Last Updated:
ಸುಪ್ರೀಂ ಕೋರ್ಟ್ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ. ಜೂನ್ 19 ರಂದು, ಮಹತ್ವದ ತೀರ್ಪಿನಲ್ಲಿ, ಗುರುತಿಸಲಾದ ಪಾದಚಾರಿ ಮಾರ್ಗದಲ್ಲಿ ನಡೆಯುವ ಹಕ್ಕು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ನವದೆಹಲಿ: ರಸ್ತೆ ಇರುವಲ್ಲೆಲ್ಲಾ ಪಾದಚಾರಿಗಳಿಗೆ ಸರಿಯಾಗಿ ಗುರುತಿಸಲಾದ, ಅತಿಕ್ರಮಣ ಮುಕ್ತ ಸ್ಥಳವಿರುವಂತೆ ನೋಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠವು, ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನರರಾಜ್ ಅವರನ್ನು, ಜನರಿಗೆ ನಡೆಯಲು ಮೀಸಲಾದ ಜಾಗವನ್ನು ಅತಿಕ್ರಮಿಸದಂತೆ ಮತ್ತು ಮೋಟಾರು ವಾಹನಗಳ ಲೇನ್ಗಳಿಂದ ಸರಿಯಾಗಿ ಬೇರ್ಪಡಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಕೇಳಿತು.
ಪಾದಚಾರಿಗಳು ಆ ಜಾಗ ತಮಗಾಗಿಯೇ ಇದೆ ಎಂಬ ವಿಶ್ವಾಸ ಹೊಂದಿರಬೇಕು ಮತ್ತು ವಾಹನಗಳ ಚಲನೆಯ ಭಯಯಿಲ್ಲದೆ ಅವರು ಮುಕ್ತವಾಗಿ ನಡೆದಾಡಬಹುದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲು ಪೀಠವು ಹೇಳಿ, ಕೇಂದ್ರ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿತು.
ಗುರುತಿಸಲಾದ ಮಾರ್ಗಗಳಲ್ಲಿ ಮೋಟಾರು ವಾಹನಗಳಿಗಿಂತ ಈ ಹಕ್ಕು ಆದ್ಯತೆಯನ್ನು ಹೊಂದಿರುತ್ತದೆ ಮತ್ತು ಇದು ಆರ್ಟಿಕಲ್ 19 (1) (ಡಿ) ಅಡಿಯಲ್ಲಿ ಖಾತರಿಪಡಿಸಲಾದ ಚಲನೆಯ ಹಕ್ಕಿನ ಭಾಗವಾಗಿದೆ ಮತ್ತು ಆರ್ಟಿಕಲ್ 21 (ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು) ಸೇರಿದಂತೆ ಇತರ ಮೂಲಭೂತ ಹಕ್ಕುಗಳು ಇದರಲ್ಲಿ ಸೇರಿದೆ.
New Delhi,Delhi














