IPL 2026: ಚರಿತ್ರೆ ಸೃಷ್ಟಿಸಲು ಭುವಿ ರೆಡಿ! 5 ವರ್ಷಗಳಿಂದ ಸಾಧ್ಯವಾಗದ ದಾಖಲೆಯನ್ನು ಆರ್‌ಸಿಬಿ ರಣಬೇಟೆಗಾರ ಮುರಿಯುತ್ತಾರಾ? | ಕ್ರೀಡಾ ಸುದ್ದಿ | ACTPnews

ಭುವನೇಶ್ವರ ಕುಮಾರ್


Last Updated:

ಐಪಿಎಲ್ 2026 ರಲ್ಲಿ ಆರ್​​ಸಿಬಿ ವೇಗಿ ಭುವನೇಶ್ವರ ಕುಮಾರ್ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದಾರೆ. ಪ್ರಸ್ತುತ, ಆ ದಾಖಲೆಯನ್ನು ಮುರಿಯಲು ಅವರು ಒಂಬತ್ತು ವಿಕೆಟ್‌ಗಳ ದೂರದಲ್ಲಿದ್ದಾರೆ.

ಭುವನೇಶ್ವರ ಕುಮಾರ್
ಭುವನೇಶ್ವರ ಕುಮಾರ್

ಐದು ವರ್ಷಗಳ (Years) ಹಿಂದೆ ಬಹುತೇಕ ಮುರಿದುಹೋಗಿದ್ದ ಐಪಿಎಲ್ (IPL) ದಾಖಲೆ (Record) ಯನ್ನು ಈ ಬಾರಿ ಮುರಿಯಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ವೇಗದ ಬೌಲರ್ (Bowler) ಭುವನೇಶ್ವರ್ ಕುಮಾರ್ (Bhuvneshwar Kumar) ಈ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದಾರೆ. ಭುವನೇಶ್ವರ್ ಕುಮಾರ್ ಒಂದೇ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ (Wicket) ಪಡೆದ ಬೌಲರ್ ಎನಿಸಿಕೊಳ್ಳುವ ಸನಿಹದಲ್ಲಿದ್ದಾರೆ. ಐಪಿಎಲ್ 2026 ರ ಪರ್ಪಲ್ ಕ್ಯಾಪ್ (Purple cap) ರೇಸ್​​ನಲ್ಲಿ ಮುಂಚೂಣಿಯಲ್ಲಿರುವ ಭುವನೇಶ್ವರ್ ಕುಮಾರ್ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ಒಂದೇ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು 2013 ರಲ್ಲಿ ಸೃಷ್ಟಿಸಲಾಯಿತು. ಬಳಿಕ ಈ ದಾಖಲೆಯನ್ನು 2021 ರಲ್ಲಿ ಸಮಗೊಳಿಸಲಾಯಿತು. ಆದರೆ, ಯಾವ ಬೌಲರ್​ನಿಂದಲ್ಲೂ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ಈಗ ಐಪಿಎಲ್ 2026 ರಲ್ಲಿ ಅತಿಹೆಚ್ಚು ವಿಕೆಟ್‌ಗಳನ್ನು ಕಬಳಿಸಿ ಅಗ್ರಸ್ಥಾನದಲ್ಲಿರುವ ಭುವನೇಶ್ವರ್ ಕುಮಾರ್ ದಾಖಲೆಯನ್ನು ಮುರಿಯಲು ರೆಡಿಯಾಗಿದ್ದಾರೆ.

ದಾಖಲೆ ಯಾರ ಹೆಸರಿನಲ್ಲಿದೆ?

ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಡ್ವೇನ್ ಬ್ರಾವೋ ಅವರ ಹೆಸರಿನಲ್ಲಿದ್ದು, 32 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಐಪಿಎಲ್ 2013 ರಲ್ಲಿ ಸಿಎಸ್‌ಕೆ ಪರ ಆಡುವಾಗ ಬ್ರಾವೋ ಈ ಸಾಧನೆ ಮಾಡಿದ್ದಾರೆ. ಐಪಿಎಲ್ 2021 ರಲ್ಲಿ ಆರ್‌ಸಿಬಿ ಪರ ಆಡುವಾಗ ಹರ್ಷಲ್ ಪಟೇಲ್ ಬ್ರಾವೋ ಅವರ ದಾಖಲೆಯನ್ನು ಮುರಿಯುವಲ್ಲಿ ವಿಫಲರಾದರು. ಅವರು ಕೂಡ ಆ ಆವೃತ್ತಿಯಲ್ಲಿ ಕೇವಲ 32 ವಿಕೆಟ್‌ಗಳನ್ನು ಮಾತ್ರ ಉರುಳಿಸಿದರು.

ಭುವಿಗೆ ಅವಕಾಶ

ಐದು ವರ್ಷಗಳ ನಂತರ, ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬ್ರಾವೋ ಮತ್ತು ಹರ್ಷಲ್ ಪಟೇಲ್ ಜಂಟಿಯಾಗಿ ಹೊಂದಿದ್ದ ದಾಖಲೆಯನ್ನು ಈಗ ಮುರಿಯಬಹುದು. ಭುವನೇಶ್ವರ್ ಕುಮಾರ್ ಈ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಎಲ್ಲಕ್ಕಿಂತ ಉತ್ತಮವಾಗಿ, ಆರ್‌ಸಿಬಿ ಕೂಡ ಪ್ಲೇಆಫ್‌ಗೆ ತಲುಪಿದೆ. ಇದರರ್ಥ ಭುವಿಯ ಅವಕಾಶಗಳು ಹೆಚ್ಚಿವೆ.

ಭುವಿ ಬೆಂಕಿ ಪ್ರದರ್ಶನ

ಐಪಿಎಲ್ 2026 ರಲ್ಲಿ ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ 24 ವಿಕೆಟ್‌ಗಳನ್ನು ಕಬಳಿಸಿ ಪರ್ಪಲ್ ಕ್ಯಾಪ್‌ಗಾಗಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. 32 ವಿಕೆಟ್‌ಗಳ ಗಡಿಯನ್ನು ತಲುಪಲು ಭುವಿ ಇನ್ನೂ ಕನಿಷ್ಠ ಮೂರು ಪಂದ್ಯಗಳನ್ನು ಆಡಬೇಕಾಗಿದೆ. ಆರ್‌ಸಿಬಿ ಫೈನಲ್ ತಲುಪಿದರೆ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಉಳಿದಿರುತ್ತವೆ. ಈ ದಾಖಲೆಯನ್ನು ಸಾಧಿಸಲು ಅವರಿಗೆ ಈ ಪಂದ್ಯಗಳಲ್ಲಿ ಇನ್ನೂ 9 ವಿಕೆಟ್‌ಗಳು ಬೇಕಾಗಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed