Last Updated:
Yash Birthday : 2007ರಲ್ಲಿ ಹಿರಿತೆರೆ ಪ್ರವೇಶಿಸಿದ ನಟ ಯಶ್ 10 ವರ್ಷಗಳಲ್ಲಿ ಸೂಪರ್ ಡೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಇಂದು ಭಾರತೀಯ ಚಿತ್ರರಂಗವನ್ನಾಳುತ್ತಿರುವ ಫೇಮಸ್ ಸ್ಟಾರ್.’ಕೆಜಿಎಫ್: ಅಧ್ಯಾಯ 1′ ನಟನ ಚಿತ್ರಣವನ್ನೇ ಬದಲಿಸಿತು.
ಯಶ್ ಅವರು (Yash) ಜನುಮದಿನದ ವಿಚಾರವಾಗಿ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್ (Update) ಕೊಟ್ಟರು. ಇದೀಗ ಫ್ಯಾನ್ಸ್ ಕೂಡ ಬೇಸರ (sad) ವ್ಯಕ್ತಪಡಿಸುತ್ತಿದ್ದಾರೆ. ಆದರೆ ಹೆಚ್ಚಾಗಿ ಸದ್ದು ಮಾಡುತ್ತಿರೋದು ಯಶ್ ಪೋಸ್ಟ್ ಮಾಡಿದ ಪೋಸ್ಟರ್‌ನಲ್ಲಿ ಇರುವ ಲೋಗೋ (Logo). ಹೌದು ಈ ಲೋಗೋ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸಖತ್ ಸುದ್ದಿಯಾಗುತ್ತಿದೆ. ತರಹೇವಾರಿ ಕಮೆಂಟ್‌ಗಳು ಬರುತ್ತಿವೆ. ಹಾಗಾದ್ರೆ ಈ ಲೋಗೋ ಹಿಂದೆ ಇರೋ ಅಸಲಿ ವಿಚಾರವಾದ್ರೂ ಏನು?
ಲೋಗೋದಲ್ಲಿ ಗಂಡಭೇರುಂಡ ರೀತಿಯ ಆಕೃತಿಯೂ ಇದೆ. ಗಂಡಬೇರುಂಡ ಶಕ್ತಿಯ ಪರಾಕಾಷ್ಠೆಯ ಚಿಹ್ನೆ ಅಂದರೂ ತಪ್ಪಿಲ್ಲ. ಯಾವಾಗ ಕೆಜಿಎಫ್ ಸಿನಿಮಾ ರಿಲೀಸ್ ಆಯ್ತೋ, ಯಶ್ ಅವರ ನಟನೆಗೆ ಫಿದಾ ಆಗದೇ ಇರೋರೆ ಇಲ್ಲ. ಯಶ್ ಡೈಲಾಗ್, ಅವರ ಅಬ್ಬರ ಇಡೀ ವಿಶ್ವಾದ್ಯಂತ ಹಬ್ಬಿತ್ತು. ಹಾಗೇ ರಾಕಿ ಬಾಯ್‌ರನ್ನು ಫ್ಯಾನ್ಸ್ ಗಂಡಬೇರುಂಡ ರೀತಿಯ ಗತ್ತಿನಲ್ಲೇ ಯೋಚಿಸುತ್ತಿದ್ದಾರೆ ಎಂದೂ ಹೇಳಬಹುದು.
ಯಶ್ 2025ರ ಜನವರಿ 8ರಂದು 38ನೇ ವಸಂತಕ್ಕೆ ಕಾಲಿಡುತ್ತ ಇದ್ದಾರೆ. ಈ ಲೋಗೋದಲ್ಲಿ 38 ಕೂಡ ಕಂಡಿರುವುದು ಇನ್ನೂ ವಿಶೇಷ.

ಈ ಲೋಗೋ ನೋಡುವಾಗ (Infinity) ಚಿಹ್ನೆ ಕೂಡ ಇದೆ. ಇದರ ಅರ್ಥ ನಿರಂತರ . ಒಟ್ಟಾರೆಯಾಗಿ ಯಶ್ ಅವರ ಸಿನಿಮಾ ವಿಚಾರಗಳು ಅದೇ ಆಲೋಚನೆ ಅಲ್ಲಿ ಇದೆ ಎಂದು ತೊರಿಸುತ್ತೆ. ಯಶ್ ಅವರ ಸಾಧನೆ ಕೂಡ ನಿರಂತರ ಎಂದೇ ಹೇಳಬಹುದು. ಅವರ ಮುಂದಿನ ನಿರ್ಧಾರಗಳು, ಆಲೋಚನೆಗಳ ಉತ್ತರ ಇದು ಎಂದು ಹೇಳುಬಹದು.
ಇನ್ನು ವಿಶೇಷ ಅಂದರೆ ಲೋಗೋದಲ್ಲಿ ಇರೋ ಡ್ರ್ಯಾಗನ್ ಆಕಾರ. ಇದು ಈ ಲೋಗೋವಿನ ಸೆಂಟರ್ ಆಫ್ ಅಟ್ರ್ಯಾಕ್ಷನ್ ಎಂದರೂ ತಪ್ಪಿಲ್ಲ. ತುಂಬ ಸೂಕ್ಷ್ಮವಾಗಿ ಗಮನಿಸಿದರೆ ಡ್ರ್ಯಾಗನ್ ವಿಸ್ತರಣೆ ಆದಂತೆ ಲೋಗೋದಲ್ಲಿ ಕಂಡಿದೆ. ಪ್ರಸ್ತುತ ಯಶ್ ಕೂಡ ದೇಶ ಮಾತ್ರವಲ್ಲ ವಿದೇಶದುದಕ್ಕೂ ತಮ್ಮ ಹವಾ ಸೃಷ್ಟಿಸಿದ್ದಾರೆ. ದಿನೇ ದಿನೇ ಸೂಪರ್ ಸ್ಟಾರ್ ಆಗಿ ಬೆಳೆಯುತ್ತಿದ್ದಾರೆ. ಈಗಾಗಲೇ ಬಾಲಿವುಡ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ ಯಶ್!
ಜ್ವಾಲೆಯಂತೆ ಎಲ್ಲ ಕಡೆ ಪಸರಿಸುತ್ತಿದ್ದಾರೆ. ಮಾತ್ರವಲ್ಲ ಯಶ್ ಬಣ್ಣದ ಲೋಕದಲ್ಲಿ ಶಾಶ್ವತ ಪ್ರಾಬಲ್ಯವನ್ನು ಸಾಧಿಸುತ್ತಲೇ ಇದ್ದಾರೆ. ಒಟ್ಟಾರೆಯಾಗಿ ಯಶ್ ಅವರ ಒಟ್ಟೂ ಸಿನಿ ಜೀವನದ ಚಿತ್ರಣ, ಹಾಗೇ ಯಶ್ ಅವರ ಮುಂದಿನ ಆಲೋಚನೆ, ಗುರಿಯನ್ನು ಹೇಳುವಂತಿದೆ ಈ ಲೋಗೋ.
2007ರಲ್ಲಿ ಹಿರಿತೆರೆ ಪ್ರವೇಶಿಸಿದ ನಟ ಯಶ್ 10 ವರ್ಷಗಳಲ್ಲಿ ಸೂಪರ್ ಡೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಇಂದು ಭಾರತೀಯ ಚಿತ್ರರಂಗವನ್ನಾಳುತ್ತಿರುವ ಫೇಮಸ್ ಸ್ಟಾರ್.’ಕೆಜಿಎಫ್: ಅಧ್ಯಾಯ 1′ ನಟನ ಚಿತ್ರಣವನ್ನೇ ಬದಲಿಸಿತು. ಇದಿಗ ಟಾಕ್ಸಿಕ್ ಸಿನಿಮಾ ಮೂಲಕ ಮತ್ತೆ ಅಬ್ಬರಿಸಲು ರೆಡಿಯಾಗುತ್ತಿದ್ದಾರೆ ಯಶ್.
ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ.
ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ.
ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ.
ಹಾಗಾಗಿ ಫೆಕ್ಸ್, ಬ್ಯಾನರ್ ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ, ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ. ನಿಮ್ಮ ಪ್ರೀತಿಯ ಯಶ್ ಎಂದು ಬರೆದುಕೊಂಡಿದ್ದಾರೆ.













