Air India Flight: 134 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನದಲ್ಲಿ ಭಯಾನಕ ಘಟನೆ! ಬೆಚ್ಚಿ ಬಿದ್ದ ಪ್ರಯಾಣಿಕರು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Air India Flight Turbulence: ಈ ಭಯಾನಕ ಘಟನೆಯಿಂದಾಗಿ, 10 ಪ್ರಯಾಣಿಕರು ಮತ್ತು 4 ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಒಟ್ಟು 14 ಜನರು ಗಾಯಗೊಂಡಿದ್ದಾರೆ. ಏರ್ ಇಂಡಿಯಾ ಅಧಿಕೃತವಾಗಿ ಘಟನೆಯನ್ನು ದೃಢಪಡಿಸಿದ್ದು, ಈ ವಿಮಾನದಲ್ಲಿ 134 ಪ್ರಯಾಣಿಕರಿದ್ದಾರೆ ಎಂದು ವರದಿಯಾಗಿದೆ.

News18
News18

ನವದೆಹಲಿ: ಥೈಲ್ಯಾಂಡ್‌ನ ಫುಕೆಟ್‌ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ (Air India Turbulence) ಭಯಾನಕ ಘಟನೆ ನಡೆದಿದೆ.

ವಿಮಾನ ಹಾರಾಟ ನಡೆಸುತ್ತಿದ್ದಾಗಲೇ ಅತ್ಯಂತ ಭಯಾನಕ ಮತ್ತು ಆಘಾತಕಾರಿ ಘಟನೆ ನಡೆದಿದ್ದು, ಗಾಳಿಯಲ್ಲಿ ತೀವ್ರ ಪ್ರಕ್ಷುಬ್ಧತೆಯಿಂದಾಗಿ, ಈ ಏರ್ ಇಂಡಿಯಾ ವಿಮಾನವು ಹಠಾತ್ತನೆ ಸುಮಾರು 300 ಅಡಿಗಳಷ್ಟು ಕೆಳಗೆ ಕುಸಿದಿದೆ ಎಂದು ವರದಿಯಾಗಿದೆ.

ಈ ಭಯಾನಕ ಘಟನೆಯಿಂದಾಗಿ, 10 ಪ್ರಯಾಣಿಕರು ಮತ್ತು 4 ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಒಟ್ಟು 14 ಜನರು ಗಾಯಗೊಂಡಿದ್ದಾರೆ. ಏರ್ ಇಂಡಿಯಾ ಅಧಿಕೃತವಾಗಿ ಘಟನೆಯನ್ನು ದೃಢಪಡಿಸಿದ್ದು, ಈ ವಿಮಾನದಲ್ಲಿ 134 ಪ್ರಯಾಣಿಕರಿದ್ದಾರೆ ಎಂದು ವರದಿಯಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed