Last Updated:
ನಮ್ಮ ಸಿನಿಮಾರಂಗದ ಸ್ಥಿತಿ ಸರಿ ಇಲ್ಲ. ನಾನು ಸಿನಿಮಾ ಮಾಡೋದನ್ನೆ ಬಿಟ್ಟಿದ್ದೇನೆ. ರಾಮಾಯಣದಲ್ಲಿ ಏನೇನೋ ಬರುತ್ತದೆ. ಜಟಾಯು ಮೂರು ಪೀಸ್ ಆಗುತ್ತದೆ. ಇಂದಿನ ಮಕ್ಕಳಿಗೆ ಎತ್ತ ಹೋಗ್ಬೇಕು ಅಂತ ತಿಳಿಯುತ್ತಿಲ್ಲ. ಪ್ರಧಾನಿನೇ ಇವರಿಗೆ ಕ್ಷಮೆ ಕೇಳುವ ಸ್ಥಿತಿ ಬಂದಿದೆ. ಹೀಗೆ ಅನಂತ್ ನಾಗ್ ಸುಮಾರು ವಿಚಾರಗಳನ್ನ ಮಾತನಾಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಸ್ಯಾಂಡಲ್‌ವುಡ್‌ನ (Sandalwood) ಸಹಜ ನಟ ಅನಂತ್ ನಾಗ್ (Anant Nag) ಅವರು ಜೆನ್ ಜೀಗಳ ಬಗ್ಗೆ ಮಾತನಾಡಿದ್ದಾರೆ. ಪಟ್ಟಣದಲ್ಲಿ ಪೋಷಕರು ಮಾಡುವ ಮುದ್ದಿನಿಂದಲೇ ಮಕ್ಕಳು ಹೀಗೆ ಆಗಿದ್ದಾರೆ. ಹಳ್ಳಿಯಿಂದ ಬರೋ ಮಕ್ಕಳಲ್ಲಿಯ ಈ ಬುದ್ಧಿ ಇರೋದಿಲ್ಲ. ಪಟ್ಟಣ್ಣದ ಮಕ್ಕಳಿಗೆ ಏನ್ ಮಾಡ್ಬೇಕು ಅಂತಲೇ ತಿಳಿಯೋದಿಲ್ಲ. ಆ ರೀತಿ ಮನಸ್ಥಿತಿಯಲ್ಲಿಯೇ ಇದ್ದಾರೆ. ಇವರಂತೆ ನಾನು ಈಗ ಆಗ್ತಿದ್ದೇನೋ ಅನಿಸುತ್ತಿದೆ. ಈ ಮಕ್ಕಳಿಗೆ ಪ್ರಧಾನಿ ಮೋದಿ (PM Modi) ಅವರು ಕ್ಷಮೆ ಕೇಳಿದ್ದಾರೆ. ನಾನು ಆಗಿದ್ದರೆ ಕ್ಷಮೆ ಕೇಳ್ತಾನೆ ಇರಲಿಲ್ಲ. ಆದರೆ, ಮೋದಿ ಅವರು ನಿಜಕ್ಕೂ ಗ್ರೇಟ್ ಅಂತಲೇ ಅನಂತ್ ನಾಗ್ (Anant Nag) ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಹಳ್ಳಿಯ ಮಕ್ಕಳಲ್ಲಿ ಮುದ್ದು ಅನ್ನೋದು ಇರೋದಿಲ್ಲ. ತಂದೆ ಮತ್ತು ತಾಯಿ ತಮ್ಮ ಮಕ್ಕಳಿಗೆ ಎರಡು ಕೊಟ್ಟೆ ಬುದ್ಧಿ ಹೇಳುತ್ತಾರೆ.
Anant Nag: “ನಮ್ಮ ಸಿನಿಮಾರಂಗದ ಸ್ಥಿತಿ ಸರಿ ಇಲ್ಲ; 3 ವರ್ಷದ ಹಿಂದೆ ನಟಿಸೋದನ್ನ ಬಿಟ್ಟೆ”; ಅನಂತ್ ನಾಗ್!
ಆದರೆ, ಪಟ್ಟಣದ ಮಕ್ಕಳಿಗೆ ಎತ್ತ ಕಡೆಗೆ ಹೋಗ್ಬೇಕು ಅಂತ ತಿಳಿಯುತ್ತಿಲ್ಲ. ತಂದೆ-ತಾಯಿಗಳ ಅತಿಯಾ ಮುದ್ದಿನಿಂದಲೇ ಮಕ್ಕಳು ಈ ರೀತಿ ಆಗುತ್ತಿದ್ದಾರೆ.
ಪ್ರಧಾನಿ ಮೋದಿ ಅವರು ನಿಜಕ್ಕೂ ಗ್ರೇಟ್ ನೋಡಿ. ಇವರು ಈ ಮಕ್ಕಳಿಗೆ ಕ್ಷಮೆ ಕೇಳಿದರು. ಇದನ್ನ ನೋಡಿದಾಗ ನಿಜಕ್ಕೂ ಬೇಸರ ಆಯಿತು ಅಂತಲೂ ಹೇಳಿದ್ದಾರೆ.
ನಮ್ಮ ಸಿನಿಮಾರಂಗದ ಸ್ಥಿತಿ ಸರಿ ಇಲ್ಲ. ಸೆಟ್‌ಬ್ಯಾಕ್ ಆಗಿದೆ. ಆದರೆ, ಯಾವುದು ಸರಿ ಇಲ್ಲ ಅಂತ 3 ವರ್ಷದ ಹಿಂದೇನೆ ಚಿತ್ರ ಮಾಡೋದನ್ನ ಬಿಟ್ಟು ಬಿಟ್ಟಿದ್ದೇನೆ.
ಬೇರೆ ಭಾಷೆಯ ಆಫರ್ ಬಂತು. ಆದರೆ, ಸ್ಕ್ರಿಪ್ಟ್ ಬರೆಯೋರು ಇಲ್ಲ. ಒಳ್ಳೆ ಮಾತುಗಳನ್ನ ಬರೆಯೋರೂ ಇಲ್ಲ. ಎಲ್ಲ ಟೆಕ್ನಾಲಜಿಮಯವೇ ಆಗಿದೆ. ಅಂತಹ ಸ್ಥಿತಿಯಲ್ಲಿ ಸಿನಿಮಾ ಏನು ಮಾಡೋದು ಅನ್ನುವ ಅರ್ಥದಲ್ಲಿಯೇ ಅನಂತ್ ನಾಗ್ ಬೇಸರ ವ್ಯಕ್ತಪಡಿಸಿದ್ದಾರೆ.
ರಾಮಾಯಣದಲ್ಲಿ ಜಟಾಯು 3 ಪೀಸ್
ಇಂದಿನ ರಾಮಾಯಣದಲ್ಲಿ ಏನೇನೋ ಆಗುತ್ತದೆ. ಏನೇನೋ ಬರುತ್ತವೆ. ಜಟಾಯು ಮೂರು ಪೀಸ್ ಆಗುತ್ತದೆ. ಇಂತಹ ಸ್ಥಿತಿಯಲ್ಲಿ ಏನ್ ಸಿನಿಮಾ ಮಾಡೋದು ಅನ್ನುವ ಅರ್ಥದಲ್ಲೂ ಅನಂತ್ ನಾಗ್ ಸಿನಿಮಾ ಬಗ್ಗೆನೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವವಾಣಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿಯೇ ಅನಂತ್ ನಾಗ್ ಮೇಲೆ ಹೇಳಿದ ಎಲ್ಲ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಇಂದಿನ ಜನರೇಷನ್ ಮನಸ್ಥಿತಿ ಹೇಗಿದೆ? ಕನ್ನಡ ಸಿನಿಮಾಗಳ ಸ್ಥಿತಿ ಹೇಗಿದೆ? ಸಿನಿಮಾರಂಗದಿಂದ ದೂರವೇ ಉಳಿದಿರೋದು ಯಾಕೆ? ಹೀಗೆ ಸಾಕಷ್ಟು ವಿಷಯಗಳನ್ನ ಇಲ್ಲಿ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka














