Last Updated:
ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಗ್ಗೆ ನಟಿ ಸಿಮ್ರಾನ್ ಮಾತನಾಡಿದ್ದಾರೆ. ಅವರ ಜೊತೆಗೆ ಮತ್ತೆ ನಟಿಸ್ತಿರೋದು ಖುಷಿಕೊಟ್ಟಿದೆ. ಹೀಗೆ ಹೇಳಿದ ಸಿಮ್ರಾನ್, ರಜನಿಕಾಂತ್ ಅವರು ಅದೆಷ್ಟು ಸರಳ ಅನ್ನೋದನ್ನ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅವರಿಗೆ ಒಂಚೂರು ಅಹಂ ಇಲ್ವೇ ಇಲ್ಲ. ಇವರು ಜೊತೆಗೆ ನಟಿಸೋದೇ ಒಂದು ದೊಡ್ಡ ಖುಷಿ ಆಗಿದೆ. ಈ ಹಿಂದೆ ಒಂದು ಚಿತ್ರ ಮಾಡಿದ್ದೇನೆ. ಅದಾದ್ಮೇಲೆ ಈಗ ಇವರ ಜೊತೆಗೆ ಧರ್ಮನ್ ಚಿತ್ರ (Dharman Movie) ಮಾಡುತ್ತಿದ್ದೇನೆ. ಇವರು ಸೂಪರ್ ಸ್ಟಾರ್ (Super Star) ಅನ್ನೋದು ಇಲ್ವೇ ಇಲ್ಲ. ತುಂಬಾನೆ ಸರಳವಾಗಿಯೇ ಇರ್ತಾರೆ. ಹೀಗೆ ಸಿಮ್ರಾನ್ (Simran) ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಪೆಟ್ಟಾದಲ್ಲಿ ಸಿಮ್ರಾನ್ ನಟನೆ (ಚಿತ್ರ ಕೃಪೆ: ಸಿಂಪ್ಲಿ ಮಾಲಿವುಡ್ ಇನ್‌ಸ್ಟಾಗ್ರಾಮ್)
ಆದರೆ, ಈ ಚಿತ್ರದಲ್ಲಿ ಕೆಲಸ ಮಾಡಿರೋ ಅನುಭವ ಅಂತ ದೊಡ್ಡದೇನು ಅಲ್ಲ. ಒಂದು ರೀತಿ ಟೀಸರ್ ತರವೇ ಇತ್ತು. ಆದರೆ, ಇವರ ಜೊತೆಗೆ ಕೆಲಸ ಮಾಡ್ಬೇಕು ಅನ್ನೋ ಆಸೆ ತುಂಬಾನೆ ಇತ್ತು.
ರಜನಿಕಾಂತ್ ಅವರ ಜೊತೆಗೆ ನಟಿಸ್ಬೇಕು ಅನ್ನುವ ಸಿಮ್ರಾನ್ ಆಸೆ ಈಡೇರಿದೆ. ತುಂಬಾ ದಿನಗಳಿಂದಲೂ ಇದ್ದ ಈ ಆಸೆ ಈಡೇರಿದೆ.
ಧರ್ಮನ್ ಚಿತ್ರದ ವಿಚಾರಕ್ಕೆ ಬಂದರೆ, ಈ ಚಿತ್ರದಲ್ಲಿ ರಜನಿಕಾಂತ್ ಅವರು ಡಾಕ್ಟರ್ ಪಾತ್ರ ಮಾಡಿದ್ದಾರೆ. ಈ ಪಾತ್ರ ಅಷ್ಟೆ ಡೆಡ್ಲಿ ಅನ್ನೋದನ್ನು ಚಿತ್ರದ ಟ್ಯಾಗ್ ಲೈನ್ ಅಲ್ಲಿಯೇ ಹೇಳಿದ್ದಾರೆ.
ಅಶ್ವತ್ ಮಾರಿಮುತ್ತು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇವರ ಈ ಚಿತ್ರವನ್ನ ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ. ತಮ್ಮ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಮೂಲಕವೇ ಈ ಚಿತ್ರವನ್ನ ಪ್ರೊಡ್ಯೂಸರ್ ಮಾಡುತ್ತಿದ್ದಾರೆ.
ಆಸೆ ಈಡೇರಿದ ನೋಡಿ
(ಚಿತ್ರ ಕೃಪೆ: ಸಿಂಪ್ಲಿ ಮಾಲಿವುಡ್ ಇನ್‌ಸ್ಟಾಗ್ರಾಮ್)
ಧರ್ಮನ್ ಚಿತ್ರದಲ್ಲಿ ಕನ್ನಡತಿ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ರಾಶಿ ಖನ್ನಾ ಕೂಡ ಇದ್ದಾರೆ. ಇವರ ನಡುವೆ ನಟಿ ಸಿಮ್ರಾನ್ ಕೂಡ ಇದ್ದಾರೆ.
ಇವರ ಈ ಚಿತ್ರದ ಕೆಲಸ ಶುರು ಆಗಿದೆ. ಚೆನ್ನೈಯಲ್ಲಿ ಈ ಚಿತ್ರಕ್ಕೆ ಅದ್ಧೂರಿಯಾಗಿಯೇ ಮುಹೂರ್ತ ಆಗಿದೆ. ಕಮಲ್ ಹಾಸನ್ ಈ ಚಿತ್ರದ ಮುಹೂರ್ತದ ದಿನ ಆಗಮಿಸಿದ್ದರು. ರಜನಿಕಾಂತ್ ಸೇರಿದಂತೆ ಇತರ ಕಲಾವಿದರು ಈ ಸಂದರ್ಭದಲ್ಲಿ ಆಗಮಿಸಿದ್ದರು.
ಈ ಧರ್ಮನ್ ಚಿತ್ರದಲ್ಲಿ ಕಮಲ್ ಹಾಸನ್ ಕೇವಲ ಒಬ್ಬ ನಿರ್ಮಾಪಕರಾಗಿದ್ದಾರೆ. ಇವರು ಈ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ. ಈ ಒಂದು ವಿಷಯವನ್ನ ಮುಹೂರ್ತದ ಸಮಯದಲ್ಲಿ ರಜನಿಕಾಂತ್ ಅವರು ಹೇಳಿದ್ದಾರೆ.
ಇನ್ನುಳಿದಂತೆ ಈ ಚಿತ್ರದ ಶೂಟಿಂಗ್ ನಡೀತಾ ಇದೆ. ನಟಿ ಸಿಮ್ರಾನ್ ಇದೀಗ ರಜನಿಕಾಂತ್ ಅವರ ಜೊತೆಗಿನ ವರ್ಕಿಂಗ್ ಎಕ್ಸ್‌ಪೀರಿಯನ್ಸ್ ಏನು ಅನ್ನೋದನ್ನ ಹೇಳಿಕೊಂಡಿದ್ದಾರೆ. ಅದು ಎಲ್ಲರ ಗಮನ ಸೆಳೆಯುತ್ತಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka
Aug 02, 2026 12:02 PM IST














