Jason Sanjay: ಯಶ್ KGF ಸಿನಿಮಾ ಬಗ್ಗೆ ಸಿಎಂ ವಿಜಯ್ ಮಗ ಜೇಸನ್ ಏನಂದ್ರು? | | ACTPnews

ಯಶ್ ಕೆಜಿಎಫ್ ಬಗ್ಗೆ ಇಳಯದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್ ಹೇಳುವುದೇನು?


Last Updated:

ನಾನು ಕೆಜಿಎಫ್ ಚಿತ್ರದ ಅತಿ ದೊಡ್ಡ ಅಭಿಮಾನಿ ಆಗಿದ್ದೇನೆ. ಈ ಚಿತ್ರ ನನಗೆ ತುಂಬಾನೆ ಇಷ್ಟ ಆಗುತ್ತದೆ. ಯಾಕೆ ಅನ್ನೋದನ್ನು ಇಳಯದಳಪತಿ ವಿಜಯ್ ಪುತ್ರ ಡೈರೆಕ್ಟರ್ ಜೇಸನ್ ಸಂಜಯ್ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಯಶ್ ಕೆಜಿಎಫ್ ಬಗ್ಗೆ ಇಳಯದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್ ಹೇಳುವುದೇನು?
ಯಶ್ ಕೆಜಿಎಫ್ ಬಗ್ಗೆ ಇಳಯದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್ ಹೇಳುವುದೇನು?

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಕೆಜಿಎಫ್ ಚಿತ್ರ (KGF Movie) ಎಲ್ಲರಿಗೂ ಇಷ್ಟ ಆಗುತ್ತದೆ. ಆ್ಯಕ್ಷನ್ ಚಿತ್ರಗಳನ್ನ ಮೆಚ್ಚುವವರಿಗೆ ಇದು ಇಷ್ಟ ಆಗುತ್ತದೆ. ಇಳಯದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್ (Ilaya Thalapathy Vijay Son Jason Sanjay) ಕೂಡ ಇದನ್ನ ಮೆಚ್ಚಿಕೊಂಡಿದ್ದಾರೆ. ತಮ್ಮ ಸಿಗ್ಮಾ ಚಿತ್ರದ (Sigma Movie) ಪ್ರಚಾರದ ಹಿನ್ನೆಲೆಯಲ್ಲಿ ನಡೆದ ಸಂದರ್ಶನದಲ್ಲಿ ಕೆಜಿಎಫ್ ಚಿತ್ರವನ್ನ ಕೊಂಡಾಡಿದ್ದಾರೆ. ಇವರಿಗೆ ಕೆಜಿಎಫ್ ಯಾಕೆ ಇಷ್ಟ ಅಂತಲೇ ಒಬ್ಬ ಡೈರೆಕ್ಟರ್ ಆಗಿಯೇ ವಿಶ್ಲೇಷಣೆ ಮಾಡಿದ್ದಾರೆ. ಇವರ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ.

ಅತಿ ದೊಡ್ಡ ಅಭಿಮಾನಿ

ಇಳಯದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್ ಡೈರೆಕ್ಟರ್ ಅನ್ನೋದು ಗೊತ್ತೇ ಇದೆ. ಸಿಗ್ಮಾ ಅನ್ನುವ ಚಿತ್ರ ಕೂಡ ಮಾಡಿದ್ದಾರೆ. ಮೊನ್ನೆ ಜುಲೈ-31ಕ್ಕೆ ಈ ಚಿತ್ರ ರಿಲೀಸ್ ಕೂಡ ಆಗುವುದಿತ್ತು ನೋಡಿ.
Ilaya Thalapathy Vijay Son Jason Sanjay Huge Fan of Yash KGF Movie

ಯಶ್ ಕೆಜಿಎಫ್ ಬಗ್ಗೆ ಇಳಯದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್ ಹೇಳುವುದೇನು? (ಚಿತ್ರ ಕೃಪೆ: ಜೇಸನ್ ಸಂಜಯ್ ಇನ್‌ಸ್ಟಾಗ್ರಾಮ್)

ಈ ಚಿತ್ರದ ಪ್ರಚಾರದ ಸಂದರ್ಶನದಲ್ಲಿಯೇ ಜೇಸನ್ ಸಂಜಯ್ ಸುಮಾರು ವಿಚಾರ ಮಾತನಾಡಿದ್ದಾರೆ. ಬಿಹೈಂಡ್‌ವುಡ್ ಸಂದರ್ಶನದಲ್ಲಿ, ನಿಮಗೆ ಇಷ್ಟವಾದ ಆ್ಯಕ್ಷನ್ ಸಿನಿಮಾ ಯಾವುದು ಅಂತ ಕೇಳಿದಾಗ ಜೇಸನ್ ಉತ್ತರ ಕೊಟ್ಟಿದ್ದಾರೆ. ಕೆಜಿಎಫ್ ಚಿತ್ರ ನನಗೆ ತುಂಬಾನೆ ಇಷ್ಟ ಆಗುತ್ತದೆ. ಕೆಜಿಎಫ್ ಚಿತ್ರದ ಅತಿ ದೊಡ್ಡ ಅಭಿಮಾನಿ ನಾನು ಅಂತಲೂ ಹೇಳಿಕೊಂಡಿದ್ದಾರೆ.

ಕೆಜಿಎಫ್ ಕಾಲ್ಪನಿಕ ಕತೆ ಸಿನಿಮಾ

ಕೆಜಿಎಫ್ ಚಿತ್ರದಲ್ಲಿರೋದು ಕಾಲ್ಪನಿಕ ಕತೆನೆ ಆಗಿದೆ. ಆದರೆ, ಇದನ್ನ ಅಷ್ಟೆ ಚೆನ್ನಾಗಿಯೇ ತೋರಿಸಿದ್ದಾರೆ. ಕಡುಗಪ್ಪು ಬಣ್ಣದ ಈ ಚಿತ್ರದ ಥೀಮ್ ಚೆನ್ನಾಗಿದೆ.

ಇಡೀ ಚಿತ್ರ ತಂಡ ಇದಕ್ಕೆ ಬದ್ಧವಾಗಿಯೇ ಇದೆ. ಎಲ್ಲೂ ಯಾವುದೇ ರೀತಿಯ ಬದಲಾವಣೆ ಮಾಡಿಕೊಂಡಿಲ್ಲ. ಚಿತ್ರದ ಕೊನೆಯವರೆಗೂ ಇದನ್ನ ಮೆಂಟೇನ್ ಮಾಡಿದ್ದಾರೆ.

ಕೆಜಿಎಫ್ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್

ಕೆಜಿಎಫ್ ಚಿತ್ರದಲ್ಲಿ ಭರ್ಜರಿ ಆಕ್ಷನ್‌ಗಳಿವೆ. ನಾಯಕನಿಗೆ ಇಲ್ಲೂ ಬಿಲ್ಡಪ್ ಇದೆ. ಆದರೆ, ಇಲ್ಲಿ ಎಲ್ಲವೂ Raw ಆಗಿಯೇ ಇದೆ. ಎಲ್ಲವೂ ನೈಜವಾಗಿಯೇ ಮೂಡಿ ಬಂದಿದೆ.

Ilaya Thalapathy Vijay Son Jason Sanjay Huge Fan of Yash KGF Movie

ಹಾರ್ಡ್‌ಕೋರ್ ಆ್ಯಕ್ಷನ್ ಚಿತ್ರ ಇಷ್ಟ (ಚಿತ್ರ ಕೃಪೆ: ಜೇಸನ್ ಸಂಜಯ್ ಇನ್‌ಸ್ಟಾಗ್ರಾಮ್)

ಈ ಚಿತ್ರ ನನಗೆ ತುಂಬಾನೆ ಇಷ್ಟ ಆಗುತ್ತದೆ. ಇದರ ಅತಿ ದೊಡ್ಡ ಅಭಿಮಾನಿ ನಾನು ಅಂತಲೇ ಜೇಸನ್ ಸಂಜಯ್ ಹೇಳಿಕೊಂಡಿದ್ದಾರೆ.

ಹಾರ್ಡ್‌ಕೋರ್ ಆ್ಯಕ್ಷನ್ ಚಿತ್ರ ಇಷ್ಟ

ಜೇಸನ್ ವಿಜಯ್‌ಗೆ ಆ್ಯಕ್ಷನ್ ಚಿತ್ರಗಳು ಅಂದ್ರೆ ತುಂಬಾನೆ ಇಷ್ಟ ಆಗುತ್ತವೆ. ಅದರಲ್ಲೂ ಹಾರ್ಡ್‌ಕೋರ್ ಆ್ಯಕ್ಷನ್ ಚಿತ್ರಗಳು ಬಲು ಇಷ್ಟ ಆಗುತ್ತದೆ.

ಆಗಸ್ಟ್ ಕೊನೆಯಲ್ಲಿ ರಿಲೀಸ್

ಸಿಗ್ಮಾ ಚಿತ್ರ ಆಗಸ್ಟ್ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಆದರೆ, ಯಾವ ಡೇಟ್ ಅನ್ನುವುದು ಇನ್ನು ರಿವೀಲ್ ಆಗಿಲ್ಲ. ಇನ್ನುಳಿದಂತೆ ಜೇಸನ್ ಸಂಜಯ್ ಸದ್ಯ ಸುದ್ದಿಯಲ್ಲಿಯೇ ಇದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed