ಸ್ಟ್ರಾಬೆರಿ ಹೀಗೆಲ್ಲಾ ತಿನ್ನಬೇಡಿ; ಯಾವ ಪ್ರಯೋಜನವೂ ಸಿಗಲ್ಲ! | how to eat strawberries properly Here are some tips | ಲೈಫ್‌ಸ್ಟೈಲ್ | ACTPnews

News18


Last Updated:

Strawberry: ಕೆಲ ಮಂದಿ ಸ್ಟ್ರಾಬೆರಿ ಹಣ್ಣನ್ನು ನೇರವಾಗಿ ತಿಂದರೆ ಮತ್ತೆ ಕೆಲವರು ಜ್ಯೂಸ್​ ಮಾಡಿ, ಸಿಹಿ ತಿಂಡಿಗಳಿಗೆ ಬೆರೆಸಿ ಅಥವಾ ಜೆಲ್ಲಿಗಳಂತಹ ಪದಾರ್ಥಗಳನ್ನು ತಯಾರಿಸಿ ಹೀಗೆ ನಾನಾ ರೀತಿಯಲ್ಲಿ ಈ ಹಣ್ಣನ್ನು ಸೇವಿಸುತ್ತಾ ಆನಂದಿಸುತ್ತಾರೆ. ಸಾಮಾನ್ಯವಾಗಿ ಎಲೆಗಳನ್ನು ತೆಗೆದು ನಂತರ ಸ್ಟ್ರಾಬೆರಿಗಳನ್ನು ತಿನ್ನುವುದು ಸಹಜ.

News18
News18

ಸ್ಟ್ರಾಬೆರಿ ಹಣ್ಣುಗಳು (Strawberries) ಕೊಂಚ ದುಬಾರಿಯಾದರೂ ಆರೋಗ್ಯಕ್ಕೆ (Health) ಬಹಳ ಒಳ್ಳೆಯದು. ಇದು ಅತ್ಯಂತ ಪೌಷ್ಟಿಕಾಂಶವನ್ನು ಹೊಂದಿರುವ ಹಣ್ಣಾಗಿದ್ದು, ನೋಡಲು ತಿಳಿ ಕೆಂಪು ಬಣ್ಣ ಹಾಗೂ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಈ ಹಣ್ಣನ್ನು ತಿನ್ನಲು ಯಾರು ಕೂಡ ಹಿಂಜರಿಯುವುದಿಲ್ಲ. ಎಲ್ಲರೂ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಕೆಲ ಮಂದಿ ಸ್ಟ್ರಾಬೆರಿ ಹಣ್ಣನ್ನು ನೇರವಾಗಿ ತಿಂದರೆ ಮತ್ತೆ ಕೆಲವರು ಜ್ಯೂಸ್​ (Juice) ಮಾಡಿ, ಸಿಹಿ ತಿಂಡಿಗಳಿಗೆ ಬೆರೆಸಿ ಅಥವಾ ಜೆಲ್ಲಿಗಳಂತಹ ಪದಾರ್ಥಗಳನ್ನು ತಯಾರಿಸಿ ಹೀಗೆ ನಾನಾ ರೀತಿಯಲ್ಲಿ ಈ ಹಣ್ಣನ್ನು ಸೇವಿಸುತ್ತಾ ಆನಂದಿಸುತ್ತಾರೆ. ಸಾಮಾನ್ಯವಾಗಿ ಎಲೆಗಳನ್ನು ತೆಗೆದು ನಂತರ ಸ್ಟ್ರಾಬೆರಿಗಳನ್ನು ತಿನ್ನುವುದು ಸಹಜ. ಆದರೆ ಇತ್ತೀಚೆಗೆ ಸ್ಟ್ರಾಬೆರಿಯನ್ನು ಸರಿಯಾದ ವಿಧಾನದಲ್ಲಿ ತಿನ್ನುವುದು ಹೇಗೆ ಎಂಬ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಸಾಂದರ್ಭಿಕ ಚಿತ್ರ

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಡಾ. ಕರಣ್ ರಾಜ್ ಅವರು, ಸ್ಟ್ರಾಬೆರಿಯು ಉತ್ಕರ್ಷಣ ನಿರೋಧಕಗಳು, ಪೊಟ್ಯಾಸಿಯಮ್, ಫೋಲೇಟ್ ಮತ್ತು ವಿಟಮಿನ್​ಗಳಲ್ಲಿ ಸಮೃದ್ಧವಾಗಿವೆ. ಸ್ಟ್ರಾಬೆರಿಯಲ್ಲಿ ಕಡಿಮೆ ಕ್ಯಾಲೋರಿ ಇದ್ದು, ಪ್ರತಿದಿನ ತಿನ್ನಲು ಇದೊಂದು ಉತ್ತಮ ಹಣ್ಣಾಗಿದೆ. ಜೊತೆಗೆ ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನಗಳು ಸಿಗುತ್ತದೆ. ನಾವು ಸಾಮಾನ್ಯವಾಗಿ ಸ್ಟ್ರಾಬೆರಿ ತಿನ್ನುವಾಗ ತಪ್ಪನ್ನು ಮಾಡುತ್ತೇವೆ. ಅದೇನಪ್ಪಾ ಅಂದರೆ ಸ್ಟ್ರಾಬೆರಿಗಳನ್ನು ತಿನ್ನುವ ಮುನ್ನ ಎಲೆಗಳನ್ನು ತೆಗೆದು ಹಾಕುವುದು. ಆದರೆ ಹೀಗೆ ಮಾಡಿದರೆ ಯಾವುದೇ ರೀತಿಯ ಲಾಭಗಳು ಸಿಗುವುದಿಲ್ಲ ಎಂದು ತಿಳಿಸಿದ್ದಾರೆ.

ಸ್ಟ್ರಾಬೆರಿ ತಿನ್ನುವಾಗ ಎಲೆಗಳನ್ನು ತೆಗೆದು ಹಾಕಬೇಡಿ

ಸ್ಟ್ರಾಬೆರಿ ಹಣ್ಣುಗಳನ್ನು ತಿನ್ನುವಾಗ ಅದರ ಜೊತೆಗೆ ಎಲೆಗಳನ್ನು ಸಹ ನೀವು ಅಗಿಯಬೇಕು. ಏಕೆಂದರೆ ಎಲೆಗಳು ಹಣ್ಣುಗಳಿಗಿಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತವೆ. ಸ್ಟ್ರಾಬೆರಿ ಎಲೆಗಳು ಮೆಗ್ನೀಸಿಯಮ್, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ. ಜೊತೆಗೆ ವಿಟಮಿನ್ ಸಿ ಕೂಡ ಸ್ಟ್ರಾಬೆರಿಯಲ್ಲಿ ಸಮೃದ್ಧವಾಗಿದೆ. ಆದ್ದರಿಂದ, ಹಣ್ಣುಗಳೊಂದಿಗೆ ಸ್ಟ್ರಾಬೆರಿ ಎಲೆಗಳನ್ನು ಸಹ ಜಗಿಯುವಂತೆ ವೈದ್ಯರು ಸಲಹೆ ನೀಡುತ್ತಾರೆ.

ಸಾಂದರ್ಭಿಕ ಚಿತ್ರ
ನೆಟ್ಟಿಗರ ಕಾಮೆಂಟ್

ಡಾ.ಕರಣ್ ರಾಜ್ ಅವರು ನೀಡಿರುವ ಈ ಸಲಹೆಗಳ ಬಗ್ಗೆ ಕೆಲ ಮಂದಿ ಟೀಕೆ ಸಹ ಮಾಡಿದ್ದಾರೆ. ಅದರಲ್ಲಿ ಒಂದಷ್ಟು ಜನ ಸ್ಟ್ರಾಬೆರಿ ಎಲೆಗಳಲ್ಲಿ ಕೀಟನಾಶಕಗಳು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳು ಇರಬಹುದು. ಹಾಗೇ ತಿಂದರೆ ಬೇಡದ ಸಮಸ್ಯೆಗಳು ಎದುರಾಗುವ ಅಪಾಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ನೆಟ್ಟಿಗರ ಈ ಟೀಕೆಯನ್ನು ವಿರೋಧಿಸಿದ ವೈದ್ಯರು, ಸ್ಟ್ರಾಬೆರಿ ಎಲೆಗಳನ್ನು ನೀರಿನಿಂದ ಚೆನ್ನಾಗಿ ತೊಳೆದು ತಿಂದರೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಜೊತೆಗೆ ಪ್ರಸಿದ್ಧ ಪೌಷ್ಟಿಕತಜ್ಞ ಲಿಸಾ ಮಾರ್ಲಿ ಅವರು ಸಹ, ಸ್ಟ್ರಾಬೆರಿ ಎಲೆಗಳನ್ನು ತಿನ್ನುವ ಮುನ್ನ ಅಡುಗೆ ಸೋಡಾದಿಂದ ಅವುಗಳನ್ನು ತೊಳೆಯಿರಿ ಎಂದು ಹೇಳಿದ್ದಾರೆ.

ಇದಕ್ಕಾಗಿ ಮೊದಲು ಒಂದು ಪಾತ್ರೆಯಲ್ಲಿ ಒಂದು ಲೀಟರ್ ನೀರನ್ನು ತೆಗೆದುಕೊಳ್ಳಿ. ನಂತರ ಇದಕ್ಕೆ 40 ಗ್ರಾಂ ಅಡುಗೆ ಸೋಡಾ ಮತ್ತು ಬಿಳಿ ವಿನೆಗರ್ ಸೇರಿಸಿ. ಬಳಿಕ ಇದರಲ್ಲಿ ಸ್ಟ್ರಾಬೆರಿ ಎಲೆಗಳನ್ನು ಹಾಕಿ ಸುಮಾರು 5 ನಿಮಿಷ ನೆನೆಯಲು ಬಿಟ್ಟು, ನಿಧಾನವಾಗಿ ತೊಳೆಯಿರಿ. ಹಣ್ಣುಗಳನ್ನು ಈ ರೀತಿ ಸರಿಯಾಗಿ ಶುಚಿಗೊಳಿಸುವುದರಿಂದ ಅದರಲ್ಲಿರುವ ಹಾನಿಕಾರಕ ಕೀಟಗಳು ಮತ್ತು ಕೀಟನಾಶಕಗಳನ್ನು ತೆಗೆದು ಹಾಕುತ್ತದೆ. ನಂತರ ಇವುಗಳನ್ನು ತಿನ್ನುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed