆಘಾತ ಉಂಟುಮಾಡಿದೆ.

ಕಳೆದ ಕೆಲವು ತಿಂಗಳುಗಳಿಂದ ಪ್ರದೀಪ್ ರಾಮ್ ಸಿಂಗ್ ರಾವತ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ವಯೋಸಹಜ ಕಾಯಿಲೆಗಳ ಜೊತೆಗೆ ಕ್ಯಾನ್ಸರ್‌ಗೂ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.

ಪ್ರದೀಪ್ ರಾವತ್ ಅವರಿಗೆ ಜನಪ್ರಿಯತೆ ತಂದುಕೊಟ್ಟ ಸಿನಿಮಾಗಳಲ್ಲಿ ಗಜಿನಿ ಪ್ರಮುಖವಾಗಿದೆ. ಈ ಚಿತ್ರದಲ್ಲಿ ಅವರು ಅಭಿನಯಿಸಿದ್ದ ಖಳನಾಯಕನ ಪಾತ್ರ ಅಪಾರ ಮೆಚ್ಚುಗೆ ಪಡೆದಿತ್ತು.

ಕನ್ನಡದಲ್ಲಿ ನೆನಪಾಗುವ ಪಾತ್ರಗಳು

2007ರಲ್ಲಿ ಉಪೇಂದ್ರ ಅಭಿನಯದ ಪರೋಡಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರದೀಪ್ ರಾವತ್, ಬಳಿಕ ಗಜ ಚಿತ್ರದ ಮೂಲಕ ಕನ್ನಡ ಸಿನಿಪ್ರಿಯರ ಮನ ಗೆದ್ದರು. ಅದರ ನಂತರ ಅಭಯ್, ಬಚ್ಚನ್, ಶಿವಲಿಂಗ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed