ಲೇಬಲ್ ಇಲ್ಲದ ನೂಡಲ್ಸ್, ಎಕ್ಸ್‌ಪೈರ್‌ ಡೇಟ್‌ ಮುಗಿದ ಚಿಕನ್, ಜಿರಳೆಗಳ ರಾಶಿ! ಇದು ಈ ರೆಸ್ಟೋರೆಂಟ್‌, ಬೇಕರಿಗಳ ಕರ್ಮಕಾಂಡ | Unlabeled noodles, expired chicken, and a swarm of cockroaches! This is the ritual of these restaurants and bakeries | ಲೈಫ್‌ಸ್ಟೈಲ್ | ACTPnews

ಲೇಬಲ್ ಇಲ್ಲದ ನೂಡಲ್ಸ್, ಎಕ್ಸ್‌ಪೈರ್‌ ಡೇಟ್‌ ಮುಗಿದ ಚಿಕನ್, ಜಿರಳೆಗಳ ರಾಶಿ! ಇದು ಈ ರೆಸ್ಟೋರೆಂಟ್‌, ಬೇಕರಿಗಳ ಕರ್ಮಕಾಂಡ | Unlabeled noodles, expired chicken, and a swarm of cockroaches! This is the ritual of these restaurants and bakeries | ಲೈಫ್‌ಸ್ಟೈಲ್


ಸಿಕಂದರಾಬಾದ್‌ನ ರೆಸ್ಟೋರೆಂಟ್‌, ಬೇಕರಿಗಳ ಅವ್ಯವಸ್ಥೆಯನ್ನು ಬಯಲಿಗೆಳೆದ ಅಧಿಕಾರಿಗಳು

ಸಿಕಂದರಾಬಾದ್‌ನಲ್ಲಿನ ರೆಸ್ಟೋರೆಂಟ್‌ ಒಂದರ ಕರ್ಮಕಾಂಡ ಬಯಲಾಗಿದೆ. ರೆಸ್ಟೋರೆಂಟ್‌ನಲ್ಲಿ ಕೆಜಿಗಟ್ಟಲೆ ಲೇಬಲ್ ಮಾಡದ ನೂಡಲ್ಸ್, ಎಕ್ಸ್‌ಪೈರ್‌ ಡೇಟ್‌ ಮುಗಿದ ಚಿಕನ್‌ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಬೇಕರಿಯೊಂದರಲ್ಲಿ ಎಲ್ಲೆಂದರಲ್ಲಿ ಜಿರಳೆಗಳು ಇರೋದು ಕಂಡು ಬಂದಿವೆ.

ಎಕ್ಸ್‌ಪೈರ್‌ ಡೇಟ್‌ ಮುಗಿದ ಚಿಕನ್, ಲೇಬಲ್‌ ಇರದ ನೂಡಲ್ಸ್‌ ಹೀಗೆ ಇಂಥಹ ಕೆಟ್ಟ ಪರಿಸ್ಥಿತಿ ಕಂಡುಬಂದಿದ್ದು, ಪಾರ್ಕ್‌ಲೇನ್‌ನಲ್ಲಿರುವ ಗೋಲ್ಡನ್ ಡ್ರ್ಯಾಗನ್ ರೆಸ್ಟೋರೆಂಟ್‌ನಲ್ಲಿ.

ಎಕ್ಸ್‌ಪೈರ್‌ ಡೇಟ್‌ ಮುಗಿದ ಕೆಜಿಗಟ್ಟಲೇ ಚಿಕನ್‌ ಪತ್ತೆ

ಅಧಿಕಾರಿಗಳು ಪರಿಶೀಲನೆ ವೇಳೆ, ಡಿಸೆಂಬರ್‌ 15ಕ್ಕೆ ಡೇಟ್‌ ಮುಗಿದ ಎಂಟು ಕೆಜಿ ಚಿಕನ್‌ ಮತ್ತು ಡಿಸೆಂಬರ್ 17ಕ್ಕೆ ಎಕ್ಸ್‌ಪೈರ್‌ ಡೇಟ್‌ ಮುಗಿದ 2 ಕಿಲೋ ಬೋನ್‌ಲೆಸ್ ಚಿಕನ್ ಲೆಗ್‌ಗಳನ್ನು ಪತ್ತೆ ಮಾಡಿದ್ದಾರೆ.

32 ಕೆಜಿ ಲೇಬಲ್ ಮಾಡದ ನೂಡಲ್ಸ್ ಪ್ಯಾಕೆಟ್‌ ಕಂಡುಬಂದಿದ್ದು, ಅದನ್ನು ಕೂಡ ವಶಪಡಿಸಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಫುಡ್ ಬಿಸಿನೆಸ್ ಆಪರೇಟರ್ (FBO) ನೀರಿನ ವಿಶ್ಲೇಷಣೆ ವರದಿಗಳು, ಉದ್ಯೋಗಿಗಳ ಆರೋಗ್ಯ ದಾಖಲೆಗಳು ಮತ್ತು ಉದ್ಯೋಗಿಗಳ ಪ್ರಮಾಣಪತ್ರಗಳನ್ನು ಸಹ ಒದಗಿಸಿಲ್ಲ. ಸಿಂಥೆಟಿಕ್ ಫುಡ್ ಕಲರ್‌ಗಳಿದ್ದು, ಆಹಾರ ತಯಾರಿಕೆಗೆ ಇವುಗಳನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ರೆಸ್ಟೋರೆಂಟ್‌ನಲ್ಲಿದ್ದ ರೆಫ್ರಿಜರೇಟರ್‌ಗಳು ಅನೈರ್ಮಲ್ಯದಿಂದ ಕೂಡಿದ್ದವು ಮತ್ತು ಅವುಗಳೊಳಗೆ ಇರಿಸಲಾಗಿರುವ ಆಹಾರ ಪದಾರ್ಥಗಳ ಲೇಬಲ್ ಅನ್ನು ಕಿತ್ತು ಹಾಕಲಾಗಿದೆ ಎಂದು ಅಧಿಕಾರಿಗಳ ತಂಡವು ಗಮನಿಸಿದೆ.

ಇದಲ್ಲದೆ, ಫ್ರಿಜ್‌ನಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಒಟ್ಟಿಗೆ ಸಂಗ್ರಹಿಸಲಾಗಿದೆ.

ಹೇರ್ ಕ್ಯಾಪ್, ಗ್ಲೌಸ್ ಇತ್ಯಾದಿಗಳ ಬಳಕೆ ಅಂತೂ ಇಲ್ವೇ ಇಲ್ಲ

ರೆಸ್ಟೋರೆಂಟ್‌ನಲ್ಲಿನ ಅಡುಗೆ ಮನೆ ಕ್ಲೀನ್‌ ಇಲ್ಲ, ಆಹಾರ ನಿರ್ವಹಣೆ ಮಾಡುವವರು ಅಪ್ರಾನ್, ಹೇರ್ ಕ್ಯಾಪ್, ಗ್ಲೌಸ್ ಇತ್ಯಾದಿಗಳನ್ನು ಧರಿಸಿರಲಿಲ್ಲ. ಕಿಟಕಿಗಳಿಗೆ ಕೀಟ ನಿರೋಧಕ ಪರದೆಗಳನ್ನು ಅಳವಡಿಸಿರಲಿಲ್ಲ ಎಂಬುದರ ಬಗ್ಗೆಯೂ ವರದಿ ಮಾಡಿದ್ದಾರೆ.

ಬೇಕರಿಯಲ್ಲೂ ಇದೇ ಕಥೆ..!

ಆಹಾರ ಸುರಕ್ಷತೆ ಆಯುಕ್ತರು, ಸಿಕಂದರಾಬಾದ್‌ನ ಎಂಜಿ ರಸ್ತೆಯಲ್ಲಿರುವ ಸರ್ವಿ ರೆಸ್ಟೋರೆಂಟ್ ಮತ್ತು ಬೇಕರಿಯ ಪರಿಶೀಲನೆಗೂ ಧಾವಿಸಿದ್ದರು. ಈ ವೇಳೇ ಗೋಡಂಬಿ ಬಿಸ್ಕತ್ತುಗಳು, ಉಸ್ಮಾನಿಯಾ ಬಿಸ್ಕೆಟ್‌ಗಳು, ಬೌರ್ನ್‌ವಿಟಾ ಬಿಸ್ಕೆಟ್‌ಗಳಿಗೆ ಲೇಬಲ್‌ ಮಾಡದಿರುವುದು ಗೊತ್ತಾಗಿದೆ.

ಉತ್ಪನ್ನಗಳಲ್ಲಿ ತಯಾರಿಕೆಯಂತಹ ಪ್ರಮುಖ ವಿವರಗಳು ಮತ್ತು ಉತ್ತಮ-ಪೂರ್ವ ದಿನಾಂಕಗಳ ಕೊರತೆಯನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಕೇಕ್ ತಯಾರಿಸಲು ಬಳಸುವ ಕಂಟೈನರ್‌ಗಳು ತುಕ್ಕು ಹಿಡಿದಿರುವುದನ್ನು ಕಾರ್ಯಪಡೆ ಪತ್ತೆ ಮಾಡಿದೆ.

ಚಿಲ್ಲಿಸ್ ರೆಸ್ಟೋರೆಂಟ್‌ನಲ್ಲಿ ಜಿರಳೆಗಳ ರಾಶಿ

ಈ ಎಲ್ಲಾ ಪರಿಶೀಲನೆ ಬಗ್ಗೆ ಎಕ್ಸ್‌ನಲ್ಲಿ ಟೀಮ್‌ ಪೋಸ್ಟ್‌ ಮಾಡಿದೆ. ಅದೇ ದಿನ, ಟಾಸ್ಕ್ ಫೋರ್ಸ್ ಸಿಕಂದರಾಬಾದ್ ಬಳಿಯ ಬೇಗಂಪೇಟೆಯಲ್ಲೂ ಪ್ರಮುಖ ಹೋಟೆಲ್‌ಗಳನ್ನು ಪರಿಶೀಲಿಸಿತು.

ಪ್ಯಾರಡೈಸ್ ಸರ್ಕಲ್‌ನಲ್ಲಿರುವ ಚಿಲ್ಲಿಸ್ ರೆಸ್ಟೋರೆಂಟ್‌ನಲ್ಲಿ, ಜಿರಳೆಗಳ ರಾಶಿಯನ್ನೇ ಕಂಡುಕೊಂಡಿದ್ದಾರೆ ಮತ್ತು ಯಾವುದೇ ಆಹಾರ ಪದಾರ್ಥಗಳ ಮೇಲೆ ಲೇಬಲ್‌ಗಳಿಲ್ಲದಿರುವುದು ಬೆಳಕಿಗೆ ಬಂದಿದೆ.

ಇಲ್ಲೂ ಕೂಡ ಆಹಾರ ನಿರ್ವಹಣೆ ಮಾಡುವವರು ಹೇರ್ ಕ್ಯಾಪ್, ಗ್ಲೌಸ್ ಇತ್ಯಾದಿಗಳನ್ನು ಧರಿಸದೇ ಇರುವುದು ಕಂಡುಬಂದಿದೆ. ಕೆಲವು ಸ್ಥಳಗಳಲ್ಲಿ ಆಹಾರ ತ್ಯಾಜ್ಯವನ್ನು ಹಾಕಿರುವುದು ಕಂಡುಬಂದಿದೆ.

ಈ ಎಲ್ಲಾ ಸುದ್ದಿ ನೋಡಿದರೆ, ಇಂತಹ ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಲ್ಲಿಯೇ ಮೂಲಭೂತ ಕ್ರಮಗಳನ್ನು ಅನುಸರಿಸದೇ ಹೋದರೇ ಹೇಗೆ, ಆರೋಗ್ಯದ ಕಥೆ ಏನು ಎಂಬ ಪ್ರಶ್ನೆ ಬರೋದಂತೂ ಸತ್ಯ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed